ರಾಯಚೂರು:ಪ್ರೀತಿ ಕುರುಡು ಅಂತಾರೆ ನಿಜ. ಆದರೆ, ಪ್ರೀತಿಯ ಮಾಯೆಯಲ್ಲಿ ಬಿದ್ದು ಏನನ್ನು ಯೋಚಿಸದೇ ಕಣ್ಣಿದ್ದು ಕುರುಡರಾದರೆ ಏನಾಗಬಹುದು ಎಂಬುದಕ್ಕೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಪ್ರೀತಿಸಿ ಮದುವೆಯಾದ ಗಂಡನಿಗಾಗಿ ಪ್ರೌಢಶಾಲಾ ಶಿಕ್ಷಕಿಯೊಬ್ಬಳು ಇದೀಗ ಧರಣಿ ಕುಳಿತಿದ್ದಾಳೆ. ಗಂಡನಿಲ್ಲದೇ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಗಂಡನಿಗಾಗಿ ಗಂಡನ ಮನೆಯ ಮುಂದೆಯೇ ಶಿಕ್ಷಕಿ ಪ್ರತಿಭಟನೆಗೆ ಕುಳಿತಿದ್ದಾಳೆ.
ಶಿಕ್ಷಕಿಯ ಹೆಸರು ಶಾಂತಾಬಾಯಿ. ಇವರು ಪ್ರತಾಪ್​ ಎಂಬಾತನನ್ನು ಪ್ರೀತಿಸಿ 2017ರ ಅಕ್ಟೋಬರ್​ನಲ್ಲಿ ಮದುವೆಯಾಗಿದ್ದರು. ಆದರೆ, ಪ್ರತಾಪ್ ಶಾಂತಾಬಾಯಿಯ ಜತೆ ಮದ್ವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು, ಮನೆಯವರ ಒತ್ತಾಯಕ್ಕೆ ಮಣಿದು ಶಾಂತಾಬಾಯಿಗೆ ಕೈಕೊಟ್ಟು 2018ರಲ್ಲಿ ಇನ್ನೊಬ್ಬಳ ಜತೆ ಮದ್ವೆಯಾಗಿದ್ದಾನೆ.
ಸಂತ್ರಸ್ತೆ ಶಾಂತಾಬಾಯಿಗೆ ಈ ಮೊದಲೇ ಮದ್ವೆಯಾಗಿತ್ತು. ಆದರೆ, ಗಂಡನಿಗೆ ಡಿವೋರ್ಸ್ ಕೊಟ್ಟಿದ್ದರು. ಈ ಎಲ್ಲಾ ವಿಷಯವನ್ನು ತಿಳಿದೇ ಶಾಂತಾಬಾಯಿಯನ್ನ ಪ್ರತಾಪ್​, ಪ್ರೀತಿಸಿ ಮದ್ವೆಯಾಗಿದ್ದ. ಇದೀಗ ಅಂತರ್ಜಾತಿ ವಿವಾಹ ಕಾರಣ ನೀಡಿ, ಶಾಂತಾಬಾಯಿಗೆ ಮೋಸ ಮಾಡಿ ಮತ್ತೊಂದು ಮದ್ವೆಯಾಗಿದ್ದಾನೆ.
ಪ್ರೀತಿಸಿ ಮದ್ವೆಯಾಗಿ ತಂದೆ-ತಾಯಿಯ ಒತ್ತಾಯಕ್ಕೆ ಮಣಿದು ಇದೀಗಪ್ರತಾಪ್​ ಮತ್ತೊಂದು ಮದ್ವೆಯಾಗಿದ್ದಾನೆ. ಬಾಳು ಕೊಡ್ತೀನಿ, ನೀನೇ ಜೀವ ಎಂದು ಇದೀಗ ಶಾಂತಾಬಾಯಿಯನ್ನು ಅರ್ಧದಲ್ಲೇ ಕೈ ಬಿಟ್ಟು ಮೋಸ ಮಾಡಿದ್ದಾನೆ. ಇದೀಗ ಮೋಸ ಮಾಡಿರುವ ಪ್ರತಾಪ್ ಹಾಗೂ ಕುಟುಂಬಸ್ಥರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಅನ್ಯಾಯಕ್ಕೊಳಗಾದ ಶಿಕ್ಷಕಿ ಶಾಂತಾಬಾಯಿಯಿಂದ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಸಮಂತಾಗೆ ಏನಾಯ್ತು? ಯಾಕಿಂಗೆ ಆಡ್ತಿದ್ದಾರೆ? ಹೀಗೆ ಮುಂದುವರಿದ್ರೆ ಗೌರವಕ್ಕೆ ಧಕ್ಕೆ ಖಂಡಿತ ಅಂತಿದ್ದಾರೆ ಇವರು…

ಪಠ್ಯದಲ್ಲಿ ಭಗವದ್ಗೀತೆ?: ನಿರ್ಧಾರ ಕೈಗೊಳ್ಳುವ ಮೊದಲು ಚರ್ಚೆ-ಸಚಿವ ನಾಗೇಶ್

ಮತ್ತೆ ಶುರು ಡ್ರಾಮಾ ಜೂನಿಯರ್ಸ್; ಪ್ರತಿ ಶನಿ-ಭಾನುವಾರ ರಾತ್ರಿ 7.30ಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 16 =
Remember me
