ರಾಮನಗರ:ರಾಧಿಕಾ ಕುಮಾರಸ್ವಾಮಿಯಿಂದ ದೂರ ಆಗುವುದಕ್ಕೆ ಇವರು ಯಾವ ಪಾಪದ ಹಣ ಕೊಟ್ಟರು ಎಂದು ಪ್ರಶ್ನಿಸುವ ಮೂಲಕ ಮಾಜಿ ಶಾಸಕ ಕೆ.ರಾಜು ಅವರು ಮಾಜಿ ಮುಖ್ಯಮಂತ್ರಿ ಎಚ್​​.ಡಿ. ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಶನಿವಾರ (ಫೆ. 12) ಸುದ್ದಿಗಾರರೊಂದಿಗೆ ಮಾತನಾಡಿದ ಕೆ. ರಾಜು, ಮುಖ್ಯಮಂತ್ರಿ ಸ್ಥಾನದಲ್ಲಿ‌ದ್ದವರು ನಟಿ ರಾಧಿಕಾ ಅವರನ್ನು ಮದುವೆ ಆದರು. ನಂತರ ರಾಧಿಕಾರಿಂದ ದೂರವಾದಾಗಲೂ ನೂರಾರು ಕೋಟಿ ರೂಪಾಯಿ ಹಣವನ್ನು ಕೊಟ್ಟಿದ್ದಾರೆ. ಯಾವ ಪುಣ್ಯದ ಹಣದಲ್ಲಿ ರಾಧಿಕಾ ಅವರಿಗೆ ನೂರಾರು ಕೋಟಿ‌ ಕೊಟ್ಟರೆಂದು ರಾಜ್ಯದ ಜನರಿಗೆ ತಿಳಿಸಬೇಕೆಂದು ಆಗ್ರಹಿಸಿದರು.
ನಾನು ರಾಜಕೀಯಕ್ಕೆ ಬಂದಾಗ ಎಚ್‌.ಡಿ. ಕುಮಾರಸ್ವಾಮಿ ಎಲ್ಲಿದ್ದರೋ ಗೊತ್ತಿಲ್ಲ. ದೇವೇಗೌಡರ ಮಗನೆಂಬ ಕಾರಣಕ್ಕೆ ಜನ ಅವರನ್ನು ಗುರುತಿಸಿದರು. ಇವರಿಗೆ ಹಣ ಎಲ್ಲಿಂದ ಬಂತು ಅಂತಾ ಜನರಿಗೆ ಬಹಿರಂಗಪಡಿಸಬೇಕು ಎಂದರು.
ಮಾಜಿ ಪ್ರಧಾನಿ ದೇವೇಗೌಡರ ಮಗನಾಗಿ ಈ ರೀತಿ ಮಾಡೋದು ಸರಿನಾ? ಅಲ್ಲದೇ ಇವರು ಅಕ್ರಮಗಳನ್ನು ಮಾಡಿದ್ದಾರೆ. ಹಲವು ಜನರನ್ನು ಮೋಡಿ ಮಾಡಿ ಹಣದಲ್ಲಿ ರಾಜಕೀಯ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಅನೇಕ ಹಗರಣ ಮಾಡಿದ್ದಾರೆಂದು ಆರೋಪಿಸಿದರು.
ಸಾಕಷ್ಟು ಹಗರಣ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರ ಮೇಲೆ ಇಲ್ಲಸಲ್ಲದ ಟೀಕೆ ಟಿಪ್ಪಣಿ ಮಾಡ್ತಾರೆ. ಇವರು ರಾಧಿಕಾ ಕುಮಾರಸ್ವಾಮಿಯಿಂದ ದೂರ ಆಗೋಕೆ ಯಾವ ಪಾಪದ ಹಣ ಕೊಟ್ರು ಹಾಗಾದ್ರೆ? ಎಂದು ಮಾಜಿ ಶಾಸಕ ಕೆ.ರಾಜು ಅವರು ಮಾಜಿ ಸಿಎಂ ಎಚ್​ಡಿಕೆ ವೈಯಕ್ತಿಕ ವಿಚಾರವನ್ನು ಕೆದಕಿ ವಾಗ್ದಾಳಿ ನಡೆಸಿದರು.(ದಿಗ್ವಿಜಯ ನ್ಯೂಸ್​)
ಮನೆ ನೀಡಿಲ್ಲ ಎಂದು ಪದೇಪದೆ ನನ್ನನ್ನು ಕೆಣಕಬೇಡಿ, ನನ್ಗೂ ಸಿಎಂ ಆಗುವ ಅರ್ಹತೆ ಇದೆ: ಸಿದ್ದುಗೆ ಸೋಮಣ್ಣ ಹಿಗ್ಗಾಮುಗ್ಗಾ ತರಾಟೆ

ಕೇಂದ್ರ ಸರ್ಕಾರಿ ನೌಕರನ ದುರಂತ ಅಂತ್ಯ! ದುಡ್ಡು ಕೊಟ್ಟಿಲ್ಲವೆಂದು ಕೊಂದು, 7ನೇ ಮಹಡಿಯಿಂದ ಎಸೆದ ಪತ್ನಿ-ಪುತ್ರ

ಇಬ್ಬರು ಮಕ್ಕಳ ತಾಯಿಯಾದ ಶ್ರೀಲೀಲಾ! ಶಬ್ಬಾಸ್ ಎಂದ ಅಭಿಮಾನಿಗಳು…

ಅಮ್ಮನನ್ನು ನೋಡಿಕೊಳ್ಳಲು ಆಗದ ಪತ್ನಿಗೆ ಡಿವೋರ್ಸ್‌ ಕೊಡಬೇಕೆಂದುಕೊಂಡಿರುವೆ- ಪ್ಲೀಸ್ ಸಲಹೆ ಕೊಡಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one + 1 =
Remember me
