ಕಲಬುರಗಿ:ಪಿಎಸ್ಐ‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯ ಬಂಧನವಾಗಿದೆ. ದಾಖಲಾತಿ ಪರಿಶೀಲನೆಗೆ ಹೋಗಿದ್ದ ಅಭ್ಯರ್ಥಿ ಸಿಐಡಿ ಅಧಿಕಾರಿಗಳಿ ಬಳಿ ಲಾಕ್ ಆಗಿದ್ದೆ ವಿಚಿತ್ರವಾಗಿದೆ.
ಸಿಐಡಿ ಅಧಿಕಾರಿಗಳಿಂದ ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಹೆದರಿಯೇ ಆರೋಪಿ ಸುನೀಲ್​ ಲಾಕ್ ಆಗಿದ್ದಾನೆ. ನೋಟಿಸ್​ ನೀಡಿದ ಹಿನ್ನೆಲೆಯಲ್ಲಿ ಮೊನ್ನೆ (ಏ.25) ಕಲಬುರಗಿ ಮೂಲದ ಸುನೀಲ್ ಬೆಂಗಳೂರಿನ ಸಿಐಡಿ ಕಚೇರಿಗೆ ಹೋಗಿದ್ದ.
ಸಿಐಡಿ ಅಧಿಕಾರಿಗಳ ಮುಂದೆ ಹಾಜಾರಾದ ವೇಳೆ ಹೆದರಿದ ಸುನೀಲ್​ ಎಲ್ಲ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಸುನೀಲ್ ಹೇಳಿಕೆಯ ಆಧಾರ ಮೇಲೆ ಸಿಐಡಿ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಎನ್​.ವಿ. ಸುನೀಲ್​ ಅಕ್ರಮದ ಕಿಂಗ್​ಪಿನ್​ ಆರ್.ಡಿ.ಪಾಟೀಲ್​ನ ಅಕ್ರಮದ ಅಭ್ಯರ್ಥಿಯಾಗಿದ್ದಾನೆ.
ಆರ್​.ಡಿ.ಪಾಟೀಲ್, ಸುನೀಲ್​ಗೆ ಬ್ಲೂಟೂತ್ ಡಿವೈಸ್​ ನೀಡಿ ಪರೀಕ್ಷೆ ಬರೆಯಿಸಿದ್ದ. ಇದಕ್ಕಾಗಿ 40 ಲಕ್ಷ ರೂ. ಹಣ ಪಡೆದುಕೊಂಡಿದ್ದ. ಬ್ಲೂಟೂತ್ ಬಳಸಿ ಎಕ್ಸಾಮ್​ನಲ್ಲಿ ಪಾಸ್ ಆಗಿರುವುದಾಗಿ ಸುನೀಲ್​ ಹೇಳಿಕೆ ನೀಡಿದ್ದಾರೆ. ಇಡಿ ಪ್ರಕರಣದಲ್ಲಿ ಇದೊಂದೆ ಅಭ್ಯರ್ಥಿ ಸಿಐಡಿಗೆ ಹೆದರಿ ಲಾಕ್ ಆಗಿರುವುದು. ಸದ್ಯ ಸುನೀಲ್ ಬಂಧನದ ಬಳಿಕ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.(ದಿಗ್ವಿಜಯ ನ್ಯೂಸ್​)
ದೇವಸ್ಥಾನದ ಪಲ್ಲಕ್ಕಿ ಉತ್ಸವ ವೇಳೆ ವಿದ್ಯುತ್​ ಶಾಕ್​: 11 ಮಂದಿ ದುರ್ಮರಣ, 15 ಜನರ ಸ್ಥಿತಿ ಗಂಭೀರ

ಪಿಎಸ್​ಐ ನೇಮಕಾತಿ ಹಗರಣ: ಅಕ್ರಮಕ್ಕೆ ಬಳಸ್ತಿದ್ದ ಬ್ಲೂಟೂತ್​ ಡಿವೈಸ್ ಕುರಿತ ಸ್ಫೋಟಕ ಮಾಹಿತಿ ಬಹಿರಂಗ

ಮಹಿಳಾ ಸೂಸೈಡ್ ಬಾಂಬರ್ ದಾಳಿಗೆ ಚೀನಿಯರು ಸೇರಿ ನಾಲ್ವರ ಸಾವು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:15 − 14 =
Remember me
