ಬೆಂಗಳೂರು:ಭಾರೀ ಮಳೆಯಿಂದಾಗಿ ಕಲ್ಯಾಣ ಕರ್ನಾಟಕದಲ್ಲಿ ರೈತರು ಬೆಳೆದ ಬೆಳೆಗಳು ನಾಶವಾಗಿದ್ದು, ಜನರು ಮೂಲಭೂತ ಸೌಕರ್ಯಗಳಿಲ್ಲದೇ ಹೈರಾಣರಾಗಿದ್ದಾರೆ. ಆದರೂ ಕಲ್ಯಾಣ ಕರ್ನಾಟಕದ ಬಿಜೆಪಿ ಶಾಸಕರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
‘ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶವನ್ನು ಕರ್ನಾಟಕದ ನಕ್ಷೆಯಿಂದ ಅಳಿಸಿ ಹಾಕಿದಿಯೇ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಮಳೆ ಹಣಿಗೆಯಾಗಿರುವ ರಾಜ್ಯದ ಎಲ್ಲ ಭಾಗಗಳ ರೈತರಿಗೆ ಪರಿಹಾರ ಧನ ನೀಡುವ ರಾಜ್ಯ ಸರ್ಕಾರ ಕೇವಲ ಕಲ್ಯಾಣ ಕರ್ನಾಟಕದ ಜನರನ್ನು ಮರೆತಿರುವುದೇಕೆ? ಆ ಭಾಗಗಳಲ್ಲಿಯೂ ಭಾರಿ ಮಳೆಯಾಗುತ್ತಿದ್ದು ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ರಸ್ತೆಗಳು ಮತ್ತು ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ’ ಎಂದು ಕೂ ಮಾಡಿದ್ದಾರೆ.
‘ಇಷ್ಟೆಲ್ಲ ಅನಾನುಕೂಲ ಆಗಿದ್ದರೂ ಈ ಭಾಗದ ಜನರಿಗೆ ಒಂದು ರೂಪಾಯಿ ಸಹ ಅನುದಾನ ನೀಡಿಲ್ಲ. ಇದೆಲ್ಲವನ್ನು ಕಂಡೂ ಈ ಭಾಗದ ಬಿಜೆಪಿ ಶಾಸಕರು ಮೂಕ ಪ್ರೇಕ್ಷಕರಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಸರ್ಕಾರ ಈಗ 21 ಜಿಲ್ಲೆಗಳಿಗೆ ರಾಜ್ಯ ವಿಪತ್ತು ನಿಧಿ ಅಡಿಯಲ್ಲಿ ಒಟ್ಟು 200 ಕೋಟಿ ಪರಿಹಾರ ಅನುದಾನ ಪ್ರಕಟಿಸಿದೆ.
–ಪ್ರಿಯಾಂಕ್ ಖರ್ಗೆ (@ಪ್ರಿಯಾಂಕ್_ಖರ್ಗೆ)9 Aug 2022

ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಬಿಹಾರ ಸಿಎಂ: ಎನ್​ಡಿಎಗೆ ನಿತೀಶ್​ ವಿದಾಯ ಬಹುತೇಕ ಖಚಿತ

ಮಸೀದಿಯೊಳಗೆ ವಧು ಎಂಟ್ರಿ: ತನ್ನ ಮದುವೆಗೆ ತಾನೇ ಬಂದು ಇತಿಹಾಸ ಸೃಷ್ಟಿಸಿದ ಮದುಮಗಳು- ಪರ, ವಿರೋಧ ಚರ್ಚೆ

ಸಾಧನೆ ಮಾಡ್ಬೇಕು ಅಂತ ಮನೆ ಬಿಟ್ಟು ಹೋಗಿ ಅಡ್ಡದಾರಿ ಹಿಡಿದಿದ್ದ ಮಾರಿಮುತ್ತು ಮೊಮ್ಮಗಳ ಜೀವನ ಬದಲಾಗಿದ್ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
