ರಾಣೇಬೆನ್ನೂರು:ದಕ್ಷಿಣ ಭಾತದಲ್ಲಿಯೇ ಬೃಹತ್ ಎಂದು ಪ್ರಸಿದ್ಧವಾಗಿದ್ದ ತಾಲೂಕಿನ ಲಿಂಗದಹಳ್ಳಿಯ ಐತಿಹಾಸಿಕ ಪುರಾತನ ಸ್ಪಟಿಕಲಿಂಗ ಸೋಮವಾರ ರಾತ್ರಿ ಕಳ್ಳತನವಾಗಿದೆ.
ಲಿಂಗದಹಳ್ಳಿಯ ಹಿರೇಮಠದಲ್ಲಿ ಸ್ಪಟಿಕಲಿಂಗ ಇತ್ತು. ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಲಿಂಗದ ಪೂಜೆ ಮಾಡುತ್ತಿದ್ದರು. 8ನೇ ಶತಮಾನದ ಬೆಲೆಕಟ್ಟಲಾಗದ ಸ್ಪಟಿಕಲಿಂಗ ಇದಾಗಿತ್ತು.
ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನಿನ್ನೆ ಕೊಟ್ಟೂರಿಗೆ ಹೋಗಿದ್ದನ್ನು ಗಮನಿಸಿದ ಖದೀಮರು ಮಠದಲ್ಲಿದ್ದ ಸಿಸಿ ಕ್ಯಾಮರಾ ಬಂದ್ ಮಾಡಿ ಕಳ್ಳತನ ಮಾಡಿದ್ದಾರೆ.
ಮಂಗಳವಾರ ಬೆಳಗ್ಗೆ ಸ್ವಾಮೀಜಿ ಮಠಕ್ಕೆ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೆಬೆನ್ನೂರ ತಾಲೂಕಿನ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಆಕೆಯ ಕೈ ಕತ್ತರಿಸಿದ ಗಂಡ: ಅಸೂಯೆ ಜತೆಗೆ ಇನ್ನೊಂದು ಕಾರಣವೂ ಇತ್ತು!

ಬಡ ದಲಿತರಿಗೆ ನಿಮ್ಮ ಪಕ್ಷ ಟಿಕೆಟ್ ನೀಡುವುದು ಯಾವಾಗ? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಲೈಂಗಿಕ ಸಂಪರ್ಕ ಸೇರಿದಂತೆ ಅನೇಕ ಪ್ರಶ್ನೆಗೆ ಮುಕ್ತವಾಗಿ ಉತ್ತರಿಸಿದ ತನ್ನನ್ನು ತಾನೇ ಮದ್ವೆ ಆಗುತ್ತಿರೋ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 6 =
Remember me
