ಶಿವಮೊಗ್ಗ:ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರ ಜನರು ಆತಂಕಕ್ಕೆ ಒಳಗಾಗಿದ್ದರೆ. ಮುಂಜಾನೆ ಸಮಯವೇ ಭಾರಿ ಶಬ್ದದೊಂದಿಗೆ ಭೂಕಂಪನವಾಗಿದ್ದು, ಸವಿ ನಿದ್ದೆಯಲ್ಲಿದ್ದ ಜನರು ಆಘಾತಕ್ಕೊಳಗಾಗಿದ್ದಾರೆ.
ಇಂದು ಮುಂಜಾನೆ 3.50 4 ಗಂಟೆಯವರೆಗೂ ಎರಡಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿರುವುದಾಗಿ ಜನರು ಮಾಹಿತಿ ನೀಡಿದ್ದಾರೆ. ಭಾರೀ ಶಬ್ದದೊಂದಿಗೆ ಭೂಕಂಪನವಾಗಿದ್ದು, ಮನೆಯಲ್ಲಿದ್ದ ಸಾಮಾಗ್ರಿಗಳು ಅಲುಗಾಡಿರುವುದಾಗಿ ತಿಳಿದುಬಂದಿದೆ. ರಿಕ್ಟರ್​ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪನ ದಾಖಲಾಗಿದೆ.
ಸ್ಥಳೀಯರ ಪ್ರಕಾರ ಮೊದಲಿಗೆ ಭೂಮಿ ಕಂಪಿಸಿದೆ. ಇದಾದ ಹತ್ತು ನಿಮಿಷದ ಬಳಿಕ ಭಾರಿ ಶಬ್ದ ಕೇಳಿಸಿದೆ. ಆದರೆ, ಎರಡನೇ ಬಾರಿ ಭೂಮಿ ಕಂಪಿಸಲಿಲ್ಲ. ಕೇವಲ ಶಬ್ದ ಮಾತ್ರ ಕೇಳಿದೆವು ಎಂದು ಜನರು ತಿಳಿಸಿದ್ದಾರೆ.
ಆ್ಯಂಡ್ರಾಯ್ಡ್​ ಅರ್ಥ್​ಕ್ವೇಕ್​ ಅಲರ್ಟ್ಸ್​ ಸಿಸ್ಟಮ್​ ಆ್ಯಪ್​ ಮಾಹಿತಿ ಪ್ರಕಾರ ಬೆಳಗ್ಗೆ 3.55ಕ್ಕೆ ಸರಿಯಾಗಿ ಭೂಮಿ ಕಂಪಿಸಿರುವುದಾಗಿ ತಿಳಿದುಬಂದಿದೆ. ಶಿರಾಳಕೊಪ್ಪದ 3 ಕಿ.ಮೀ ವ್ಯಾಪ್ತಿಯಲ್ಲಿ ಭೂಂಕಪನ ಸಂಭವಿಸಿದೆ. ಆದರೆ, ಈ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ. ಅಧಿಕಾರಿಗಳು ಏನು ಹೇಳುತ್ತಾರೆ ಎಂಬುದರ ಬಗ್ಗೆ ಕುತೂಹಲವಿದೆ. ಆದರೆ, ಜನರು ಮಾತ್ರ ಎರಡು ಬಾರಿ ಭೂಕಂಪನದ ಅನುಭವದಿಂದಾಗಿ ಬೆಚ್ಚಿಬಿದ್ದಿದ್ದಾರೆ.
ಮಾವಿನ ಹಣ್ಣುಗಳನ್ನು ಕದ್ದು ಸಸ್ಪೆಂಡ್​ ಆದ ಪೊಲೀಸ್​ ಅಧಿಕಾರಿಯ ಹಿನ್ನೆಲೆ ತಿಳಿದು ಅಧಿಕಾರಿಗಳೇ ಶಾಕ್​!

ಡಿವೋರ್ಸ್​ಗೆ ಗುಡ್​ಬೈ ಹೇಳಿ ಮತ್ತೆ ಒಂದಾಗಲು ಮುಂದಾದ ಧನುಷ್​-ಐಶ್ವರ್ಯಾ: ಸ್ಟಾರ್​ ದಂಪತಿಯ ಮನವೊಲಿಸಿದ್ದು ಯಾರು?

ನಿವೃತ್ತ ಪೊಲೀಸರಿಂದ ಪಿಎಫ್​ಐಗೆ ತರಬೇತಿ?; ಬಂಧಿತರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
