ಹುಬ್ಬಳ್ಳಿ:ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಕೇಕ್​ ಕತ್ತರಿಸುವ ಮೂಲಕ ಕಾಂಗ್ರೆಸ್​ ನಾಯಕರ ಸಮ್ಮುಖದಲ್ಲಿ ಸಿದ್ದರಾಮಯ್ಯ ಅವರು ಹುಟ್ಟುಹಬ್ಬ ಆಚರಿಸಿಕೊಂಡರು.
ಕಾಂಗ್ರೆಸ್​ನಲ್ಲಿ ಸದ್ಯ ಸಿದ್ದು ಮತ್ತು ಡಿ.ಕೆ. ಶಿವಕುಮಾರ್​ ಎಂಬ ಎರಡು ಬಣ ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಹುಟ್ಟುಹಬ್ಬ ಆಚರಣೆ ವೇಳೆ ಮನಸ್ತಾಪಗಳನ್ನು ಬದಿಗಿಟ್ಟು ಪರಸ್ಪರ ಕೇಕ್​ ತಿನ್ನಿಸಿ ಸಂಭ್ರಮಿಸುವ ಮೂಲಕ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸಂದೇಶವನ್ನು ಸಾರುವ ಪ್ರಯತ್ನ ಮಾಡಿದರು.
ಡಿಕೆಶಿ ಮಾತ್ರವಲ್ಲದೆ, ಕೆ.ಜೆ. ಜಾರ್ಜ್​ ಮತ್ತು ಆರ್​.ವಿ. ದೇಶಪಾಂಡೆ ಸೇರಿದಂತೆ ಅನೇಕ ಕಾಂಗ್ರೆಸ್​ ನಾಯಕರು ಸಿದ್ದು ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ನೆಚ್ಚಿನ ನಾಯಕನಿಗೆ ಕೇಕ್​ ತಿನ್ನಿಸಿ ಶುಭಕೋರಿದರು.
ಸಿದ್ದರಾಮಯ್ಯ ಅವರು 75ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರಿಗೆ ಅಭಿನಂದನೆ ಸಲ್ಲಿಸಲು ದಾವಣಗೆರೆಯಲ್ಲಿ ಇಂದು ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಹ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಜನರು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ದಾವಣಗೆರೆಯಲ್ಲಿ ಬೃಹತ್​ ವೇದಿಕೆ ಸಜ್ಜಾಗಿದೆ. ಆದರೆ, ಸಿದ್ದರಾಮೋತ್ಸವಕ್ಕೆ ಮಳೆ ಭೀತಿ ಎದುರಾಗಿದೆ.(ದಿಗ್ವಿಜಯ ನ್ಯೂಸ್​)
ಶೀತ, ನೆಗಡಿ, ಜ್ವರ ಹೆಚ್ಚಳ: ನಿರಂತರ ಮಳೆಯಿಂದ ಸೋಂಕು ರೋಗಗಳ ಏರಿಕೆ

ಇಂಡಿಯನ್-2ನಲ್ಲಿ ದೀಪಿಕಾ, ಕತ್ರಿನಾ; ಕಮಲ್ ಚಿತ್ರದಿಂದ ಕಾಜಲ್ ಔಟ್

ಕಾರಣ ನಾನೊಬ್ಬನೇ!; ಪೆಟ್ರೋಮ್ಯಾಕ್ಸ್ ಸೋಲಿಗೆ ಕ್ಷಮೆ ಕೇಳಿದ ವಿಜಯಪ್ರಸಾದ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eleven =
Remember me
