ಬಳ್ಳಾರಿ:ತಾಕತ್ ಇದ್ರೆ ಬಳ್ಳಾರಿಗೆ ಬನ್ನಿ ನೋಡೋಣ ಎಂದು ಈ ಹಿಂದೆ ಜನಾರ್ದನ ರೆಡ್ಡಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಕಿದ್ದ ಸವಾಲಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗಿದೆ.
ಜನಾರ್ದನ ರೆಡ್ಡಿ ಅವರು ಮತ್ತೆ ಬಳ್ಳಾರಿಗೆ ಬರ್ತಿದ್ದಂತೆ ಹಳೆಯ ವಿಡಿಯೋವನ್ನು ಮತ್ತೆ ಶೇರ್​ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯರನ್ನು ರೆಡ್ಡಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.
2010ರಲ್ಲಿ ವಿಧಾನಸಭೆ ಕಲಾಪದ ವೇಳೆ ಕಾಂಗ್ರೆಸ್ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ತಾಕತ್ತಿದ್ದರೆ ಬಳ್ಳಾರಿಗೆ ಬಾ ನೋಡಿಕೊಳ್ಳುತ್ತೇವೆ ಎಂದು ರೆಡ್ಡಿ ಬ್ರದರ್ಸ್ ತೊಡೆ ತಟ್ಟಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಸಿದ್ದರಾಮಯ್ಯ ಪಾದಯಾತ್ರೆ ಮೂಲಕ ಬಳ್ಳಾರಿಗೆ ಬಂದಿದ್ದರು. ಇತ್ತ ಅಕ್ರಮ ಗಣಿಗಾರಿಕೆಯಲ್ಲಿ ರೆಡ್ಡಿ ಜೈಲು ಸೇರಿದ್ದರು. ಅಲ್ಲದೆ, ಬಳ್ಳಾರಿಗೆ ಬರದಂತೆ ಕೋರ್ಟ್​ ಷರತ್ತು ಕೂಡ ವಿಧಿಸಿತ್ತು. ಬಳಿಕ ಚುನಾವಣೆ ಪ್ರಚಾರಕ್ಕೆ ಬಂದಿದ್ದಾಗ ಸಿದ್ದು ನನಗೆ ತಾಕತ್ ಇದ್ರೆ ಬಳ್ಳಾರಿಗೆ ಬಾ ಅಂತಿದ್ದ ರೆಡ್ಡಿ, ಈಗ ನೀನಗೆ ತಾಕತ್ ಇದ್ರೆ ಬಳ್ಳಾರಿ ಗೆ ಬಾ ಎಂದಿದ್ದರು.
ಈಗ ಸುಪ್ರೀಂಕೋರ್ಟ್​ ಅನುಮತಿ ಪಡೆದು ರೆಡ್ಡಿ ಬಳ್ಳಾರಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದು ಹಳೆಯ ವೀಡಿಯೋ ಹಾಕಿ ಬಂದಿದ್ದೇನೆ ನೋಡು ತಾಕತ್ತಿದ್ರೆ ಕಟ್ಹಾಕು ಅಂತಾ ರೆಡ್ಡಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದು ಅಭಿಮಾನಿಗಳು ಕೇವಲ 8 ದಿನವಷ್ಟೇ.. ಅದು ಬಳ್ಳಾರಿಗೆ ಬರಬೇಕು ಅಂದ್ರೆ ಕೋರ್ಟ್​ ಅನುಮತಿ ಪಡೆದುಕೊಂಡು ಬರಬೇಕು. ನಮ್ಮ ಸಿದ್ದರಾಮಯ್ಯ ಅವರಿಗೆ ಯಾರ ಅನುಮತಿಯು ಬೇಕಿಲ್ಲ ಎಂದು ರೆಡ್ಡಿ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)

ಯುವಕನ ತೋಳಿನಲ್ಲಿ ಟ್ಯಾಟೂ ಕ್ಯುಆರ್​ ಕೋಡ್: ಸ್ಕ್ಯಾನ್​ ಮಾಡಿದವರಿಗೆ ಕಾದಿತ್ತು ಅಚ್ಚರಿ..!​

ಅಪಾಯದಲ್ಲಿ ಭಾರತದ ಮಕ್ಕಳು: 33 ದೇಶಗಳ 100 ಕೋಟಿ ಮಕ್ಕಳ ಜೀವಕ್ಕೆ ಹವಾಮಾನ ವೈಪರೀತ್ಯ ಕಂಟಕ

ಪ್ರಭಾಸ್ ಜತೆ ಮದುವೆ ಆಗುವಾಸೆ; ನಟಿ ಕೃತಿ ಸನಾನ್…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − ten =
Remember me
