ರಾಯಚೂರು:ಶಾಸಕ ರಾಜೂಗೌಡ ಹೆಸರೇಳಿ ಜನರನ್ನು ವಂಚಿಸಿದ್ದ ನಯವಂಚಕಿ ರೇಖಾ ಎಂಬಾಕೆಯ ಬಂಧನವಾಗಿದೆ. ರೇಖಾ ವಂಚನೆಯ ಬಗ್ಗೆ ಇದೇ ಮೇ 10 ರಂದು ದಿಗ್ವಿಜಯ ನ್ಯೂಸ್ ವಿಸ್ತೃತ ವರದಿ ಬಿತ್ತರಿಸಿತ್ತು. ಇದರ ಪರಿಣಾಮವಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎನ್​​ಜಿಓ ಮೂಲಕ ಬ್ಯಾಂಕ್ ಓಪನ್ ಮಾಡಿ ಬ್ಯಾಂಕಿನಲ್ಲಿ ನೌಕರಿ ಕೊಡಿಸುವುದಾಗಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ರೇಖಾ ಮೋಸ ಮಾಡಿದ್ದಾಳೆ. ತನ್ನ ಕೃತ್ಯಕ್ಕೆ ಶಾಸಕ ರಾಜೂಗೌಡ ಹೆಸರನ್ನು ಬಳಸಿಕೊಂಡಿದ್ದಳು. ಈ ಬಗ್ಗೆ ದಿಗ್ವಿಜಯ ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜೂಗೌಡ, ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೀಗ ಸಕಲೇಶಪುರ ಮೂಲದ ರೇಖಾಳನ್ನು ಬಂಧಿಸಿ ಸುರಪುರ ಪೊಲೀಸರು ಕರೆತಂದಿದ್ದಾರೆ. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ರೇಖಾ ವಾಸವಿದ್ದಳು. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಳು. ರೇಖಾಗೆ ಈರಪ್ಪಗೌಡ ಎಂಬುವವನು ಮಧ್ಯವರ್ತಿಯಾಗಿದ್ದ. ಈತ ಕೆ.ಆರ್.ಪುರಂನಲ್ಲಿ ಬೇಕರಿ ಇಟ್ಟುಕೊಂಡಿದ್ದ. ಈರಪ್ಪಗೌಡನ ಮೂಲಕ ರೇಖಾ ಹಣ ದೋಚುತ್ತಿದ್ದಳು. ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಯ ಹಲವರಿಗೆ ಮೋಸ ಮಾಡಿದ್ದಾರೆ.
ಸುರಪುರ ಪಿಐ ಸುನೀಲ್ ಮೂಲಿಮನಿ, ಸೈಬರ್ ಕ್ರೈಂ ಪಿಐ ಬಾಪುಗೌಡ ಪಾಟೀಲ್ ನೇತೃತ್ವದಲ್ಲಿ ರೇಖಾಳ ಬಂಧನವಾಗಿದ್ದು, ಸುರಪುರಕ್ಕೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಗೃಹ ಬಳಕೆಯ LPG ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

ಮೈ ಮೇಲಿದ್ದ ಚಿನ್ನವೇ ಚೇತನಾಗೆ ಮುಳುವಾಯ್ತಾ? ಪಾಲಕರ ಮಾತು ಕೇಳಿದಿದ್ರೆ ಖಂಡಿತ ಪ್ರಾಣ ಉಳಿಯುತ್ತಿತ್ತು!

ಟ್ಯಾಕ್ಸಿ ಸೇವೆಯಲ್ಲಿ ಲೂಟಿ!: ಸರ್ಕಾರ ನಿಗದಿಪಡಿಸಿದ ದರಕ್ಕಿಂತ 3 ಪಟ್ಟು ಹೆಚ್ಚು ವಸೂಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 10 =
Remember me
