ತುಮಕೂರು:ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇಂತಹ ಸಂದರ್ಭದಲ್ಲಿ ವಾಹನ ಚಾಲಕರು ತುಂಬಾ ಜಾಗರೂಕರಾಗಿ ವಾಹನಗಳನ್ನು ಚಲಾಯಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.
ತುಮಕೂರಿನ ಪಾವಗಡದಲ್ಲಿ ಮತ್ತೊಂದು ಬಸ್​ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ರಭಸವಾಗಿ ಹರಿಯುವ ನೀರಿನಲ್ಲಿ ಖಾಸಗಿ ಬಸ್​ ಒಂದು ಸಿಲುಕಿದ ಘಟನೆ ಪಾವಗಡ ತಾಲೂಕಿನ ಹಿಂದೂಪುರ ಮಾರ್ಗ ಮಧ್ಯೆ ನಡೆದಿದೆ.
ಧಾರಾಕಾರ ಮಳೆಯಿಂದಾಗಿ ವೆಂಕಟಾಪುರ ಬಳಿಯಿರುವ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಹೀಗಿದ್ದರೂ ಜಾಗರೂಕತೆ ವಹಿಸಬೇಕಿದ್ದ ಚಾಲಕ, ಹಿಂದು-ಮುಂದು ಯೋಚಿಸಿದೆ ಸೇತುವೆ ಮೇಲೆಯೇ ಬಸ್​ ಚಲಾಯಿಸಿಕೊಂಡು ಹೋಗಿದ್ದಾನೆ. ಪರಿಣಾಮ ಬಸ್​ ಸೇತುವೆ ನಡುವೆಯೇ ಬಸ್​ ಸಿಲುಕಿತು.
ಹಿಂದೂಪುರದಿಂದ ವೆಂಕಟಾಪುರ ಮಾರ್ಗವಾಗಿ ಪಾವಗಡಕ್ಕೆ ಬಸ್​ ಬರುತ್ತಿತ್ತು. ಸೇತುವೆ ಮೇಲಿನ ನೀರಿನ ರಭಸಕ್ಕೆ ಬಸ್​ ಮುಂದೆ ಸಾಗದೆ ಅಲ್ಲಿಯೇ ನಿಂತಿತು. ಬಸ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ತುಂಬಿದ್ದರು. ವೆಂಕಟಾಪುರ ಗ್ರಾಮಸ್ಥರು ಹಗ್ಗದ ಸಹಾಯದಿಂದ ಬಸ್​ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.
ಮತ್ತೊಂದು ಖಾಸಗಿ ಬಸ್ ಸಹಾಯದಿಂದ ಸೇತುವೆ ಮೇಲೆ ಸಿಲುಕಿದ್ದ ಬಸ್‌ ಅನ್ನು ಗ್ರಾಮಸ್ಥರು ಹೊರಕ್ಕೆ ತೆಗೆದಿದ್ದಾರೆ. ಚಾಲಕ ಬಸ್​ ಚಲಾಯಿಸಿಕೊಂಡು ಇನ್ನು ಸ್ವಲ್ಪ ಮುಂದೆ ಹೋಗಿದ್ದರೆ, ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್​ ದುರಂತವೊಂದು ತಪ್ಪಿದೆ. ಹಿಂದೊಮ್ಮೆ ಪಾವಡಗದಲ್ಲಿ ಬಸ್​ ಪಲ್ಟಿಯಾಗಿ 6 ಮಂದಿ ಸ್ಥಳದಲ್ಲೇ ಮೃತಪಟ್ಟು, ಸಾಕಷ್ಟು ಜನರು ಗಂಭೀರವಾಗಿ ಗಾಯಗೊಂಡಿದ್ದರು.(ದಿಗ್ವಿಜಯ ನ್ಯೂಸ್​)
ರಷ್ಯಾ-ಯೂಕ್ರೇನ್​ ಬೆನ್ನಲ್ಲೇ ಚೀನಾ-ತೈವಾನ್​ ಯುದ್ಧ ಭೀತಿ: ತೈವಾನ್​ ಸುತ್ತ ಸೇನಾ ಚಟುವಟಿಕೆ ಆರಂಭಿಸಿದ ಚೀನಾ

ಸ್ವಾತಂತ್ರ್ಯ ಸಂಭ್ರಮಕ್ಕೆ ಉಗ್ರರ ಕರಿನೆರಳು: ಇಂಟೆಲಿಜೆನ್ಸ್​ ಬ್ಯೂರೋದಿಂದ ದೆಹಲಿ ಪೊಲೀಸರಿಗೆ ಎಚ್ಚರಿಕೆ ಸಂದೇಶ

ಅನೈತಿಕ ಸಂಬಂಧಕ್ಕೆ ಶಿಕ್ಷಕಿ ಬಲಿ: 6 ತಿಂಗಳ ಬಳಿಕ ಆರೋಪಿಗಳ ಹೆಡೆಮುರಿ ಕಟ್ಟಿದ ನಂಜನಗೂಡು ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 17 =
Remember me
