ಬೆಂಗಳೂರು:ಡಿಸಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್​ ಪೂಲ್​ ನಿರ್ಮಾಣ ಸಂಬಂಧ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಟ್ವೀಟ್​ ಮೂಲಕ ಕಿಡಿಕಾರಿದ್ದ ಐಪಿಎಸ್​ ಅಧಿಕಾರಿ ಡಿ. ರೂಪಾ, ಇದೀಗ ಮತ್ತೊಮ್ಮೆ ಫೇಸ್​ಬುಕ್​ನಲ್ಲಿ ಸುದೀರ್ಘವಾಗಿ ಅದೇ ವಿಚಾರ ಕುರಿತು ಬರೆದುಕೊಂಡಿದ್ದಾರೆ.
ಫೇಸ್​ಬುಕ್​ನಲ್ಲಿ ರೂಪಾ ಅವರು ಈ ಕೆಳಕಂಡಂತೆ ಬರೆದುಕೊಂಡಿದ್ದಾರೆ…ಈ ಪೇಪರ್ ಕ್ಲಿಪ್ಪಿಂಗ್ ಅನ್ನು ನನ್ನ ಸಂಬಂಧಿಕರೊಬ್ಬರು ಕಳಿಸಿದರು. ನನಗೆ ಕೇಳಿದರು, ಎಲ್ಲಾ ಪರ್ಮಿಷನ್ ಇದೆಯಲ್ಲ ಅಂತ. ಬಹುಶ: ಸಾಮಾನ್ಯ ಜನರಿಗೆ ಇದರಲ್ಲಿ ಇರುವ ಸಮಜಾಯಿಷಿ ಅರ್ಥ ಆಗದೇ ಇರುವುದರಿಂದಲೇ ಇದನ್ನು ಗೋಲ್ ಗೋಲ್ ಆಗಿ ಹೇಳಿ ಅಧಿಕಾರಿಯು ಜನರ ದಾರಿ ತಪ್ಪಿಸುತ್ತಿರುವ ಸಾಧ್ಯತೆ.
1. ನಿರ್ಮಿತಿ ಕೇಂದ್ರ ಆಯಾ ಜಿಲ್ಲೆಗಳಲ್ಲಿ ಇದ್ದು, ಅದಕ್ಕೆ ಡಿಸಿ ಅವರೇ ಅಧ್ಯಕ್ಷ ಆಗಿರುತ್ತಾರೆ. ಅವರ ಮನೆಯ ಅಂಗಳದಲ್ಲಿ ಈಜು ಕೊಳ ಕಟ್ಟಿಸುವುದು ಅವರಿಗೆ ಕಷ್ಟವೇ ಅಲ್ಲ. ಆದರೆ, ವಿಷಯ ಅದಲ್ಲ. ಕಾರ್ಪೋರೇಶನ್ ಪರವಾನಗಿ ಬೇಡವೇ? ಅದು ಇತ್ತೆ? ಇರಲಿಲ್ಲ. ತಪ್ಪಲ್ಲವೇ? ಜನ ಸಾಮಾನ್ಯನಿಗೆ ಒಂದು, ಡಿಸಿಗೆ ಬೇರೆ ನ್ಯಾಯವೇ? ಕಾರ್ಪೋರೇಶನ್ ಪರವಾನಗಿ ಇಲ್ಲ, ಹಾಗಾದ್ರೆ ಒಡೆದು ಹಾಕಬೇಕಲ್ಲ? ಅಥವಾ ದಂಡ ಕಟ್ಟಿಸಬೇಕಲ್ಲ? ಈ ಅಧಿಕಾರಿಯಿಂದ ದಂಡ ವಸೂಲಿ ಮಾಡುತ್ತಾರೆಯೇ?
2. ಈ ಅಧಿಕಾರಿಯು ಕೊಟ್ಟಿರುವ ಇನ್ನೊಂದು ದಾರಿ ತಪ್ಪಿಸುವ ಹೇಳಿಕೆ, ಇದು Covid ಸಮಯದಲ್ಲಿ ನಿರ್ಮಿಸಿಲ್ಲ. Covid ಮುಗಿದಿದೆ ಅಂತ ಸರ್ಕಾರ ಘೋಷಿಸಿದೆಯೇ? ಶಾಲಾ ಕಾಲೇಜು ತೆರೆದಿದೆಯೇ? ಮಾಸ್ಕ್ ಹಾಕೋದು ನಿಲ್ಲಿಸಿ ಅಂತ ಸರ್ಕಾರ ಹೇಳಿದೆಯೆ? ಮತ್ತೆ ಇವರು Covid ಸಮಯ ಇರಲಿಲ್ಲ ಅಂತ ಹೇಳೋದು ಒಪ್ಪಲು ಸಾಧ್ಯವೇ ಅಪಾರ್ಟ್ಮೆಂಟ್ ಗಳಲ್ಲೇ ಈಜುಕೊಳ ತೆಗೆಯಲು ಪರವಾನಗಿ ಇಲ್ಲ. ಡಿಸಿಗೊಂದು ನ್ಯಾಯ, ಜನರಿಗೊಂದು ನ್ಯಾಯವೇ?
3. ಒಬ್ಬ ಡಿಸಿ ಈಜುಕೊಳ ಕಟ್ಟಿದಾಗ, ಬಾಕಿ ಜಿಲ್ಲೆಯ ಡಿಸಿಗಳೂ ಕಟ್ಟಬಹುದಲ್ಲವೆ. ಅವರನ್ನು ನೋಡಿ SP ಗಳು ಅಂದರೆ ಪೊಲೀಸ್ ವರಿಷ್ಠ ಅಧಿಕಾರಿಗಳೂ ಕಟ್ಟಬಹುದಲ್ಲವೆ? ಹಾಗೆ ಎಲ್ಲರೂ ತಮ್ಮ ತಮ್ಮ ಬಂಗಲೆಯಲ್ಲಿ ಸಾರ್ವಜನಿಕ ಹಣ ಉಪಯೋಗಿಸಿ ಕಟ್ಟುವುದನ್ನು ಒಪ್ಪಲು ಸಾಧ್ಯವೇ? ಅದೂ ಇಂದಿನ ಪರಿಸ್ಥಿತಿಯಲ್ಲಿ? ಡಿಸಿ ಬಂಗಲೆಯಲ್ಲಿ ಸಾಮಾನ್ಯ ಜನರು ಉಪಯೋಗಿಸಲು ಅವಕಾಶ ಇದೆಯೇ? ಇಲ್ಲವಲ್ಲ?
ನೈತಿಕತೆ ಅಂದರೆ, ನಾನು ಮಾಡುವ ಕೆಲಸ ಬೇರೆಯವರೂ ಮಾಡಿದರೆ, ಅದು ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ಮನಗಂಡು ಇಡುವ ಹೆಜ್ಜೆಯೇ ನೈತಿಕ ಹೆಜ್ಜೆ.
ಎಲ್ಲರಿಗಿಂತ ನಾವು ನಿಸ್ಪೃಹರು, ನಮಗಿಂತ ಪ್ರಾಮಾಣಿಕರು ಬೇರೆ ಇಲ್ಲ ಎಂದು ತಿಳಿದು ಕೊಳ್ಳುವ( ಗ್ರಹಿಸುವ) ಅಧಿಕಾರಿಗಳು ತಮ್ಮ ಪ್ರತಿ ಹೆಜ್ಜೆಯನ್ನೂ ಗಮನಿಸಿ ಇಡಬೇಕಾಗುತ್ತದೆ. ಜನಪ್ರಿಯತೆ ಹೆಚ್ಚಿನ ಜವಾಬ್ದಾರಿ ತರುತ್ತದೆ. ನೀವು ನೈತಿಕವಾಗಿ ಬೇರೆಯವರಿಗಿಂತ ಮೇಲ್ಮಟ್ಟದಲ್ಲಿ ಇರಲೇ ಬೇಕಾಗುತ್ತದೆ. ಅಂಥವರಿಗೆ ಈ ಸಂದರ್ಭದಲ್ಲಿ ಈಜು ಕೊಳ ಬೇಕೋ ಬೇಡವೋ ಎಂಬುದು ತಿಳಿಯುವುದಿಲ್ಲವೇ? ಮಾನವೀಯತೆ, ಪ್ರಾಮಾಣಿಕತೆ, ನೈತಿಕತೆ ಇರುವ ಎಂಥವರಿಗೂ ತಿಳಿಯುವ ವಿಚಾರ ಇದು.
ಮೊನ್ನೆ ಟ್ವೀಟ್​ ಮೂಲಕ ಗುಡುಗಿದ್ದರುಕರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣದ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಅಧಃಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ. ಕಟ್ಟುವುದನ್ನು ಮುಂದೂಡಲೂಬಹುದಿತ್ತು ಎಂದು ರೂಪಾ ಆಕ್ರೋಶ ಹೊರಹಾಕಿದ್ದರು.
https://t.co/y1yxqqTNKp
— D Roopa IPS (@D_Roopa_IPS)June 24, 2021

ಏನೇ ಇರಲಿ ಅವರು ಮಾಡಿದ್ದು ತಪ್ಪು: ಐಎಎಸ್​ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್​ ಡಿ. ರೂಪಾ ವಾಗ್ದಾಳಿ!

ಒಂದು ಕೇಸ್ ಓಕೆ, ಇನ್ನುಳಿದ ಪ್ರಕರಣಗಳ ನಿರ್ಲಕ್ಷ್ಯ ಯಾಕೆ?: ಮತ್ತೆ ಗುಡುಗಿದ ರೋಹಿಣಿ ಸಿಂಧೂರಿ!

ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಾಣ: ರೋಹಿಣಿ ಸಿಂಧೂರಿ ಮಾಡಿದ್ದಾರೆನ್ನಲಾದ ತಪ್ಪುಗಳ ಪಟ್ಟಿ ಹೀಗಿದೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 4 =
Remember me
