ಕಲಬುರಗಿ:ರಾಜ್ಯದಲ್ಲಿ 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಹೇಳಲಾದ ಸ್ಫೋಟಕ ಆಡಿಯೋ ಒಂದು ಹೊರಬಿದ್ದಿದೆ.
ನೊಂದ ಪಿಎಸ್‌ಐ ಅಭ್ಯರ್ಥಿಗಳ ವಾಟ್ಸ್​ಆ್ಯಪ್​ ಗ್ರೂಪ್‌ಗಳಲ್ಲಿ ಆಡಿಯೋ ಭಾರೀ ವೈರಲ್ ಆಗುತ್ತಿದೆ. ಆದರೆ, ಆಡಿಯೋದಲ್ಲಿ ಯಾರು ಯಾರ ಜತೆ ಸಂಭಾಷಣೆ ಮಾಡಿದ್ದಾರೆ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ತಮ್ಮ ವ್ಯಕ್ತಿಯೊಬ್ಬರು ಪಿಎಸ್‌ಐ ಆಗಬೇಕೆಂದು ಬಯಸಿದ್ದು, ಎಷ್ಟು ಹಣ ಬೇಕಾದರು ಕೊಡಲು ಸಿದ್ದರಿದಾರೆಂದು ವ್ಯಕ್ತಿಯೊಬ್ಬ ಹೇಳಿರುವುದು ಆಡಿಯೋದಲ್ಲಿದೆ.
ಆಡಿಯೋದಲ್ಲಿ ಒಳ್ಳೆ ಶ್ರೀಮಂತರು ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ, ಮತ್ತೊಬ್ಬ ವ್ಯಕ್ತಿ, ಏನೂ ಆಗೋಲ್ಲ, ಇದರಲ್ಲಿ ದೊಡ್ಡ ದೊಡ್ಡವರೇ ಶಾಮೀಲಾಗಿದ್ದಾರೆ ಎಂದು ಹೇಳಿರುವುದು ರೆಕಾರ್ಡ್​ ಆಗಿದೆ.
ಆಡಿಯೋದಲ್ಲಿ ಆ ಇಬ್ಬರ ವ್ಯಕ್ತಿಗಳ ಮೊಬೈಲ್ ಸಂಭಾಷಣೆಯ ವಿವರಣೆ ಈ ಕೆಳಕಂಡಂತಿದೆ…
ವ್ಯಕ್ತಿ-1: ನಮಸ್ಕಾರ್ರಿ ಸರ…ವ್ಯಕ್ತಿ-2: ನಮಸ್ಕಾರ್ ಪಿಎಸ್‌ಐ ಸಾಬ್ರಿಗೆ..
ವ್ಯಕ್ತಿ-1: ಹೈದ್ರಾಬಾದ್-ಕರ್ನಾಟಕದ ಪ್ರದೇಶದವರು ಕೋರ್ಟಿಗೆ ಹೋಗಿದಾರಂತೆ?ವ್ಯಕ್ತಿ-2: ವರ್ಷಾ ಇದ್ದುದ್ದೇ.. ಅದೆನ್ ಆಗಲ್ಲ..
ವ್ಯಕ್ತಿ-1: 2004 ರ ಕೆಎಎಸ್‌ನಲ್ಲಿ ಆದಂತೆ ಮತ್ತೆನಾದರೂ..ವ್ಯಕ್ತಿ-2: ಏನು ಆಗಲ್ಲ.. ಎಲ್ಲಿ ಎಲ್ಲಾ ದೊಡ್ಡವರಿದ್ದಾರೆ.. ಜಾಸ್ತಿಯಿದಾರೆ..ದೊಡ್ಡವರೇ ಶಾಮೀಲಾಗಿದಾರೆ.. ಗೌಡ್ರೆ ನಮ್ಮವರು ಒಬ್ರಿದಾರೆ.. ದುಡ್ಡು ಸಾಕಷ್ಟಿದೆ..
ವ್ಯಕ್ತಿ-1: ಈ ಸರ್ತಿ ಆಗೋಲ್ಲ, 402 ಗೆ ಹಾಕಿ.. ಬೇಗ ಆಪ್ಲಿಕೇಶನ್ ನಂಬರ್ ವಾಟ್ಸಪ್ ಮಾಡ್ಲಿಕ್ಕೆ ಹೇಳಿ, ಬೇರೆ ನಂಬರ್‌ನಿಂದ ಮಾಡಲಿ..ಸೆಂಟರ್ ಹಾಕಿಸಿಕೊಂಡು ಬರಬೇಕು..
ವ್ಯಕ್ತಿ-2: ಮುಂದಿನ ಪ್ರೋಸಿಜರ್ ಹೇಳ್ತೆನೆ, ಆಪ್ಲಿಕೇಶನ್ ನಂಬರ್‌ನಲ್ಲಿ ಹಾಕಿದ್ದ ಮೊಬೈಲ್ ನಂಬರ್ ಬಿಟ್ಟು ಬೇರೆ ನಂಬರ್‌ನಿಂದ ಆಪ್ಲಿಕೇಶನ್ ನಂಬರ್‌ನಿಂದ ಅಪ್ಲಿಕೇಶನ್ ನಂಬರ್ ಕಳುಹಿಸಲು ಹೇಳಿ..
ವ್ಯಕ್ತಿ-1: ಆಯ್ತು..
545 ಪಿಎಸ್‌ಐ ಹುದ್ದೆಗಳ ನೋಟಿಫಿಕೇಶನ್ ಮುಗಿದಿದೆ. ಮುಂದೆ 402ರಲ್ಲಿ ಮಾಡೋಣ ಎಂಬ ಮಾತುಗಳ ಜತೆಗೆ ಪರೀಕ್ಷಾ ಕೇಂದ್ರವನ್ನೆ ಮೊದಲು ಬುಕ್ ಮಾಡಲು ಅರ್ಜಿ ಸಂಖ್ಯೆಯನ್ನ ಬೇಗನೇ ಕಳುಹಿಸಿ ಎಂಬುದು ಸೇರಿ ಹಲವು ಸಂಭಾಷಣೆಗಳು ಹೊಂದಿರುವ ಸ್ಫೋಟಕ ಆಡಿಯೋ ಸದ್ಯ ಪಿಎಸ್​ಐ ಅಕ್ರಮ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಸುತ್ತಿನ ಬಿರುಗಾಳಿ ಎಬ್ಬಿಸಿದೆ.(ದಿಗ್ವಿಜಯ ನ್ಯೂಸ್​)
ಇನ್ನೆರೆಡು ದಿನದಲ್ಲಿ ಯುವತಿಯನ್ನು ಕರೆದುಕೊಂಡು ಬಾರದಿದ್ರೆ… ಪೊಲೀಸರಿಗೆ ಖಡಕ್​ ಎಚ್ಚರಿಕೆ

ಮಗು ಪಡೆಯಬೇಕೆಂಬ ಪತ್ನಿಯ ಆಸೆ ಈಡೇರಿಸಲು ಕೈದಿ ಗಂಡನಿಗೆ 15 ದಿನಗಳ ಪೆರೋಲ್​ ನೀಡಿದ ಕೋರ್ಟ್​!

2ನೇ ಮದ್ವೆಯಾದ ಸೆಲೆಬ್ರಿಟಿ IAS ಅಧಿಕಾರಿ ಟೀನಾ ಡಾಬಿ: ಕೋವಿಡ್​ ಸಂದರ್ಭದ ಭೇಟಿಗೆ ಮದುವೆಯ ಬೆಸುಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + nine =
Remember me
