ಬೆಂಗಳೂರು:ಬಡ ದಲಿತರಿಗೆ ನಿಮ್ಮ ಪಕ್ಷ ಟಿಕೆಟ್ ನೀಡುವುದು ಯಾವಾಗ ಎಂದು ಕಾಂಗ್ರೆಸ್​ ನಾಯಕ ಪ್ರಿಯಾಂಕ್​ ಖರ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸುನೀಲ್​ ಕುಮಾರ್​ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಕೂ ಮಾಡುವ ಮೂಲಕ ಬಿಜೆಪಿಯನ್ನು ಪ್ರಿಯಾಂಕ್​ ಖರ್ಗೆ ತರಾಟೆಗೆ ತೆಗೆದಿಕೊಂಡಿದ್ದಾರೆ. ಅಂದು ಮನುಷ್ಯರಲ್ಲಿ ದಲಿತ, ಮೇಲ್ವರ್ಗ ಎಂದು ವಿಂಗಡಿಸಿದ್ದಿರಿ. ಈಗ ದಲಿತರಲ್ಲಿ ಸಾಮಾನ್ಯ ದಲಿತ, ಅಸಾಮಾನ್ಯ ದಲಿತ ಎಂದು ವಿಂಗಡಿಸುತ್ತಿದ್ದೀರಿ. ಎಷ್ಟಾದರೂ ವಿಂಗಡಿಸುವುದೇ ನಿಮ್ಮ ಪರಂಪರೆಯಲ್ಲವೇ? ನಾನೂ ಸಾಮಾನ್ಯನೇ, ಅಸಾಮಾನ್ಯನೆಂಬ ಯಾವ ಭ್ರಮೆಯೂ ನನಗಿಲ್ಲ. ನನ್ನ ಕುಟುಂಬವೂ ಸಾಮಾಜಿಕ ಶೋಷಣೆಯನ್ನು ಅನುಭವಿಸಿದೆ.
–ಪ್ರಿಯಾಂಕ್ ಖರ್ಗೆ (@ಪ್ರಿಯಾಂಕ್_ಖರ್ಗೆ)7 June 2022

ಒಂದೊಂದು ಕಡೆ ಒಂದೊಂದು ಸಮುದಾಯದ ಹೆಸರಿನಲ್ಲಿ ಗುರುತಿಸಿಕೊಳ್ಳುವ ತಾವೂ ಸೇರಿದಂತೆ ಸಿಎಂ ಬೊಮ್ಮಾಯಿವರೆಗೂ ಆಯಾ ಸಮುದಾಯದ ಬಡವರಿಗೆ ಕ್ಷೇತ್ರ ಬಿಟ್ಟುಕೊಟ್ಟಾಗ, ಎಲ್ಲರಿಗೂ ನೀವು ಮಾದರಿಯಾದಾಗ ನಾನೂ ನಿಮ್ಮನ್ನು ಗೌರವಿಸುತ್ತೇನೆ. ಆಗಬಹುದೇ? ಈ ಪ್ರಸ್ತಾಪವನ್ನು ನಿಮ್ಮ ಪಕ್ಷದ ಮುಂದಿಡುವ ಧೈರ್ಯವಿದೆಯೇ ಸುನೀಲ್​ ಕುಮಾರ್​ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.
–ಪ್ರಿಯಾಂಕ್ ಖರ್ಗೆ (@ಪ್ರಿಯಾಂಕ್_ಖರ್ಗೆ)7 June 2022

ನನ್ನ ಕ್ಷೇತ್ರದ ಜನತೆ ಹಾಗೂ ನನ್ನ ಪಕ್ಷ ಏನು ನಿರ್ದೇಶಿಸುತ್ತಾರೊ ಅದರಂತೆ ನಾನು ನಡೆಯುತ್ತೇನೆ. ಆದರೆ, ನಿಮ್ಮ ಪಕ್ಷದ ಗೋವಿಂದ್ ಕಾರಜೋಳ, ಅರವಿಂದ್ ಲಿಂಬಾವಳಿ, ನಾರಾಯಣಸ್ವಾಮಿ, ಪ್ರಭು ಚೌಹಾಣ್ ಹಾಗು ಇನ್ನಿತರ ದಲಿತರ ಬದಲು ಬಡ ದಲಿತರಿಗೆ ಟಿಕೆಟ್ ನೀಡುವುದು ಯಾವಾಗ? ನಿಮ್ಮ ಸಲಹೆಯಂತೆ ನಿಮ್ಮ ಪಕ್ಷ ಮಾದರಿಯಾಗಿ ಈ ನಿರ್ಣಯ ಕೈಗೊಳ್ಳಲಿ ಎಂದಿದ್ದಾರೆ.
ನಾಲ್ಕು ವರ್ಷದ ಹಿಂದೆ ಇದೇ ದಿನ ಪುನೀತ್​ ಮಾಡಿದ್ದ ಟ್ವೀಟ್​ ವೈರಲ್: ಟ್ವೀಟ್​ ನೋಡಿ ಅಭಿಮಾನಿಗಳ ಕಣ್ಣೀರು

Lays ಪ್ಯಾಕೆಟ್​ನಲ್ಲಿ ತುಂಬಿರೋ ಗಾಳಿ ಹಿಂದಿನ ರಹಸ್ಯ ಬಯಲು: ಪೆಪ್ಸಿಕೋ ಕಂಪನಿಗೆ ಬಿತ್ತು 85 ಸಾವಿರ ರೂ. ದಂಡ!

ಮನೆ ಬಾಗಿಲಿಗೆ ಆಧಾರ್ ಸೇವೆ; ಅಂಚೆ ಮೂಲಕ ಹೊಸ ಯೋಜನೆ ಜಾರಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + two =
Remember me
