ಬೆಂಗಳೂರು:ಪಿಎಫ್ಐ ಇನ್ನಿತರ ಸಂಘಟನೆಗಳ ಮೇಲೆ‌ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧ ವಿಧಿಸುವ ಮೂಲಕ ಸಮಾಜ ವಿಘಟನೆ, ದೇಶ ಅಸ್ಥಿರಗೊಳಿಸಲು ಪ್ರಯತ್ನಿಸುವ ವಿಚ್ಛಿದ್ರಕಾರಿ ಶಕ್ತಿಗಳ ಸಂಚು ಫಲಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪಿಎಫ್ಐ ನಿಷೇಧ ನಿರ್ಧಾರವನ್ನು ಸ್ವಾಗತಿಸುವೆ. ಪಕ್ಷದ ಕಾರ್ಯಕರ್ತರು ಒತ್ತಡ ಹೇರಿದ್ದರು ಎನ್ನುವ ಕಾರಣಕ್ಕೆ ಎನ್ಐಎ ಕಾರ್ಯಾಚರಣೆ ನಡೆಸಿತು. ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎನ್ನುವುದು ಸರಿಯಲ್ಲ ಎಂದು ತಳ್ಳಿಹಾಕಿದರು.
ದೇಶದ ಹಲವು ರಾಜ್ಯಗಳ ಗಲಭೆಗಳಲ್ಲಿ ಈ ಸಂಘಟನೆ ಕೈವಾಡವಿದೆ. ವಿದೇಶದಿಂದ ಅಕ್ರಮವಾಗಿ ಹಣ ತರಿಸಿಕೊಂಡಿದೆ. ಭಯೋತ್ಪಾದಕ ಸಂಘಟನೆಗಳ ಜತೆಗೆ ನಂಟು ಹೊಂದಿತ್ತು. ರಾಜಸ್ಥಾನದ ಹಲವೆಡೆ ದುಷ್ಖೃತ್ಯ‌ ಎಸಗಿದೆ.
ಮರು ತನಿಖೆ ಅಗತ್ಯಕರ್ನಾಟಕದಲ್ಲಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಈ ಸಂಘಟನೆಯು ಹಿಂದು ಕಾರ್ಯಕರ್ತರನ್ನು ವ್ಯವಸ್ಥಿತ ಸಂಚು ರೂಪಿಸಿ ಹತ್ಯೆ ಮಾಡಿತು. ಆದರೂ ಆಗಿನ ಕಾಂಗ್ರೆಸ್ ಸರ್ಕಾರ ಆ ಸಂಘಟನೆ ಕಾರ್ಯಕರ್ತರ ವಿರುದ್ಧದ ಕ್ರಿಮಿನಲ್ ಕೇಸ್​ಗಳನ್ನು ರದ್ದುಪಡಿಸಿದ್ದು, ಅವೆಲ್ಲವುಗಳ ಮರು ತನಿಖೆ ಅಗತ್ಯವಿದೆ ಎಂದು ಅರುಣ್ ಸಿಂಗ್ ಪ್ರತಿಪಾದಿಸಿದರು.
ಕಾಂಗ್ರೆಸ್ ನಡೆಸಿರುವ ಪೇಸಿಎಂ ಅಭಿಯಾನ ಅತ್ಯಂತ ಕೀಳುಮಟ್ಟದ್ದಾಗಿದ್ದು, ಕಾಮನ್ ಮ್ಯಾನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರನ್ನು ಮಾತ್ರವಲ್ಲ ರಾಜ್ಯದ ಜನಸಾಮಾನ್ಯರಿಗೂ ಅಪಮಾನಿಸುತ್ತಿದೆ ಎಂದು ಕಿಡಿಕಾರಿದರು.
PFIಗೆ ಬಿಗ್​ ಶಾಕ್​ ಕೊಟ್ಟ ಕೇಂದ್ರ ಸರ್ಕಾರ: ಪಿಎಫ್​ಐ ಸೇರಿ 8 ಸಂಘಟನೆಗಳ ನಿಷೇಧ

ದೇಶದಲ್ಲಿ PFI ಸಂಘಟನೆ ಬ್ಯಾನ್ ಆದ ಬೆನ್ನಲ್ಲೇ ಬೆಂಗಳೂರು ಸಿಟಿ ಪೊಲೀಸರು ಅಲರ್ಟ್: ಪ್ರತಿ ಏರಿಯಾದಲ್ಲೂ ಗಸ್ತು

ಪಿಎಫ್​ಐಗೆ ಮತ್ತೆ ಖಾಕಿ ಹೆಡೆಮುರಿ: 8 ರಾಜ್ಯಗಳಲ್ಲಿ 2ನೇ ಕಾರ್ಯಾಚರಣೆ, 247 ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
