ಬೆಂಗಳೂರು:ಕನ್ನಡ ಚಿತ್ರರಂಗದ ಭರವಸೆಯ ಯುವ ನಟ ಹಾಗೂ ದಿಯಾ ಸಿನಿಮಾ ಖ್ಯಾತಿ ಪೃಥ್ವಿ ಅಂಬಾರ್​ ಅವರಿಗೆ ಮಾತೃ ವಿಯೋಗವಾಗಿದೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಜಾತ ವೀರಪ್ಪ ಅಂಬಾರ್​ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ (ಜುಲೈ 15) ರಾತ್ರಿ ವಿಧಿವಶರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಕಾಸರಗೋಡಿನ ಉಪ್ಪಳ ಸಮೀಪದ ಐಲದಲ್ಲಿ ನಡೆಯಲಿದೆ.
ಸುಜಾತ ಅವರ ಪತಿ ವೀರಪ್ಪ ಅಂಬಾರ್​ ಸಂಘ ಪರಿವಾರದ ಹಿರಿಯ ಮುಖಂಡರಲ್ಲಿ ಒಬ್ಬರು. ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದ ಸುಜಾತ ಅವರು ಸಾಮಾಜಿಕ ಸೇವೆಯಲ್ಲೂ ತೊಡಗಿಕೊಂಡಿದ್ದರು. ಇದೀಗ ಸುಜಾತ ಅವರನ್ನು ಕಳೆದುಕೊಂಡ ಪೃಥ್ವಿ ಅಂಬರ್​ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ದಿಯಾ ಸಿನಿಮಾ ಮೂಲಕ ಭರವಸೆಯ ನಾಯಕ ನಟನಾಗಿ ಪೃಥ್ವಿ ಅಂಬಾರ್​ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಬೈರಾಗಿ ಮತ್ತು ಶುಗರ್​ಲೆಸ್​ ಸಿನಿಮಾ ಬಿಡುಗಡೆಯಾಗಿದೆ. ಸಾಲು ಸಾಲು ಚಿತ್ರಗಳಲ್ಲಿ ಪೃಥ್ವಿ ನಟಿಸುತ್ತಿದ್ದಾರೆ. ಇದೀಗ ತಾಯಿಯನ್ನು ಕಳೆದುಕೊಂಡಿರುವ ಪೃಥ್ವಿ ಅಂಬಾರ್​ ದುಃಖ ಸಾಗರದಲ್ಲಿ ಮುಳುಗಿದ್ದಾರೆ.
ಜನಾಕ್ರೋಶಕ್ಕೆ ಮಣಿದ ಸರ್ಕಾರ: ಸರ್ಕಾರಿ ಕಚೇರಿಗಳಲ್ಲಿ ಫೋಟೋ-ವಿಡಿಯೋ ಶೂಟಿಂಗ್​ ಬ್ಯಾನ್​ ಆದೇಶ ವಾಪಸ್​

ನಟ ರಾಘವ ಲಾರೆನ್ಸ್​ ತಲೈವಾ​​ ರಜಿನಿಕಾಂತ್​ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದು ಇದೇ ಕಾರಣಕ್ಕೆ…

ಕಾರುಗಳ ಕಳ್ಳಸಂಚಾರ, ಅಪಘಾತ ವಿಮೆ ಕ್ಲೇಮ್​​ಗೂ ಅಡ್ಡದಾರಿ: ವೈಟ್​ಬೋರ್ಡ್ ವಾಹನ ಟ್ಯಾಕ್ಸಿಯಾಗಿ ಬಳಕೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
