ರಾಯಚೂರು:ಇಲ್ಲಿನ ಸಹಾಯಕ ಕೃಷಿ ನಿರ್ದೇಶಕಿಯ ಅಧಿಕಾರದ ದರ್ಪಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಸ್ತು ಹೊಡೆದಿದ್ದಾರೆ. ಅಧಿಕಾರಿಯ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಿಂಧನೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಪ್ರಿಯಾಂಕಾ ಎಸ್​ ಅವರ ಶಿಷ್ಟಾಚಾರಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಸತ್ತಿದ್ದಾರೆ. ಕಚೇರಿ ಎಂಟ್ರಿಯಿಂದಲೇ ಪ್ರಿಯಾಂಕಾ ಅವರ ಶಿಷ್ಟಾಚಾರಗಳು ಶುರುವಾಗುತ್ತದೆ. ಇಡೀ ದಿನ ಅವರ ಶಿಷ್ಟಾಚಾರ ಪಾಲಿಸಲು ಆಗದೇ ಸಿಬ್ಬಂದಿ ಹೈರಾಣಾಗಿದ್ದಾರೆ.
ಕಚೇರಿ ಗೇಟ್​ನಲ್ಲಿ ಹಾರ್ನ್ ಹಾಕಿ ತಮ್ಮ ಹಾಜರಿಯನ್ನು ಪ್ರಿಯಾಂಕಾ ಖಾತ್ರಿ ಪಡಿಸಿಕೊಳ್ಳತ್ತಾರೆ. ಹಾರ್ನ್ ಕೇಳಿದ ತಕ್ಷಣವೇ ಗುಮಾಸ್ತ ಹಾಗೂ ಸಿಬ್ಬಂದಿ ಕಾರಿನ ಬಾಗಿಲು ತೆರೆಯಲೇಬೇಕು. ಬಾಗಿಲು ತೆರೆದ ಬಳಿಕವೇ ಮೇಡಂ ಕೆಳಗೆ ಇಳಿಯುತ್ತಾರೆ. ಒಂದು ವೇಳೆ ಬಾಗಿಲು ತೆರೆಯುವಲ್ಲಿ ತಡವಾದರೆ, ಮೇಡಂ ಸ್ಥಳದಲ್ಲೇ ಆವಾಜ್ ಹಾಕುತ್ತಾರೆ ಎಂಬ ಆರೋಪ ಪ್ರಿಯಾಂಕಾ ವಿರುದ್ಧ ಕೇಳಿಬಂದಿದೆ.
ಅವಾಜ್ ಹಾಕೋದಷ್ಟೇ ಅಲ್ಲದೇ ಬಾಗಿಲು ತೆಗೆಯೋವರೆಗೂ ಪ್ರಿಯಾಂಕಾ ಕೆಳಗೆ ಇಳಿಯೋದಿಲ್ಲವಂತೆ. ದಿನನಿತ್ಯ ಕೃಷಿ ಇಲಾಖೆಯಲ್ಲಿ ಈ ನಿಯಮವನ್ನು ಪ್ರಿಯಾಂಕಾ ಅವರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದರಂತೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ತೋರದ ದರ್ಪವನ್ನು ಈ‌ ಮೇಡಂ ಮಾತ್ರ ತೋರುತ್ತಿದ್ದಾರೆ ಎಂಬುದು ಹಲವರ ಆರೋಪವಾಗಿದೆ.
ಕೃಷಿ ಇಲಾಖೆಯಲ್ಲಿ ದರ್ಪ ಮೇರೆಯುವ ಹಾರ್ನ್ ಲೇಡಿ ಪ್ರಿಯಾಂಕಾ ಎಸ್, ಈ ಹಿಂದೆ ದೇವದುರ್ಗ ತಾಲೂಕಿನಲ್ಲಿದ್ದಾಗಲೂ ಇದೇ ಶಿಷ್ಟಾಚಾರ ಪಾಲಿಸುತ್ತಿದ್ದರಂತೆ. ಸದ್ಯ ಸಿಂಧನೂರು ತಾಲೂಕಿನಲ್ಲಿ ತನ್ನ ಶಿಷ್ಟಾಚಾರವನ್ನು ಮುಂದುವರಿಸಿದ್ದಾರೆ. ಪ್ರಿಯಾಂಕಾ ಅವರ ದರ್ಪಕ್ಕೆ ಡ್ರೈವರ್, ಪಿವನ್​ಗಳು ಸುಸ್ತೋ ಸುಸ್ತು ಎನ್ನುವಂತಾಗಿದೆ. ಸದ್ಯ ಪ್ರಿಯಾಂಕ ಮೇಡಂ ದರ್ಪದ ವಿಡಿಯೋ ವೈರಲ್ ಆಗಿದೆ.(ದಿಗ್ವಿಜಯ ನ್ಯೂಸ್​)
ಸೋನಾಲಿ ಸಾವಿನ ಪ್ರಕರಣದಲ್ಲಿ ಇಬ್ಬರ ಆಪ್ತರ ಬಂಧನ: ಮರಣೋತ್ತರ ವರ ಪರೀಕ್ಷೆಯಲ್ಲಿ ಆಘಾತಕಾರಿ ಅಂಶ ಬಯಲು

ರೈತರಿಗೆ ಒತ್ತುವರಿ ರಿಲೀಫ್: ಕ್ರಿಮಿನಲ್ ಕೇಸ್ ದಾಖಲಿಸದಂತೆ ಕಾಯ್ದೆ ತಿದ್ದುಪಡಿ, ಸಂಪುಟ ನಿರ್ಧಾರ

ಬಾಲಿವುಡ್​ನ ನಂಬರ್ 1 ನಟ ಯಶ್; ಕರಣ್ ಜೋಹರ್ ಪ್ರಶ್ನೆಗೆ ಶಾಹಿದ್ ಉತ್ತರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + 19 =
Remember me
