ಬೆಂಗಳೂರು:ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ (ಏ.8ರಿಂದ 10) ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ವೇದಿಕೆ ರೂಪಿಸಲು ‘ರಿಯಲ್​ಎಸ್ಟೇಟ್ ಎಕ್ಸ್​ಪೋ’ ಆಯೋಜಿಸಲಾಗುತ್ತಿದೆ.
ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ವಾಹಿನಿ ಸಹಯೋಗದಲ್ಲಿ ಅಶ್ವಸೂರ್ಯ ರಿಯಾಲಿಟಿಸ್ ಅರ್ಪಿಸುವ ಎಕ್ಸ್​ಪೋದಲ್ಲಿ ರಾಜ್ಯದ ಪ್ರಮುಖ ರಿಯಾಲ್ಟಿ ಕಂಪನಿಗಳಾದ ಪ್ರಾವಿಡೆಂಡ್, ಎಸ್​ಆರ್​ಎಸ್ ಪ್ರಮೋಟರ್ಸ್, ಅಥರ್ವ ಗ್ರೂಪ್ಸ್, ಡಿಎಸ್ ಮ್ಯಾಕ್ಸ್, ಕೆಎನ್​ಎಸ್ ಇನ್​ಫ್ರಾ, ಕಲ್ಯಾಣ್ ಶೆಲ್ಟರ್ಸ್, ಗುರು ಪುನ್ವಾನಿ, ಆರ್ಯನ್ ಡೆವಲಪರ್ಸ್ ಮತ್ತು ಪ್ರಮೋಟರ್ಸ್, ಶರಣ್ಯ ಫಾಮ್್ಸರ್ ಎಂ.ಆರ್. ಪ್ರಾಪರ್ಟೀಸ್, ಆಶೀರ್ವಾದ್ ಪ್ರಾಪರ್ಟೀಸ್, ಅಲೈಡ್ ಹ್ಯಾಬಿಟ್ಯಾಟ್ಸ್, ಕರ್ನಾಟಕ ಗೃಹ ಮಂಡಳಿ, ಓಂ ಶ್ರೀ ಇನ್​ಫ್ರಾಸ್ಟ್ರಕ್ಚರ್, ಎ4 ಪ್ರಾಪರ್ಟೀಸ್, ಭಗಿನಿ ಡೆವಲಪರ್ಸ್, ಎಂಎಚ್ ಪ್ರಮೋಟರ್ಸ್, ಎಂಡಿಎಸ್, ಗೃಹಮಿತ್ರ ಡೆವಲಪರ್ಸ್, ಪಿ.ಸಿ. ರಿಯಾಲ್ಟಿ, ಮಥರ್ ಅರ್ಥ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಮತ್ತು ಎಟಿಝುಡ್ ಪ್ರಾಪರ್ಟೀಸ್ ಸೇರಿ ವಿವಿಧ ರಿಯಾಲ್ಟಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿ ನಿವೇಶನ, ಅಪಾರ್ಟ್​ವೆುಂಟ್ ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಿವೆ.
ರಿಯಾಲ್ಟಿ ಕಂಪನಿಗಳು ಗ್ರಾಹಕರಿಗೆ ನಿವೇಶನ ಅಥವಾ ಫ್ಲ್ಯಾಟ್ ಖರೀದಿಗೆ ಆರ್ಥಿಕವಾಗಿ ಅನುಕೂಲ ಆಗುವಂತೆ ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಆರ್​ಇಪಿಸಿಒ ಹೋಮ್ ಫೈನಾನ್ಸ್​ಗಳಿಂದ ಹಣಕಾಸು ನೆರವವನ್ನು ಕೂಡ ಒದಗಿಸಲಿವೆ. ಮನೆ ಅಥವಾ ಕಟ್ಟಡ ನಿರ್ವಣಕ್ಕೆ ಅನುಕೂಲ ಆಗುವಂತೆ ಪೀಠೋಪಕರಣ ಉದ್ಯಮ, ಕಬ್ಬಿಣ ಹಾಗೂ ಸಿಮೆಂಟ್ ಕಂಪನಿಗಳು, ಮನೆಯ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸ ತಜ್ಞರು, ಕಟ್ಟಡ ಸಾಮಗ್ರಿ ವಿತರಕರು ಕೂಡ ಎಕ್ಸ್​ಪೋದಲ್ಲಿ ಪಾಲ್ಗೊಳ್ಳಲಿದ್ದಾರೆ.
20-25 ಸಾವಿರ ಗ್ರಾಹಕರ ಭೇಟಿ ನಿರೀಕ್ಷೆಮೇಳಕ್ಕಾಗಿ ಬಸವನಗುಡಿ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಆಕರ್ಷಕ ಸ್ವಾಗತ ಕಮಾನು ನಿರ್ವಿುಸಲಾಗಿದ್ದು, ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯವಿದೆ. ಸ್ಟಾಲ್​ಗಳ ಪ್ರವೇಶದಲ್ಲಿ ಕಟೌಟ್ ನಿರ್ವಣವಾಗಿದೆ. ಎಲ್ಲ ಸ್ಟಾಲ್​ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಎಕ್ಸ್​ಪೋಗೆ ಆಗಮಿಸುವ ಸಾರ್ವಜನಿಕರಿಗೆ ಉಚಿತ ಪ್ರವೇಶ ಹಾಗೂ ವಾಹನಗಳಿಗೆ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಸೂರಿನಡಿ ಗ್ರಾಹಕರು ರಿಯಾಲ್ಟಿ ಕ್ಷೇತ್ರದ ವಿವಿಧ ಕಂಪನಿಗಳ ನಿವೇಶನ, ಅಪಾರ್ಟ್​ವೆುಂಟ್, ವಿಲ್ಲಾ, ಫಾಮ್ರ್ ಹೌಸ್ ಯೋಜನೆಗಳ ಮಾಹಿತಿ ಪಡೆಯಬಹುದು. 3 ದಿನ ನಡೆಯುವ ಮೇಳದಲ್ಲಿ 20-25 ಸಾವಿರ ಗ್ರಾಹಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸ್ವಂತ ಸೂರಿನ ಕನಸು ಸಾಕಾರಗೊಳ್ಳುವ ವೇದಿಕೆಪ್ರತಿಯೊಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಒಂದು ಸ್ವಂತ ಮನೆಯನ್ನು ಹೊಂದಬೇಕೆಂಬ ಕನಸು ಕಂಡಿರುತ್ತಾನೆ. ಕೋವಿಡ್ ವೇಳೆ ಸ್ವಂತ ಮನೆಗಳ ನಿರ್ವಣಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಉಂಟಾಗಿದ್ದು, ಸಿಲಿಕಾನ್​ಸಿಟಿ ಸುತ್ತಮುತ್ತ ಕೈಗೆಟುಕುವ ದರದಲ್ಲಿ ನಿವೇಶನ, ವಿಲ್ಲಾ, ಫ್ಲ್ಯಾಟ್ ಹಾಗೂ ಫಾಮರ್್​ಹೌಸ್ ಖರೀದಿಗೆ ಮುಂದಾಗಿದ್ದಾರೆ. ಈಗಾಗಲೇ 3-4 ತಿಂಗಳಲ್ಲಿ ಶೇ.25 ನಿವೇಶನ ಮತ್ತು ಫ್ಲ್ಯಾಟ್​ಗಳ ಮಾರಾಟ ಪ್ರಮಾಣ ಹೆಚ್ಚಳ ಆಗಿದೆ. ಸುಮಾರು 25ಕ್ಕೂ ಅಧಿಕ ರಿಯಾಲ್ಟಿ ಕಂಪನಿಗಳನ್ನು ಒಂದೆಡೆ ಸೇರಿಸಿ ಗ್ರಾಕರಿಗೆ ವೇದಿಕೆ ಕಲ್ಪಿಸಲಾಗುವುದು. ಬಿಡಿಎ ಹಾಗೂ ಬಿಎಂಆರ್​ಡಿಎ ಅನುಮೋದಿತ ಸೈಟ್​ಗಳು ಲಭ್ಯವಿದೆ. ಜತೆಗೆ, ಎಕ್ಸ್​ಪೋದಲ್ಲಿ ಆಕರ್ಷಕ ಕೊಡುಗೆಗಳು ಸಿಗಲಿದ್ದು, ಒಳ್ಳೆಯ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು.
ಲಂಕಾದಲ್ಲಿ ಯೋಧರು vs ಪೊಲೀಸರು: ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ, ಸರ್ಕಾರಿ ನೌಕರರ ಮನೆಗೆ ನುಗ್ಗಲು ಯತ್ನ

ನಿಲ್ಲದ ದರ ಏರಿಕೆಯ ಬರೆ: 16 ದಿನದಲ್ಲಿ 14 ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ಇಂದಿನ ಇಂಧನ​ ದರ ಹೀಗಿದೆ

ಮದ್ಯದ ಕಿಕ್ ಇಳಿಸಿದ ಸಾಫ್ಟ್​ವೇರ್: ಪೂರೈಕೆಯಾಗದೆ ಮಾಲೀಕರು ಕಂಗಾಲು, ಇಂದು ಪ್ರತಿಭಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + five =
Remember me
