ಚಿತ್ರದುರ್ಗ:ಇಷ್ಟಲಿಂಗದ ಮಹತ್ವ ಅರಿತೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಲಿಂಗಧಾರಣೆಯನ್ನು ಪಡೆದರು. ಈ ವೇಳೆ ಅವರಿಗೆ ಬಸವಣ್ಣನವರ ಭಾವಚಿತ್ರವನ್ನು ನೀಡಲಾಯಿತು ಎಂದು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಕರ್ನಾಟಕ ಪ್ರವಾಸ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಇಂದು ಮುರುಘಾ ಮಠಕ್ಕೆ ಭೇಟಿ ನೀಡಿದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮುರುಘಾ ಶರಣರು, ಇಂದು ರಾಹುಲ್ ಸೌಜನ್ಯದ ಸಂದರ್ಶನವಾಗಿತ್ತು. ಸಂವಾದದ ವೇಳೆ ಕೆಲಪ್ರಶ್ನೆಗಳನ್ನು ಮುಂದಿಟ್ಟು ಉತ್ತರವನ್ನ ಪಡೆಯೋಕೆ ಮುಂದಾಗಿದ್ದರು. ಬಸವ ತತ್ವ ಸಿದ್ಧಾಂತಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದೆವು ಎಂದರು.

ಕಾಯಕವೇ ಕೈಲಾಸವೆಂದು ಹೇಳಿದ್ದ ಬಸವಣ್ಣನ ತತ್ವಗಳ ಬಗ್ಗೆ ಹೇಳಲಾಯ್ತು. ಸಾಮಾಜಿಕ ಸಮಾನತೆ, ನಾವೆಲ್ಲರೂ ಒಂದೇ ಎಂಬ ತತ್ವ ಬಸವಣ್ಣನವರದ್ದು ಎಂದು ಹೇಳಿದೆವು. ಇದನ್ನು ಕೇಳಿದ ಬಳಿಕ ರಾಹುಲ್​ ಗಾಂಧಿ ಮೆಚ್ಚುಗೆ ವ್ಯಕ್ತ ಪಡಿಸಿದರು ಎಂದು ಮುರುಘಾ ಶರಣರು ತಿಳಿಸಿದರು.

ಯಾವ ರೀತಿಯಾಗಿ ಪ್ರಾರ್ಥನೆ ಮತ್ತು ಭಜನೆ ಹೇಗೆ ಮಾಡಬೇಕೆಂದು ರಾಹುಲ್​ ಗಾಂಧಿ ಪ್ರಶ್ನೆ ಮಾಡಿದರು. ಈ ವೇಳೆ ಇಷ್ಟಲಿಂಗವನ್ನು ಹೇಗೆ ಪೂಜೆ ಮಾಡುತ್ತೇವೆ ಎಂದು ಹೇಳಿದೆವು. ಒಮ್ಮೆ ಪೂಜೆ ಮಾಡಿ ತೋರಿಸಬಹುದಾ ಎಂದು ಕೇಳಿದರು. ಬಳಿಕ ಲಿಂಗ ಪೂಜೆಯನ್ನು ಮಾಡಿ ತೋರಿಸಲಾಯಿತು. ಕೂಡಲೇ ಇಷ್ಟಲಿಂಗ ಪಡೆಯಬಹುದಾ ಎಂದು ಮಠಾಧೀಶರೊಬ್ಬರು ಕೇಳಿದರು. ಕೂಡಲೇ ನನಗೆ ಆಸಕ್ತಿ ಇದೆ ಎಂದು ರಾಹುಲ್​ ಹೇಳಿದರು. ತಕ್ಷಣ ಹಣೆಗೆ ವಿಭೂತಿ ಧರಿಸಿ ಲಿಂಗಧಾರಣೆ ಮಾಡಿದೆವು ಎಂದು ಮುರುಘಾ ಶರಣರು ಹೇಳಿದರು.(ದಿಗ್ವಿಜಯ ನ್ಯೂಸ್​)

ಮುರುಘಾ ಮಠಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿಗೆ ಲಿಂಗದೀಕ್ಷೆ ನೀಡಿದ ಡಾ. ಶಿವಮೂರ್ತಿ ಮುರುಘಾ ಶರಣರು

ಬೆಳಗಾವಿಯಲ್ಲಿ ರೆಡಿ, ಸೂರತ್​ನಲ್ಲಿ ಪ್ರಿಂಟ್​: ದಾವಣಗೆರೆಯಲ್ಲಿ ಮಿಂಚುತ್ತಿದೆ 3 ಕಿ.ಮೀ ಉದ್ದದ ಫೋಟೋ ಬಯೋಗ್ರಫಿ

ಸಿದ್ದರಾಮೋತ್ಸವದಲ್ಲಿ ಕೈ ಕಾರ್ಯಕರ್ತರಿಗೆ ಭರ್ಜರಿ ಭೋಜನ ವ್ಯವಸ್ಥೆ: ಹೀಗಿದೆ ನೋಡಿ ಊಟದ ಮೆನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
