ಬೆಂಗಳೂರು:ರಾಜರಾಜೇಶ್ವರಿ ನಗರ (ಆರ್ ಆರ್ ನಗರ) ವಿಧಾನಸಭಾ ಕ್ಷೇತ್ರದ 678 ಮತಗಟ್ಟೆಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದೆ. ಇಲ್ಲಿ ಒಟ್ಟು 16 ಅಭ್ಯರ್ಥಿಗಳಿದ್ದಾರೆ. 4,62,236 ಮತದಾರರು ಇವರ ಭವಿಷ್ಯ ನಿರ್ಧರಿಸಲಿದ್ದಾರೆ. ಇಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಮುನಿರತ್ನ, ಕಾಂಗ್ರೆಸ್ ನಿಂದ ಕುಸುಮಾ ಚುನಾವಣಾ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಮತದಾನ ಹಲವೆಡೆ ಮಂದಗತಿಯಲ್ಲಿ ಸಾಗಿದ್ದು, ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಕುಟುಂಬ ಸಮೇತರಾಗಿ ಉಲ್ಲಾಳ ಮೈನ್ ರೋಡ್ ನಲ್ಲಿರುವ ಜ್ಞಾನ ಭಾರತಿ ವಾರ್ಡಿನ ಎಚ್.ಎಂ.ಆರ್ ಸ್ಕೂಲ್ ಮತಗಟ್ಟೆಯಲ್ಲಿ ಮತಚಲಾಯಿಸಿದರು. 4.6 ಲಕ್ಷ ಮತದಾರರ ಪೈಕಿ 2.41 ಲಕ್ಷ ಪುರುಷರು, 2.21 ಲಕ್ಷ ಮಹಿಳೆಯರಿದ್ದಾರೆ. 678 ಮತಗಟ್ಟೆಗಳ ಪೈಕಿ 11 ಅತಿ ಸೂಕ್ಷ್ಮ, 82 ಸೂಕ್ಷ್ಮ, 585 ಸಾಮಾನ್ಯ ಮತಗಟ್ಟೆಗಳು. ಎರಡು ಸಖಿ ಮತಗಟ್ಟೆಗಳು.
Bengaluru: Congress candidate for RR Nagar by-poll, Kusuma H cast her vote at polling centre set up in JSPU College#Karnatakapic.twitter.com/SKwTf73srz
— ANI (@ANI)November 3, 2020

ಉಪಚುನಾವಣೆ ಕಾರಣ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿದೆ. 2,563 ಭದ್ರತಾ ಸಿಬ್ಬಂದಿಯನ್ನು ಪೊಲೀಸ್ ಇಲಾಖೆ ಇದಕ್ಕಾಗಿ ನಿಯೋಜಿಸಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಭದ್ರತೆಯ ಹೊಣೆ ಹೊರಿಸಲಾಗಿದ್ದು, ಅವರ ನೆರವಿಗೆ ಇಬ್ಬರು ಡಿಸಿಪಿ, 8 ಎಸಿಪಿ, 30 ಇನ್​ಸ್ಪೆಕ್ಟರ್​, 94 ಪಿಎಸ್​ಐ, 185 ಎಎಸ್​ಐ ಗಳು ಸೇರಿ 2,563 ಸಿಬ್ಬಂದಿಯನ್ನು ಒದಗಿಸಲಾಗಿದೆ. (ದಿಗ್ವಿಜಯ ನ್ಯೂಸ್)
ಶಿರಾದಲ್ಲಿ 15 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಜನಾದೇಶ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 2 =
Remember me
