ಕೋಲಾರ:ಜೀ ಕನ್ನಡದ ಪ್ರಸಿದ್ಧ ಸಿಂಗಿಂಗ್​ ರಿಯಾಲಿಟಿ ಶೋ “ಸರಿಗಮಪ”ದಲ್ಲಿ ಸ್ಪರ್ಧಿಸಿದ್ದ ಪೊಲೀಸ್ ಪೇದೆಯೊಬ್ಬರ ಪತ್ನಿ ಮಹಾಮಾರಿ ಕರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ.
ಜ್ಯೋತಿ ಸುಬ್ರಮಣಿ (30)​ ಮೃತ ದುರ್ದೈವಿ. ಇವರು ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೋಲಾರ ತಾಲೂಕಿನ ಶಾನಬೋಗನಹಳ್ಳಿ ಮೂಲದ ಸುಬ್ರಮಣಿ ಅವರ ಪತ್ನಿ.
ಜ್ಯೋತಿ ಅವರು ಕಳೆದ‌ ಒಂದು ವಾರದಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸೋಮವಾರ ರಾತ್ರಿ ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸುಬ್ರಮಣಿ ಅವರು ಪೊಲೀಸ್​ ಪೇದೆ ಮಾತ್ರವಲ್ಲದೆ ಉತ್ತಮ ಗಾಯಕರು ಆಗಿದ್ದಾರೆ. ಸರಿಗಮಪ ಶೋನಲ್ಲಿ ಭಾಗವಹಿಸಿದ ಬಳಿಕ ಅವರಿಗೆ ಒಳ್ಳೆಯ ಹೆಸರು ಬಂದಿತ್ತು. ಒಂದು ಎಪಿಸೋಡ್​ನಲ್ಲಿ ಸುಬ್ರಮಣಿಪತ್ನಿ ಜ್ಯೋತಿ ಅವರು ಸಹ ಪಾಲ್ಗೊಂಡಿದ್ದರು.
ಇನ್ನು ಕರೊನಾ ಸಂಕಷ್ಟದ ಸಮಯದಲ್ಲಿ ಹಾಡಿನ ಮೂಲಕ ಜಾಗೃತಿಯನ್ನು ಸಹ ಸುಬ್ರಮಣಿ ಅವರು ಮೂಡಿಸಿದ್ದರು. ಅನೇಕ ಸುದ್ದಿ ಮಾಧ್ಯಮಗಳಲ್ಲಿಯು ಸಂದರ್ಶನ ನೀಡಿರುವ ಸುಬ್ರಮಣಿ ಗಾಯನದಿಂದಲೇ ಜನಮನ್ನಣೆ ಪಡೆದುಕೊಂಡಿದ್ದಾರೆ. ಕರ್ತವ್ಯದ ನಡುವೆಯೇ ತಮ್ಮ ಪತ್ನಿಯನ್ನು ಕಳೆದುಕೊಂಡು ಇದೀಗ ಸುಬ್ರಮಣಿ ಅವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.(ದಿಗ್ವಿಜಯ ನ್ಯೂಸ್​​)
ಮುಗಿದ ಬಿಗ್ ಬಾಸ್ ಆಟ, ಮನೆಯಲ್ಲಿಯೇ ನೋಟ

ಮತ್ತೆ ಮುಂದೋಯ್ತಾ ಕೆಜಿಎಫ್? ಮೂರು ಪ್ಯಾನ್ ಇಂಡಿಯಾ ಸಿನಿಮಾಗಳು ಗೊಂದಲದಲ್ಲಿ

ಸೋನಾಕ್ಷಿಗೆ ಮನೆಯಲ್ಲಿರುವುದು ಅಭ್ಯಾಸವಾಗಿ ಹೋಗಿದೆಯಂತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
