ರಾಮನಗರ:ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಬಳಿ ರಾಮನಗರದ ಮಹಿಳಾ ಪಿಎಸ್​ಐ ಹಣ ಕಬಳಿಸಿರುವ ಆರೋಪ ವಿರುದ್ಧ ಕೇಳಿಬಂದಿದೆ.
ರಾಮನಗರ ಸಂಚಾರಿ ಠಾಣೆ ಪಿಎಸ್ಐ ಸರಸ್ವತಿ ಅವರ ವಿರುದ್ಧ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತ ದಂಪತಿ ನೇರ ಆರೋಪ ಮಾಡಿದ್ದಾರೆ. ಏ.9 ರ ರಾತ್ರಿ ನಗರದ ಬಾಲಗೇರಿಗೆ ಹೋಗುವ ಬ್ರಿಡ್ಜ್ ಬಳಿ ದೇವೆಂದ್ರ ಅವರ ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಇದೇ ವೇಳೆಗೆ ಅದೇ ಬ್ರಿಡ್ಜ್ ಬಳಿ ಪಿಎಸ್ಐ ಸರಸ್ವತಿ ರೌಂಡ್ಸ್ ಬಂದಿದ್ದರು.
ಅಪಘಾತದಲ್ಲಿ ದೇವೆಂದ್ರ ಅವರ ತಲೆಗೆ ಪೆಟ್ಟಾಗಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ವೈದ್ಯರು ದೇವೆಂದ್ರ ಅವರ ಜೇಬಿನಲ್ಲಿದ್ದ 5700 ರೂ. ಹಣ ಹಾಗೂ ಕೆಲ ಚೀಟಿಗಳನ್ನು ಪಿಎಸ್ಐ ಸರಸ್ವತಿ ಅವರಿಗೆ ನೀಡಿದ್ದರು. ಈ ವಿಚಾರವನ್ನು ವೈದ್ಯರು ದೇವೆಂದ್ರ ಪತ್ನಿ ಸುಮಾ ಅವರಿಗೆ ತಿಳಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತ್ರ ಏ.12 ರಂದು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೇವೆಂದ್ರ ಅವರ ಪತ್ನಿ ಸುಮಾ ಪ್ರಕರಣ ದಾಖಲು ಮಾಡಿದ್ದರು. ಈ ವೇಳೆ ನನ್ನ ಪತಿ ಬಳಿ ಇದ್ದ ಹಣ ಹಾಗೂ ಕೆಲ ಚೀಟಿಗಳು ನಿಮ್ಮ ಬಳಿ ಇದಿಯಂತಲ್ಲ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ದರ್ಪದಿಂದ ಪ್ರತಿಕ್ರಿಯೆ ನೀಡಿದ ಪಿಎಸ್ಐ ಸರಸ್ವತಿ ಹಣ ಖರ್ಚಾಗಿದೆ ನೀನೇ ಇನ್ನೂ ಹೆಚ್ಚಿನ ಹಣ ಕೊಡಬೇಕು ಅಂತಾ ಕೇಳಿದ್ದಾರೆ.
ಸರಸ್ವತಿಯ ಬಗ್ಗೆ ಸುಮಾ ನೇರ ಆರೋಪ ಮಾಡಿದ್ದಾರೆ. ದೇವೆಂದ್ರ ಅವರು ಇದು ಅಪಘಾತ ಅಲ್ಲ ದರೋಡೆ ಅಂತಲೂ ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು ಅಂತಾ ದೇವೆಂದ್ರ ದಂಪತಿ ದಿಗ್ವಿಜಯ ನ್ಯೂಸ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಸಾಲು ಸಾಲು ಚಿತ್ರಗಳು ಸೋತರೂ ಪೂಜಾ ಹೆಗ್ಡೆಗೆ ಕಿಂಚಿತ್ತೂ ಕಡಿಮೆ ಆಗಿಲ್ಲ ಡಿಮ್ಯಾಂಡ್!

ಕಾಂಗ್ರೆಸ್​ಗೆ ತಟ್ಟಿದ ಅಸಮಾಧಾನದ ಬಿಸಿ: ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ

ತೀವ್ರ ಹೋರಾಟ ನಡೆಸಿ ಕೊನೆಗೂ ತನ್ನ ಪ್ರೇಯಸಿಯನ್ನು ಮರುಪಡೆದ ಆಧಿಲಾ: ಗೆದ್ದು ಬೀಗಿದ ಸಲಿಂಗ ಜೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
