ತುಮಕೂರು:ಗುಬ್ಬಿ ಶಾಸಕ ಎಸ್​. ಆರ್​. ಶ್ರೀನಿವಾಸ್​ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಶ್ರೀನಿವಾಸ್​ ಬೆಂಬಲಿಗರು ನೇರವಾಗಿ ಸವಾಲು ಹಾಕಿದ್ದಾರೆ.
ಎಲ್ಲೋ ಕುಳಿತುಕೊಂಡು ಮಾತನಾಡುವುದಲ್ಲ, ತಾಕತ್ ಇದ್ರೆ ನಮ್ಮ ಕ್ಷೇತ್ರಕ್ಕೆ ಬಂದು ಗೆದ್ದು ತೊರಿಸಿ ಎಂದು ಫೇಸ್​ಬುಕ್​ನಲ್ಲಿ ವಿಡಿಯೋ ಹರಿಬಿಡುವ ಮೂಲಕ ನೇರವಾಗಿ ಕುಮಾರಸ್ವಾಮಿ ಅವರಿಗೆ ಓಪನ್ ಚಾಲೆಂಜ್ ಮಾಡಿದ್ದಾರೆ. ಎಸ್.ಆರ್. ಶ್ರೀನಿವಾಸ್ ಗುಬ್ಬಿ ಎಂಎಲ್ಎ ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಬಹಿರಂಗ ಸವಾಲ್ ಹಾಕಿದ್ದಾರೆ.
ನಾವು ಗುಬ್ಬಿ ವಾಸಣ್ಞನ‌ ಹುಡುಗರು ಮತ್ತು ಕಾರ್ಯಕರ್ತರು. ನೀವು ಎಷ್ಟೇ ಹೇಳಿದರು ವಾಸಣ್ಣ ಶಕ್ತಿಯುತವಾಗಿ ಬೆಳೆಯುತ್ತಾರೆ. ನಾವು ಅವರನ್ನು ಬೆಳೆಸುತ್ತೇವೆ. ನೀವಾಗಿ ನೀವೇ ನಮ್ಮ‌ ವಾಸಣ್ಣನನ್ನು ರಾಜ್ಯದ ನಾಯಕನನ್ನಾಗಿ ಮಾಡಿದ್ದೀರಿ. ಅವರಿಗೆ ನಿಮ್ಮ ಆಶಿರ್ವಾದ ಇರುತ್ತದೆ. ಇನ್ನು ಅವರನ್ನು ಕೈಹಿಡಿದು ಉನ್ನತ ಸ್ಥಾನಗಳಿಗೆ ಕರ್ಕೊಂಡು ಹೊಗ್ತೀವಿ‌. ಯಾರು ಏನೇ ಹೇಳಿದರು ನಾವು ಯಾವತ್ತು ವಾಸಣ್ಣನನ್ನು ಬಿಟ್ಟು ಕೊಡಲ್ಲ. ಇಂತಹ ರಾಜಕಾರಣಕ್ಕೆ ನಾವು ಬಗ್ಗೋರಲ್ಲ. ಗುಬ್ಬಿ ಜನ ಯಾವತ್ತು ವಾಸಣ್ಣನನ್ನ ಕೈಬಿಟ್ಟಿಲ್ಲ. ಬಿಡೋದು ಇಲ್ಲ. ನಿಮ್ಮಂತ ಎಷ್ಟೇ ಕುಮಾರಸ್ವಾಮಿಗಳು ಬಂದ್ರು ಅಷ್ಟೇ, ಯಾವನ್ ಬಂದ್ರು ಅಷ್ಟೇ ವಾಸಣ್ಣನಿಗೆ ಸರಿಸಾಟಿ ಇಲ್ಲ ಎಂದಿದ್ದಾರೆ.
ನಿಮಗೆ ತಾಕತ್ ಅನ್ನೋದು ಇದ್ರೆ, ನೇರವಾಗಿ ಗುಬ್ಬಿಗೆ ಬಂದು ಚುನಾವಣೆಯಲ್ಲಿ ನಿಂತುಕೊಳ್ಳಿ. ಗೆದ್ದು ತೋರಿಸಿ, ಅದನ್ನು ಬಿಟ್ಟು ಕೈಲಾಗದವರು ಅದೇನೋ ಬಿಟ್ಕೊಂಡ್ರಲ್ಲ ಹಂಗೆ ಎಲ್ಲೋ ಕುತ್ಕಂಡು ಮಾತಾಡೋದಲ್ಲ. ಬನ್ನಿ ಕ್ಷೇತ್ರಕ್ಕೆ ವಾಸಣ್ಣನ ಬಗ್ಗೆ ಕೇಳಿ. ಮಾಜಿ ಸಿಎಂ‌ ನೀವು, ಆ ಘನತೆಗಾದ್ರು ನೀವು ರಾಜಕೀಯ ‌ಮಾಡಿ. ಈ ತರ ರಾಜಕೀಯ ‌ಮಾಡಿದ್ರೆ ಸರಿ ಇರಲ್ಲ.‌ ನಾವು‌ ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತೀವಿ ಇದು ನಿಮಗೆ ಎಚ್ಚರಿಕೆ‌ ಕೊಡ್ತಿದ್ದೀವಿ. ಕುಮಾರಸ್ವಾಮಿ ಅವರೇ ನಿಮ್ಮ‌ ಹತ್ರ ಇರೋ ಕಾರ್ಯಕರ್ತರು ದುಡ್ಡು ಕೊಟ್ರೆ ಬರಬಹುದು. ಅದೇ ವಾಸಣ್ಣನ ಹತ್ರ ಇರೋ ಕಾರ್ಯಕರ್ತರು ಒಂದೇ ಒಂದು ಕರೆ ಕೊಟ್ರೆ ಇಡೀ ತುಮಕೂರೇ ಅವರ ಹಿಂದೆ ಇರುತ್ತದೆ.
ವಾಸಣ್ಣನವರನ್ನು ರಾಜಕೀಯದಿಂದ ತುಳಿಬೇಕು ಅಂದ್ರೆ ನಿಮಗಿಂತ ಒಂದು ಸ್ಥಾನದಲ್ಲಿ ಎತ್ತರದಲ್ಲಿ ಇರ್ತಾರೆ. ಇಂತಹ ತಪ್ಪು ಕಲ್ಪನೆಗೆ ಹೋಗ್ಬೇಡಿ. ಕನಸಲ್ಲು ಅನ್ಕೋಬೇಡಿ. ಅವರಿಗೆ ಸಾವಿರಾರು ಜನ‌‌ ಅಭಿಮಾನಿಗಳು ಇದಾರೆ. 20 ವರ್ಷದಿಂದ ನಿಮ್ಮ ಪಕ್ಷದ ಚಿಹ್ನೆ ಬಳಸಿ, ನಿಮ್ಮ‌ ಹೆಸರು ಬಳಸಿಕೊಂಡು ವಾಸಣ್ಣ ಗೆದ್ದಿಲ್ಲ. ನಾವು ಜಾತಿಯನ್ನು ಮರೆತು ಜಾತ್ಯಾತೀತವಾಗಿ ವಾಸಣ್ಣನಿಗೆ ಸಪೋರ್ಟ್ ಮಾಡ್ತಿರೋದು. ನಾವು ಯಾವತ್ತು ಕುಮಾರಸ್ವಾಮಿ, ದೇವೆಗೌಡರನ್ನ ನೋಡಿ ಪಕ್ಷಕ್ಕೆ ಬಂದಿಲ್ಲ. ವಾಸಣ್ಣ ಎಂಬ ಶಕ್ತಿಗೋಸ್ಕರ ನಾವು ಅಷ್ಟೇ ಜೆಡಿಎಸ್​ನಲ್ಲಿ ಇದಿದ್ದು. ವಾಸಣ್ಣ ಕಾಂಗ್ರೆಸ್, ಬಿಜೆಪಿ ಹಾಗೂ ಯಾವುದೇ ಪಕ್ಷಕ್ಕೆ ಹೋಗಲಿ, ಅವರು ಎಲ್ಲಿ ಇರ್ತಾರೆ ಅವರಿಗೆ ಬೆನ್ನೆಲುಬಾಗಿ ಇದ್ದು, ‌ವಿಜಯಶಾಲಿಯನ್ನಾಗಿ ಮಾಡೇ ಮಾಡ್ತಿವಿ ಅಂತಾ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಶ್ರೀನಿವಾಸ್​ ಬೆಂಬಲಿಗರು ನೇರ ಸವಾಲು ಹಾಕಿದ್ದಾರೆ.(ದಿಗ್ವಿಜಯ ನ್ಯೂಸ್​)
ಚಪ್ಪಲಿ ವಿವಾದದ ಬಳಿಕ ನಯನತಾರಾಗೆ ಮತ್ತೊಂದು ಬಿಗ್​ ಶಾಕ್​: ಇನ್ನೊಂದು ಮಿಸ್ಟೇಕ್​ CCTVಯಲ್ಲಿ ಸೆರೆ

ಅಪ್ರಾಪ್ತ ವಯಸ್ಕರಾದಾಗ ಪಾಟೀ ಸವಾಲಿಗೆ ಸಮ್ಮತಿ; 18 ವರ್ಷಕ್ಕಿಂತ ಕೆಳಗಿದ್ದರಷ್ಟೇ ‘ಮಗು’..

ಗ್ರಾ.ಪಂ. ಚುನಾವಣೆಯಲ್ಲಿ ಮಾಜಿ ಚಂಬಲ್ ಡಕಾಯಿತ ಮಲ್ಖಾನ್​ ಸಿಂಗ್​ ಪತ್ನಿ ಅವಿರೋಧ ಆಯ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
