ಬೆಂಗಳೂರು:ಲೇಔಟ್​ ನಿವೇಶನ ಹಂಚಿಕೆಯಲ್ಲಿ ಪಾಲುದಾರನಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಎಂಎಲ್​ಸಿ ಆರ್​.ಶಂಕರ್​ ಅವರ ಪುತ್ರ ಮತ್ತು ಪತ್ನಿಯ ಹೆಸರು ಕೇಳಿಬಂದಿದ್ದು, ಎಫ್​ಐಆರ್​ ಸಹ ದಾಖಲಾಗಿದೆ.
ಬಿಜೆಪಿ ಎಂಎಲ್​ಸಿ ಆರ್​. ಶಂಕರ್​ ಅವರ ಪತ್ನಿ ಧನಲಕ್ಷ್ಮಿ ಆರ್ ಶಂಕರ್ ಹಾಗೂ ಪುತ್ರ ಜ್ಯೋತಿರ್ ತೇಜೋಮಯಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ಎಫ್​ಐಆರ್​ ದಾಖಲಾಗಿದೆ. ಅಲ್ಲದೆ, ರಾಜಣ್ಣ ಎಂಬ ಇನ್ನೊರ್ವ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.
ಅಕ್ರಮವಾಗಿ 23 ಸೈಟ್​ಗಳನ್ನು ಮಾರಾಟ ಮಾಡುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಕಂಪನಿಯ ಪಾಲುದಾರರಾದ ಪ್ರಭಾವತಿ ಎಂಬುವರು ಇಂದಿರಾನಗರ ಠಾಣೆಗೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಶಾಸಕನ ಪುತ್ರ, ಪತ್ನಿ ಸೇರಿ ಒಟ್ಟು ನಾಲ್ವರು ಕಂಪನಿ ಆರಂಭಿಸಿದ್ದರು. ಬಳಿಕ ಕಂಪನಿ ಹೆಸರಿನಲ್ಲಿ ಬಿದರಹಳ್ಳಿಯ ಬೊಮ್ಮನಹಳ್ಳಿಯಲ್ಲಿ ಲೇಔಟ್ ನಿರ್ಮಾಣ‌ ಮಾಡಿದ್ದರು. ನಿರ್ಮಾಣದ ವೇಳೆ ನಾಲ್ವರು ಪಾಲುದಾರರ ನಡುವೆ ಒಪ್ಪಂದ ಆಗಿತ್ತು. ಸೈಟ್ ಹಂಚಿಕೆ ವೇಳೆ ಎಲ್ಲರ ಸಹಿ ಕಡ್ಡಾಯ ಎಂಬ ಒಪ್ಪಂದಕ್ಕೆ ಎಲ್ಲರು ಸಹಿ ಹಾಕಿದ್ದರು. ಇದೀಗ ಪ್ರಭಾವತಿ ಅವರನ್ನು ಬಿಟ್ಟು ಇನ್ನುಳಿದ ಮೂವರು ಸೈಟ್ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಅಕ್ರಮವಾಗಿ ಬ್ಯಾಂಕ್​​ನಲ್ಲಿ ಖಾತೆ ತೆಗೆದು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಪ್ರಭಾವತಿ ಅವರು ಉಲ್ಲೇಖಿಸಿದ್ದಾರೆ. ಸದ್ಯ ಮೂವರ ವಿರುದ್ಧ ಪ್ರಕರಣ ದಾಖಲಿಸಿರುವ ಇಂದಿರಾನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ನದಿ ಪ್ರಪಾತಕ್ಕೆ ಉರುಳಿದ ರಿಕ್ಷಾ; ಮಹಿಳೆ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ

ಪಡಿತರ ಅಕ್ಕಿಯಲ್ಲಿ ರಸಗೊಬ್ಬರ ಕಂಡು ಕಂಗಾಲಾದ ತುಮಕೂರು ಕುಟುಂಬ: ಗ್ರಾಮಸ್ಥರಲ್ಲಿ ಆತಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
