ಮೈಸೂರು:ಗಾಯಗೊಂಡಿರುವ ಆನೆ ಮರಿಗೆ ಚಿಕಿತ್ಸೆ ನೀಡುವಂತೆ ಕಾಂಗ್ರೆಸ್​ ನಾಯಕ ಹಾಗೂ ಕೇರಳದ ವಯನಾಡು ಸಂಸದ ರಾಹುಲ್​ ಗಾಂಧಿ ಬರೆದಿದ್ದ ಮನವಿ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿ, ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಮರಿ ಆನೆಗೆ ಚಿಕಿತ್ಸೆ ದೊರೆತಿದೆ.
ಭಾರತ್​ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್​ ಗಾಂಧಿ ಆಯುಧ ಪೂಜೆ ಮತ್ತು ವಿಜಯದಶಮಿಯಂದು ತಮ್ಮ ಯಾತ್ರೆಗೆ ಎರಡು ದಿನಗಳ ಕಾಲ ಬ್ರೇಕ್​ ಹಾಕಿ, ವಿಶ್ರಾಂತಿ ಸಮಯದಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆ ಕಬಿನಿ ಹಿನ್ನಿರಿನಲ್ಲಿ ಸಫಾರಿಗೆ ತೆರಳಿದ್ದರು. ಈ ವೇಳೆ ತಾಯಿ ಆನೆ ಜೊತೆ ಮರಿ ಆನೆಯನ್ನು ನಿಂತಿದ್ದನ್ನು ರಾಹುಲ್​ ಗಾಂಧಿ ಗಮನಿಸಿದರು. ಅಲ್ಲದೆ, ಮರಿ ಆನೆಯ ಸೊಂಡಿಲು ಮತ್ತು ಬಾಲದಲ್ಲಿ ಗಾಯಗಳಾಗಿರುವುದನ್ನು ಗಮನಿಸಿದ ರಾಹುಲ್​, ಅದರ ಫೋಟೋ ಸೆರೆಹಿಡಿದು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ ” ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಪುಟ್ಟ ಮರಿಯೊಂದಿಗೆ ಈ ಸುಂದರ ತಾಯಿ ಆನೆ ನೋಡಿ ನನಗೆ ತುಂಬಾ ಬೇಸರವಾಯಿತು” ಎಂದು ಬರೆದುಕೊಂಡಿದ್ದಾರೆ.
A mother’s love.
I felt so sad to see this beautiful elephant with her injured little baby fighting for its life.pic.twitter.com/65yMB37fCD
— Rahul Gandhi (@RahulGandhi)October 5, 2022

ಇಷ್ಟೇ ಅಲ್ಲದೆ, ಸಿಎಂ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದು ಸೂಕ್ತ ಚಿಕಿತ್ಸೆ ನೀಡುವಂತೆ ರಾಹುಲ್​ ಗಾಂಧಿ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ, ನಿನ್ನೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದಾದ ಬೆನ್ನಲ್ಲೇ ಆನೆ ಮರಿಯನ್ನು ಸೆರೆಹಿಡಿದ ಅರಣ್ಯ ಇಲಾಖೆಯ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಗಾಯಗೊಂಡು ನರಳಾಡುತ್ತಿದ್ದ ಆನೆ ಮರಿ ಇದೀಗ ಕೊಂಚ ನಿರಾಳವಾಗಿದೆ.(ದಿಗ್ವಿಜಯ ನ್ಯೂಸ್​)

ಪೆಟ್ರೋಲ್, ಡೀಸೆಲ್ ದರ ಇಳಿಕೆ ಸದ್ಯಕ್ಕಿಲ್ಲ; ಇನ್ನಷ್ಟು ತಿಂಗಳು ಬೆಲೆ ಯಥಾಸ್ಥಿತಿ ಮುಂದುವರಿಕೆ ಸಾಧ್ಯತೆ

ವಾಹನದ ಗಾತ್ರ, ದೂರ ಆಧರಿಸಿ ಹೆದ್ದಾರಿ ಟೋಲ್; ಕೇಂದ್ರದಿಂದ ಹೊಸ ನೀತಿ ಜಾರಿಗೆ ಚಿಂತನೆ

ಸಕ್ಕರೆನಾಡಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ; ಭಾರತ್ ಜೋಡೋ ಯಾತ್ರೆಯಲ್ಲಿ ಜನಸಾಗರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × three =
Remember me
