ಶಿವಮೊಗ್ಗ:ಪ್ರೀತಿಯಲ್ಲಿ ಮೋಸ ಹೋಗಿದಕ್ಕೆ ಯುವಕನೊಬ್ಬ ಮನನೊಂದು ಸೆಲ್ಫಿ ವಿಡಿಯೋ ಮಾಡಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಸೊರಬದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಸಿಕೆರೆಯ ನಿವಾಸಿ ದಿಲೀಪ್ ಮೃತ ಯುವಕ. ಕೆಲ‌ ವರ್ಷಗಳಿಂದ ದಿಲೀಪ್​ ಕುಟುಂಬ ಬೆಂಗಳೂರಿನಲ್ಲಿ ವಾಸವಿದೆ. ದಿಲೀಪ್ ಮತ್ತು ಕುಟುಂಬಸ್ಥರು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಗಾರ್ಮೆಂಟ್ಸ್​ನಲ್ಲಿ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮದ ಯುವತಿಯ ಪರಿಚಯವಾಗಿತ್ತು.
ದಿಲೀಪ್ ಮತ್ತು ಯುವತಿ ಇಬ್ಬರು ಸಹ ಕೆಲ ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಮನೆಯ ಕಾರಣ ನೀಡಿ ಯುವತಿ ಪ್ರೀತಿ ಮಾಡೋದಕ್ಕೆ ನಿರಾಕರಿಸಿದ್ದಾಳೆ. ಅಲ್ಲದೆ, ಅಂತರ ಕಾಯ್ದುಕೊಂಡಿದ್ದಾಳೆ. ಇದರಿಂದ ಮನನೊಂದು ದಿಲೀಪ್​ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ.
ಯುವತಿ ವಾಸವಿರುವ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆರೆ ಏರಿ ಮೇಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲಿನ ಸ್ಥಳಿಯರು ಆಕಸ್ಮಿಕವಾಗಿ ದಿಲೀಪ್​ ಬಿದ್ದಿರುವುದನ್ನು ನೋಡಿದ್ದಾರೆ. ಪಕ್ಕದಲ್ಲೇ ವಿಷದ ಬಾಟಲಿಯನ್ನು ನೋಡಿ ತಕ್ಷಣ ದಿಲೀಪ್​ನನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಆತ ಬದುಕುಳಿಯಲಿಲ್ಲ.
ಸದ್ಯ ಯುವಕ ರೆಕಾರ್ಡ್‌ ಮಾಡಿರುವ‌ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
VIDEO: ಪತಿಯಿಂದಲೇ ಕೊಲೆಯಾದ ಖ್ಯಾತ ಬ್ಲಾಗರ್: ಕೈಕಟ್ಟಿ ನಾಲ್ಕನೇ ಮಹಡಿಯಿಂದ ತಳ್ಳಿ ಹತ್ಯೆ!

ದೋಣಿಯಾಟದ ವೇಳೆ ನದಿಯಲ್ಲಿ ಪತ್ತೆಯಾಯ್ತು ಐಫೋನ್: ಸ್ವಿಚ್​ ಆನ್​ ಮಾಡಿದಾಗ ಕಾದಿತ್ತು ಶಾಕ್​!

ಟೆಕ್ಕಿ ಪ್ರಾಣ ಕಸಿದ ವೀಕೆಂಡ್​ ಜಾಲಿ ರೈಡ್​: ಕುಣಿಗಲ್​ನಲ್ಲಿ ಬೈಕ್​ ಸಮೇತ ಬ್ರಿಡ್ಜ್​ ಮೇಲಿಂದ ಬಿದ್ದು ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
