ಬೆಂಗಳೂರು:ಕಾನೂನುಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ಪಾಫುಲ್ಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಮತ್ತು ಅದರ ಅಂಗಸಂಸ್ಥೆಗಳು ಸೇರಿದಂತೆ ಒಟ್ಟು 8 ಸಂಘಟನೆಗಳನ್ನು ಕೇಂದ್ರ ಸರ್ಕಾರ ಇಂದು ಬ್ಯಾನ್​ ಮಾಡಿ ಆದೇಶ ಹೊರಡಿಸಿದೆ. ಹಾಗಾದರೆ, ಪಿಎಫ್​ಐಯ ಸಂಘಟನೆ ಬಗೆಗಿನ ಮುಂದಿನ ಕ್ರಮಗಳೇನು? ಉಳಿದ ಕಾರ್ಯಕರ್ತರು, ಮುಖಂಡರ ಕತೆ ಏನು? ಹೊಸಬರು ಈ ಸಂಘಟನೆಗೆ ಸೇರೋಕೆ ಅವಕಾಶ ಇದೆಯಾ? ಇಲ್ವಾ? ಸೇರಿದ್ರೆ ಅಂಥವರ ವಿರುದ್ಧ ಆಗುವ ಕ್ರಮಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಇನ್ನು ಮುಂದೆ ದೇಶದಲ್ಲಿ ಪಿಎಫ್ಐ ಸಂಘಟನೆ ಹೆಸರೂ ಹೇಳುವಾಗಿಲ್ಲ. ಪಿಎಫ್ಐ ಹೆಸರ ಹೇಳಿದ್ರೇನೆ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ) ಅಡಿಯಲ್ಲಿ ಪ್ರಕರಣ ದಾಖಲಾಗಲಿದೆ. ಹೀಗಾಗಿ ಈಗಿನಿಂದಲೇ ಯಾರೂ ಪಿಎಫ್ಐ ಹೆಸರು ಬಳಸುವಂತಿಲ್ಲ.
ಯಾವ ಹೊಸ ಕಾರ್ಯಕರ್ತರೂ ಈ ಸಂಘಟನೆಗೆ ಸೇರುವಂತಿಲ್ಲ. ಹಾಗೇನಾದ್ರು ಸಂಘಟನೆಗೆ ಸೇರುವ ಪ್ರಯತ್ನ ಮಾಡಿದ್ರೆ ಅವರ ವಿರುದ್ಧ ಯುಎಪಿಎ ಕೇಸ್ ಹಾಕಿ ತಕ್ಷನ ಬಂಧನ ಮಾಡಲಾಗುತ್ತದೆ. ಸಂಘಟನೆಯ ಉಳಿದ ಮುಖಂಡರು ಪಿಎಫ್ಐ ಹೆಸರಲ್ಲಿ ಯಾವುದೇ ಕಾರ್ಯಕ್ರಮ, ಪ್ರತಿಭಟನೆ ಹಾಗೂ ಹಣ ಸಂಗ್ರಹಣೆ ಸೇರಿದಂತೆ ಯಾವುದೇ ಚಟುವಟಿಕೆಯನ್ನೂ ಮಾಡುವಂತಿಲ್ಲ. ಪಿಎಫ್ಐ ಹೆಸರಲ್ಲಿ ಮನೆಯಲ್ಲಿ ನಾಲ್ಕು ಜನ ಸೇರಿ ಸಭೆ ಮಾಡಿದರೂ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಾಗುತ್ತದೆ.
ಪಿಎಫ್​ಐ ಬ್ಯಾನ್ ಮಾಡಿದ್ದೇಕೆ?​ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ತರಬೇತಿ ಶಿಬಿರಗಳ ಆಯೋಜನೆ, ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರ ಮನವೊಲಿಸುವುದು ಮತ್ತು ಉಗ್ರರೊಂದಿಗೆ ಸಂಪರ್ಕ ಸೇರಿದಂತೆ ಇನ್ನಿತರ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಾರಣ ನೀಡಿ ಪಿಎಫ್​ಐ ಮತ್ತು ಅದರ ಅಂಗ ಸಂಸ್ಥೆಗಳು ಸೇರಿದಂತೆ 8 ಸಂಘಟನೆಗಳನ್ನು 5 ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಬುಧವಾರ (ಸೆ. 28) ಆದೇಶ ಹೊರಡಿಸಿದೆ. ಯುಪಿಪಿಎ (ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ) ಅಡಿಯಲ್ಲಿ ಸಂಘಟನೆಗಳನ್ನು ಸರ್ಕಾರ ಬ್ಯಾನ್​ ಮಾಡಿದೆ. ಪಿಎಫ್​ಐ ಬ್ಯಾನ್​ ಮಾಡುವಂತೆ ಹಲವು ರಾಜ್ಯಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು. ಕಳೆದ ಸೆ.22ರಂದು ಪಿಎಫ್​ಐ ಮೇಲೆ ತನಿಖಾ ಸಂಸ್ಥೆಗಳು ನಡೆಸಿದ ದಾಳಿಯ ಬಳಿಕ ಬಂದ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಬ್ಯಾನ್​ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ.(ದಿಗ್ವಿಜಯ ನ್ಯೂಸ್​)
–Araga Jnanendra (@aragajnanendra)28 Sep 2022

PFIಗೆ ಬಿಗ್​ ಶಾಕ್​ ಕೊಟ್ಟ ಕೇಂದ್ರ ಸರ್ಕಾರ: ಪಿಎಫ್​ಐ ಸೇರಿ 8 ಸಂಘಟನೆಗಳ ನಿಷೇಧ

ದೇಶದಲ್ಲಿ PFI ಸಂಘಟನೆ ಬ್ಯಾನ್ ಆದ ಬೆನ್ನಲ್ಲೇ ಬೆಂಗಳೂರು ಸಿಟಿ ಪೊಲೀಸರು ಅಲರ್ಟ್: ಪ್ರತಿ ಏರಿಯಾದಲ್ಲೂ ಗಸ್ತು

ಕಾಲಿವುಡ್​ ಸೂಪರ್​ ಸ್ಟಾರ್​ ವಿಶಾಲ್​ ಮನೆಯ ಮೇಲೆ ದುಷ್ಕರ್ಮಿಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen + six =
Remember me
