ಮೈಸೂರು:ಪಾಲಿಕೆ ಆಯುಕ್ತೆ ಸ್ಥಾನದಿಂದ ವರ್ಗಾವಣೆಯಾದ ಬಳಿಕ ಅಧಿಕಾರ ಹಸ್ತಾಂತರ ಮಾಡಿ, ಮಾಧ್ಯಮಗಳೊಂದಿಗೆ ಮಾತನಾಡಿದ ಐಎಎಸ್​ ಅಧಿಕಾರಿ ಶಿಲ್ಪಾ ನಾಗ್​, ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದರು.
ಯಾರ ಮನೆಯಲ್ಲಿ ರಿಯಲ್ ಎಸ್ಟೇಟ್ ಡೀಲರ್ ಇದ್ದಾರೆ. ಯಾರ ಮನೆಯಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್ಸ್ ಇದ್ದಾರೆ ಅನ್ನೋದು ಗೊತ್ತಿದೆ. ನನ್ನ ಟ್ರಾಕ್ ರೆಕಾರ್ಡ್ ಮತ್ತು ಅವರ ಟ್ರಾಕ್ ರೆಕಾರ್ಡ್ ನೋಡಲಿ ಎಂದು ಸವಾಲು ಹಾಕಿದರು.
ಅನಧಿಕೃತ ವ್ಯಕ್ತಿಯನ್ನು ಅಧಿಕೃತ ಮನೆಗೆ ಕರೆಸಿಕೊಂಡು ಯಾವ ಮಾಹಿತಿ ನೀಡಿದ್ರು ಅನ್ನೋದು ಗೊತ್ತಿದೆ. ನನ್ನ ಜೀವನದಲ್ಲೇ ಇಂತಹ ಅಧಿಕಾರಿಯನ್ನು ನೋಡಿರಲಿಲ್ಲ. ಅವರು ಯಾವುದಕ್ಕೆ ಲೆಕ್ಕ ಕೇಳಿದ್ರು ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದೇನೆ. ಸುಮ್ಮನೆ ಅನವಶ್ಯಕವಾಗಿ ಗಬ್ಬೆಬ್ಬಿಸುವಂತಹ ಕೆಲಸ ಮಾಡಿದ್ರು. ಯಾವ ರೀತಿಯ ತನಿಖೆ ಬೇಕಾದ್ರು ಮಾಡಿಸಲಿ ಅದಕ್ಕೆ ದಾಖಲೆ ಇದೆ ಎಂದು ಹೇಳಿದರು.
12 ಕೋಟಿ ರೂ. ಅಂತ ಹೇಳಿದ್ದಾರೆ. ಅದ್ಯಾವ 12 ಕೋಟಿ ಅಂತ ಅವರೇ ಹೇಳಲಿ. ಒಂದೂ ಪೈಸೆಯನ್ನು ನಾವು ಕ್ಯಾಶ್​ನಲ್ಲಿ ತೆಗೆದುಕೊಂಡಿಲ್ಲ. ಅದಕ್ಕೆ ದಾಖಲೆ ಪಾಲಿಕೆಯಲ್ಲೇ ಇದೆ. ಇದು ಕೇವಲ ಮೂರು ದಿನದಲ್ಲೇ ಉಂಟಾದ ಗೊಂದಲ ಅಷ್ಟೆ. ಮೈಸೂರಿನಲ್ಲಿ ಯಾರೇ ಅಧಿಕಾರಿ ಬಂದ್ರು ಕೆಲಸ ಮಾಡ್ತಾರೆ. ಆದ್ರೆ ಹಾಳು ಮಾಡುವಂತ ಅಧಿಕಾರಿ ಬೇಡ. ಇದೆ ಮಾತನ್ನು ನಾನು ಹೇಳಿದ್ದೇನೆ. ನಾನು ಇಂತಹ ಮಾತನಾಡಿರುವುದಕ್ಕೆ ಬೇಸರ ಇಲ್ಲ ಎಂದರು.
ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡ್ತೇನೆ. ಸೋಮವಾರ ಹೋಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದು ನಿರ್ಗಮಿತ ಆಯುಕ್ತೆ ಶಿಲ್ಪಾನಾಗ್ ಹೇಳಿದರು.
ಮೈಸೂರಿನಲ್ಲಿ ಎಲ್ಲರೂ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಡಿಸಿ, ಪೊಲೀಸ್ ಇಲಾಖೆ ಸೇರಿ ಪಾಲಿಕೆ ಅಧಿಕಾರಿಗಳು ಸಹ ಕೆಲಸ ಮಾಡಿದ್ದಾರೆ. ಯಾರು ಸಹ ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿಲ್ಲ. ಎಲ್ಲರೂ ಹೊರಗೆ ಬಂದು ಉತ್ತಮವಾದ ಕೆಲಸ ಮಾಡಿದ್ದಾರೆ. ಮೈಸೂರಿನ ಜನರು ಅತ್ಯುತ್ತಮವಾದ ಸಹಕಾರ ನೀಡಿದ್ದಾರೆ. ನಾವು ಮಾಡಿದ ಆದೇಶವನ್ನು ಜನರು ಪರಿಪಾಲನೆ ಮಾಡಿದ್ದಾರೆ. ಮೈಸೂರಿನ ಜನರು, ಅಧಿಕಾರಿ ವರ್ಗ ಮಾಧ್ಯಮದವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿಯಾಗಿದೆ ಎಂದರು.(ದಿಗ್ವಿಜಯ ನ್ಯೂಸ್​)
ಹೇಳಿಬಿಡು ಹುಡುಗಿ… ನೀ ಚುಚ್ಚಿದ್ದು ನನ್ನ ತೋಳಿಗೋ, ಹೃದಯಕ್ಕೋ… ಅದು ಒಲವಿನ ಸೂಜಿಯೋ, ಮೊಂಡಾದದ್ದೊ?

ಸಹೋದ್ಯೋಗಿ ಮಹಿಳೆಯೊಂದಿಗೆ ರೆಸಾರ್ಟ್​ನಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಎಸ್​ಐ!

ಮಲಯಾಳಿ ನರ್ಸ್‌ಗಳಿಗೆ ಶಾಕ್‌ ಕೊಟ್ಟ ಸರ್ಕಾರ: ಭಾಷೆ ಬಳಸದಿರಲು ಕಟ್ಟಪ್ಪಣೆ, ಇಲ್ಲದಿದ್ರೆ ಶಿಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 5 =
Remember me
