ತುಮಕೂರು:ಮತದಾನ ಮಾಡಿ ಆಯ್ಕೆ ಮಾಡಿದ ಜನಪ್ರತಿನಿಧಿಯ ಬಳಿ ಊರಿನ ಸಮಸ್ಯೆಗಳನ್ನು ಹೇಳುವುದೇ ತಪ್ಪಾ ಎನ್ನುವ ಪ್ರಶ್ನೆ ಈ ಘಟನೆ ನೋಡಿದ ಮೇಲೆ ಹುಟ್ಟಿಕೊಳ್ಳುತ್ತದೆ.
ಅಷ್ಟಕ್ಕೂ ನಡೆದಿದ್ದೇನೆಂದರೆ, ಗ್ರಾಮಕ್ಕೆ ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೇಳಿದ್ದಕ್ಕೆ ಕಾಂಗ್ರೆಸ್​ ಶಾಸಕರೊಬ್ಬರು ಯುವಕನ ಕಪಾಳಕ್ಕೆ ಬಾರಿಸಿರುವ ಅಮಾನವೀಯ ಘಟನೆ ನಡೆದಿದೆ. ಜನರ ಸೇವೆ ಮಾಡುತ್ತೇವೆ ಎಂದು ಭರವಸೆ ನೀಡಿ ವೋಟ್​ ಪಡೆದುಕೊಳ್ಳುವ ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಸಾಮಾನ್ಯ ಜನರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು.
ತುಮಕೂರು ಜಿಲ್ಲೆಯ ಪಾವಗಡ ಕ್ಷೇತ್ರದ ಕಾಂಗ್ರೆಸ್​ ಶಾಸಕ ವೆಂಕಟರವಣಪ್ಪ ಅವರು ಯುವಕನ ಮೇಲೆ ದರ್ಪ ಮೆರೆದಿದ್ದಾರೆ. ತಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಕುಡಿಯುವ ನೀರಿಲ್ಲ ಎಂದು ದೂರು ನೀಡಲು ಪಾವಗಡ ತಾಲೂಕು ಕಚೇರಿಯ ಬಳಿ ಯುವಕ ಬಂದಿದ್ದ, ಈ ವೇಳೆ ಸಮಸ್ಯೆ ಹೇಳಿಕೊಳ್ಳುವಾಗಲೇ ಶಾಸಕರು ಯುವಕನ ಕಪಾಳಕ್ಕೆ ಬಾರಿಸಿದ್ದಾರೆ.
ಕಪಾಳಕ್ಕೆ ಬಾರಿಸಿದ್ದಲ್ಲದೆ, ಬೆದರಿಕೆಯನ್ನು ಹಾಕಿದ್ದಾರೆ. ನಿನ್ನ ಪೊಲೀಸ್​ ಠಾಣೆಗೆ ಹಾಕಿಸುತ್ತೇನೆಂದು ಬೆದರಿಕೆ ಹಾಕಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.(ದಿಗ್ವಿಜಯ ನ್ಯೂಸ್​)
ಎರಡು ವರ್ಷ ಅಲೆದ್ರೂ ಸಿಗದ ಕೆಲಸ: ಟೀ ಮಾರಾಟಕ್ಕಿಳಿದ ಅರ್ಥಶಾಸ್ತ್ರ ಪದವೀಧರೆಯ ಮನಕಲಕುವ ಕತೆಯಿದು

ನಾಗಚೈತನ್ಯ 2ನೇ ಮದ್ವೆಗೆ ರೆಡಿಯಾಗಿರುವ ಸುದ್ದಿ ನಿಜವೋ? ವದಂತಿಯೋ?…ಇಲ್ಲಿದೆ ಅಸಲಿ ವಿಚಾರ

ಕೋಟಿ ಸಂಪಾದಿಸುವ ಸಮಂತಾರ ಮೊದಲ ಸಂಬಳ ಎಷ್ಟೆಂಬುದನ್ನು ತಿಳಿದ್ರೆ ನೀವು ಅಚ್ಚರಿ ಪಡ್ತೀರಾ!

Sign in to your account
Please enter an answer in digits:fourteen − 3 =
Remember me
