ಬೆಂಗಳೂರು:ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಬೆಂಬಲಿಗರು ಮತ್ತು ಮಾಜಿ ಸಚಿವ ಜಮೀರ್​ ಅಹ್ಮದ್ ಬೆಂಬಲಿಗರ ನಡುವೆ ಸದಾಶಿವನಗರ ಗೆಸ್ಟ್ ಹೌಸ್ ಬಳಿ ಗಲಾಟೆ ನಡೆದಿರುವುದಾಗಿ ತಿಳಿದುಬಂದಿದೆ
ಸದಾಶಿವನಗರ ಗೆಸ್ಟ್ ಹೌಸ್ ಬಳಿ ನಿಖಿಲ್​ ಕುಮಾರಸ್ವಾಮಿ ಬೆಂಬಲಿಗರು ತೆರಳಿದ್ದರು. ಇದೇ ವೇಳೆ ಜಮೀರ್ ಬೆಂಬಲಿಗರು ಕೂಡ ಗೆಸ್ಟ್ ಹೌಸ್ ಬಳಿ ಜಮಾವಣೆಗೊಂಡಿದ್ದರು. ಈ ವೇಳೆ ಇಬ್ಬರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಉಂಟಾಗಿ ಗಲಾಟೆ ನಡೆದಿದೆ.
ಗೆಸ್ಟ್ ಹೌಸ್ ವಿಚಾರಕ್ಕೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗೆಸ್ಟ್​ಹೌಸ್ ಬಳಿ ತೆರಳಿದ ನಿಖಿಲ್ ಕುಮಾರಸ್ವಾಮಿಯ ಮೂವರು ಬಾಡಿ ಗಾರ್ಡ್​ಗಳು ಗೆಸ್ಟ್ ಹೌಸ್ ನಮ್ಮದು ಎಂದು ಕೇರ್​ಟೇಕರ್​ನನ್ನು ಓಡಿಸಿದ್ದಾರೆ ಅನ್ನೋ ಆರೋಪ‌ ಕೇಳಿಬಂದಿದೆ. ಆದರೆ, ಗೆಸ್ಟ್ ಹೌಸ್ ನಮ್ಮದು ಅಂತಾ ಜಮೀರ್​ ಪಿಎ ಫಾರೂಕ್​ ಠಾಣೆಗೆ ದೌಡಾಯಿಸಿದ್ದಾರೆ.
ಸದ್ಯ ಪ್ರಕರಣ ಸದಾಶಿವನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.(ದಿಗ್ವಿಜಯ ನ್ಯೂಸ್​​)
ಚೀನಾ ಕಂಪನಿಗೆ ಕೊಕ್ ಕೊಟ್ಟ ಐಒಎ, ಭಾರತ ತಂಡಕ್ಕೆ ಹೊಸ ಪ್ರಾಯೋಜಕರು

VIDEO| ಕರ್ತವ್ಯದ ನಡುವೆಯೇ ಡುಯೆಟ್​ ಸಾಂಗ್​! ಪೊಲೀಸ್​ ಸಿಬ್ಬಂದಿಗೆ ಎದುರಾಯ್ತು ಸಂಕಷ್ಟ

ಬಾಕ್ಸಿಂಗ್​ ದಿಗ್ಗಜ ಮೊಹಮದ್​ ಅಲಿ ಅವರ ಸ್ಮರಣಾರ್ಥ ಅಭಿಮಾನಿಗಳಿಂದ ಸಿದ್ಧವಾಗಿದೆ ಕಿರುಚಿತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + six =
Remember me
