ಮೈಸೂರು:ಸಂದೇಶ್​ ಪ್ರಿನ್ಸ್​ ಹೋಟೆಲ್​ನಲ್ಲಿ ಸಪ್ಲೈಯರ್​ ಮೇಲೆ ನಟ ದರ್ಶನ್​ ಹಲ್ಲೆ ಮಾಡಿದ್ದಾರೆನ್ನಲಾದ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಜೂನ್​ 24ರಂದು ಹೋಟೆಲ್​ನಲ್ಲಿ ನಡೆದ ಘಟನೆಯನ್ನು ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ಟಿದ್ದಾರೆ.
ಹೋಟೆಲ್​ನ ಸ್ವಿಮ್ಮಿಂಗ್​ ಫೂಲ್​ ಏರಿಯಾದಲ್ಲಿ ಇರುವ ಜಾಗದಲ್ಲಿ ಹತ್ತರಿಂದ ಹದಿನೈದು ಜನರನ್ನು ಕರೆಸಿಕೊಂಡು ಮಿನಿ ಡ್ರಿಂಕ್ಸ್​ ಪಾರ್ಟಿ ಮಾಡುತ್ತಿದ್ದರು. ಪಾರ್ಟಿಯೆಲ್ಲ ಮುಗಿಯಿತು. ತುಂಬಾ ಮದ್ಯಪಾನ ಮಾಡಿದ್ದರು. ಯಾವುದೋ ಒಂದು ಐಟಂ ಕೊಡಲಿಲ್ಲ ಅಂತಾ ಮದ್ಯದ ಅಮಲಿನಲ್ಲಿ ಸಪ್ಲೈಯರ್​ಗೆ ಹೊಡೆದರು. ಅದರಿಂದ ಸಪ್ಲೈಯರ್​ ಕೂಡ ಕಣ್ಣೀರಾಕಿದರು. ಕಪಾಳ ಮತ್ತು ಕಿವಿ ಸೇರಿಸಿ ಹೊಡೆದಿದ್ದರಿಂದ ನೋವಿನಿಂದ ಸಪ್ಲೈಯರ್​ ಅಳುತ್ತಿದ್ದ ಎಂದು ಸೆಕ್ಯುರಿಟಿ ಗಾರ್ಡ್​ ಹೇಳಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೊಡೆದಿದ್ದು ಮಾತ್ರವಲ್ಲದೆ, ಕೆಟ್ಟದಾಗಿ ನಿಂದಿಸಿದರು. ಸೆಕ್ಯುರಿಟಿಗಳಿಗೂ ಬೈದರು. ಅಲ್ಲದೆ, ತನ್ನ ಬಳಿಯಿದ್ದ ಹಣವನ್ನು ಎರಚಿ ಹೋಟೆಲ್​ ಮಾಲೀಕರ ವಿರುದ್ಧವೂ ಕೂಗಾಡಿದರು ಎಂದು ಸೆಕ್ಯೂರಿಟಿ ಗಾರ್ಡ್​ ಹೇಳಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಅಂದು ರಾತ್ರಿ ದರ್ಶನ್​ ಅವರ ವರ್ತನೆ ಹೇಗಿತ್ತು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಘಟನೆ ನಡೆದ ದಿನದಂದು ಇವರೆಲ್ಲರೂ ಪ್ರತ್ಯಕ್ಷದರ್ಶಿಗಳಾಗಿದ್ದರಂತೆ.
ದರ್ಶನ್​ ಹೇಳಿಕೆ ಕುತೂಹಲದರ್ಶನ್​ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದ್ದು, ಇದಕ್ಕೆಲ್ಲ ದರ್ಶನ್​ ಅವರೇ ಉತ್ತರ ನೀಡಬೇಕಾಗುತ್ತದೆ. ಏಕೆಂದರೆ ಅವರನ್ನು ಬೆಂಬಲಿಸುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅವರದ್ದು ಏನೂ ತಪ್ಪಿಲ್ಲ ಎಂದು ಈಗಲೂ ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದು, ದರ್ಶನ್​ ಪ್ರಕರಣ ಕುರಿತು ನೀಡುವ ಸಮರ್ಥನೆ ಮೇಲೆ ಇಡೀ ಪ್ರಕರಣ ನಿಂತಿದೆ.
ಅಪಘಾತದಿಂದ ಹೊರಬಿತ್ತು ಗಾಂಜಾ ಸಾಗಾಣಿಕೆ ಜಾಲ!

‘ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳೇ, ಪರೀಕ್ಷಾ ಕೇಂದ್ರಗಳು ಸುರಕ್ಷಿತ ತಾಣ- ನಿಶ್ಚಿಂತೆಯಿಂದ ಬನ್ನಿ’

ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 18 =
Remember me
