ಹಾಸನ:ಇಲ್ಲಿತನಕ ಕಂಡು ಕೇಳರಿಯದ ಬಹುದೊಡ್ಡ ಆಘಾತ ಭಾರತದಲ್ಲಿ ಆಗಲಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭೀಕರ ಭವಿಷ್ಯವನ್ನು ನುಡಿದಿದ್ದಾರೆ.
ಇಂದು ಹಾಸನದ ಕೋಡಿಮಠದಲ್ಲಿ ಮಾತನಾಡಿದ ಅವರು ಮಲೆನಾಡು ಹೋಗಿ ಬಯಲಾಗುತ್ತದೆ, ಬಯಲು ಹೋಗಿ ಮಲೆನಾಡಾಗುತ್ತದೆ. ಭಾರತದಲ್ಲಿ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ಸಂಭವಿಸುತ್ತದೆ. ಇದರಿಂದ ಜಗತ್ತಿನ ಸಾಮ್ರಾಟರೆಲ್ಲರೂ ತಲ್ಲಣಗೊಳ್ಳುತ್ತಾರೆಂದು ಹೇಳಿದರು.
ಈ ವರ್ಷ ಮಳೆ, ಕಂಡಮಂಡಲ, ಮುಂಗಾರು ಚೆನ್ನಾಗಿ ಆಗುತ್ತದೆ. ಆದರೆ, ಹಿಂಗಾರು ಸ್ವಲ್ಪ ಕಡಿಮೆ ಆಗಲಿದೆ. ರಾಷ್ಟ್ರದಲ್ಲಿ ಅಶಾಂತಿ, ದೊಂಬಿ, ಮತೀಯ ಗಲಭೆ, ಸಾವು-ನೋವುಗಳು ಮತ್ತು ಕೊಲೆಗಳು ಹೆಚ್ಚಾಗಲಿವೆ. ಅದರಲ್ಲೂ ವಿಶೇಷವಾಗಿ ವಿದ್ಯುತ್​ ಅಪಾಯಗಳು ಹೆಚ್ಚು ಸಂಭವಿಸಲಿವೆ ಎಂದು ತಿಳಿಸಿದರು.
ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿನ್ನುತ್ತಾರೆ. ರಾಜಕೀಯ ವಿಪ್ಲವಗಳು, ರಾಜಕೀಯ ಗುಂಪುಗಳಾಗ್ತಾವೆ. ಬೆಂಕಿ, ಗಾಳಿ ಹಾಗೂ ಗುಡುಗು ಅಪಾಯ ಹೆಚ್ಚಾಗುತ್ತದೆ ಎನ್ನುವ ಮೂಲಕ ಭಯಾನಕ ಭವಿಷ್ಯವಾಣಿಯನ್ನು ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದಾರೆ.(ದಿಗ್ವಿಜಯ ನ್ಯೂಸ್​)
ಸಿಎಂ ಅಧಿಕೃತ ನಿವಾಸದ ಭದ್ರತಾ ಸಿಬ್ಬಂದಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣು

ಮಿದುಳಿನ ರಕ್ತನಾಳ ಛಿದ್ರಛಿದ್ರ… ಜಿಮ್​ನಲ್ಲೇ ಮೃತಪಟ್ಟ ಮಹಿಳೆಯ ಮರಣೋತ್ತರ ವರದಿಯಲ್ಲಿದೆ ಸ್ಫೋಟಕ ಮಾಹಿತಿ

ರಾಹುಲ್​ ಗಾಂಧಿ ಹೆಸರಿಗೆ ಫ್ರೀಯಾಗಿ 50 ಲಕ್ಷ ಮೌಲ್ಯದ ಆಸ್ತಿ ಬರೆದು 100 ಗ್ರಾಂ ಚಿನ್ನವನ್ನೂ ಕೊಟ್ಟ ವೃದ್ಧೆ!

Sign in to your account
Please enter an answer in digits:fourteen − twelve =
Remember me
