ರಾಯಚೂರು:ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪಕ್ಷಗಳು ಚುನಾವಣಾ ರಣತಂತ್ರಗಳನ್ನು ರೂಪಿಸುವತ್ತ ಗಮನಹರಿಸುತ್ತಿವೆ. ಇದರ ನಡುವೆ ಸ್ಯಾಂಡಲ್​ವುಡ್​ ನಟಿ ಪೂಜಾ ರಮೇಶ್​, ಚುನಾವಣಾ ಅಖಾಡಕ್ಕೆ ಪ್ರವೇಶ ನೀಡುವ ಸುಳಿವನ್ನು ನೀಡಿದ್ದಾರೆ.
ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ರಾಯಚೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಡಲು ಮಿಸ್ ಇಂಡಿಯಾ 2021ರ ವಿಜೇತೆ ಹಾಗೂ ನಟಿ ಪೂಜಾ ರಮೇಶ್​ ತಯಾರಿ ನಡೆಸುತ್ತಿರುವ ಸುದ್ದಿ ಹೊರಬಿದ್ದಿದೆ.
ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ವತಃ ಪೂಜಾ ರಮೇಶ್​ ಘೋಷಣೆ ಮಾಡಿದ್ದಾರೆ. ಈಗಾಗಲೇ ರಾಜಕೀಯ ಪಕ್ಷಗಳಿಂದ ಆಫರ್ ಬಂದಿದೆ. ಯಾವ ಪಕ್ಷ ಎಂಬುವುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ದಿಗ್ವಿಜಯ ನ್ಯೂಸ್​​ಗೆ ಪೂಜಾ ಹೇಳಿದ್ದಾರೆ.
ಕರಾವಳಿ ಭಾಗದಿಂದ ಬಂದು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಪೂಜಾ ಗುರುತಿಸಿಕೊಂಡಿದ್ದಾರೆ. ಘಟಾನುಘಟಿ ನಾಯಕರ ನಡುವೆ ಸ್ಪರ್ಧೆಗೆ ಸಿದ್ಧವಾಗಿರುವುದಾಗಿ ದಿಗ್ವಿಜಯ ನ್ಯೂಸ್ ಜೊತೆ ಪೂಜಾ ಮಾತನಾಡಿದ್ದಾರೆ.
ಅಂದಹಾಗೆ ಪೂಜಾ ರಮೇಶ್​ ಅವರು ನಿರುದ್ಯೋಗಿ, ಪೇಪರ್ ದೋಣಿ, ಲಹರಿ, ತಾಂಡವ, ಮಹಾಕಾಳಿ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅಲ್ಲದೆ, ಕಾಮಧೇನು, ಜಾನವಿ, ಸಂಭವಾಮಿ ಯುಗೇಯುಗೇ, ಗ್ರಹಣ, ಎಲ್ಲಿ ಜಾರಿತೋ ಮನವು, ಪಾಂಡು ರಂಗ ವಿಠ್ಠಲ, ಪಾರ್ವತಿ, ಎಸೆಸೆಲ್ಸಿ ನನ್ ಮಕ್ಕಳು, ಪರಮೇಶ್ವರ, ಅಶ್ವಿನಿ ನಕ್ಷತ್ರ ಧಾರಾವಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.(ದಿಗ್ವಿಜಯ ನ್ಯೂಸ್​)
ಎಲೆಕ್ಟ್ರಿಕ್​ ಸ್ಕೂಟರ್​ ಶೋರೂಮ್​ನಲ್ಲಿ ಅಗ್ನಿ ಅವಘಡ: 8 ಮಂದಿ ಸಾವು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿತ

ಹಾವು ಕಚ್ಚಿ ಮಹಿಳೆ ಸಾವು: ಸರಿಯಾದ ಸಮಯಕ್ಕೆ ವೈದ್ಯರು ಸಿಗದೇ ಮಹಿಳೆಯ ದುರಂತ ಅಂತ್ಯ

ಈ ಒಂದು ಕಾರಣಕ್ಕೆ ಮದ್ವೆಯಾಗಲು ತುಂಬಾ ಭಯವಂತೆ! ಸಂದರ್ಶನದಲ್ಲಿ ಮನದ ಮಾತು ಬಿಚ್ಚಿಟ್ಟ ನಟ ಸಿಂಬು

Sign in to your account
Please enter an answer in digits:9 − two =
Remember me
