ಬೆಂಗಳೂರು:ಪ್ರೆಸ್​ ಕ್ಲಬ್​ ಆಫ್​​​ ಬೆಂಗಳೂರು ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಆರ್​.ಶ್ರೀಧರ್​, ಭಾನುವಾರ ಪುನಾರಾಯ್ಕೆರಾದರು. ಉಪಾಧ್ಯಕ್ಷರಾಗಿ ವಿ.ಎನ್​. ಮೋಹನ್​ ಕುಮಾರ್​, ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್​ ಬೆಳ್ಳಿತಟ್ಟೆ, ಖಜಾಂಚಿಯಾಗಿ ಜಿ.ಗಣೇಶ್​, ಕಾರ್ಯದರ್ಶಿಯಾಗಿ ಜಿ.ವೈ. ಮಂಜುನಾಥ್​, ಜಂಟಿ ಕಾರ್ಯದರ್ಶಿಯಾಗಿ ಧರಣೇಶ್​, ಮಹಿಳಾ ಸ್ಥಾನದಲ್ಲಿ ಮಿನಿ ತೇಜಸ್ವಿ ಗೆಲುವಿನ ನಗೆ ಬೀರಿದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವಣ್ಣ, ಶರಣಬಸಪ್ಪ, ಯಾಸ್ನಫ್​​ ಮುಸ್ತಾಕ್​, ಮುತ್ತಾಜ್​ ಅಲೀಮ್​, ರೋಹಿಣಿ ಅಡಿಗ ಹಾಗೂ ಮಂಜುನಾಥ್​ ಆಯ್ಕೆಯಾದರು. ಒಟ್ಟು 1,040 ಮತದಾರರ ಪೈಕಿ 767 ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಆರ್​.ಶ್ರೀಧರ್​,ಧ್ಯಾನಪೂಣಚ್ಚ, ಸುಭಾಶ್​ ಹೂಗಾರ್​ ಸ್ಪರ್ಧಿಸಿದ್ದರು. ಒಟ್ಟು 404 ಮತ ಪಡೆದ ಶ್ರೀಧರ್​, ಗೆಲುವು ಸಾಧಿಸಿ ಸತತ 2ನೇ ಬಾರಿ ಮರು ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನದಲ್ಲಿ ವಿ.ಎನ್​.ಮೋಹನ್​ ಕುಮಾರ್​ 417, ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಶಿವಕುಮಾರ್​ ಬೆಳ್ಳಿತಟ್ಟೆ 336, ಖಜಾಂಚಿ ಸ್ಥಾನದಲ್ಲಿ ಜಿ.ಗಣೇಶ್​ 556, ಕಾರ್ಯದರ್ಶಿ ಸ್ಥಾನದಲ್ಲಿ ಜಿ.ವೈ. ಮಂಜುನಾಥ್​ 288, ಜಂಟಿ ಕಾರ್ಯದರ್ಶಿ ಸ್ಥಾನದಲ್ಲಿ ಧರಣೇಶ್​ 195, ಮಹಿಳಾ ಮೀಸಲು ಸ್ಥಾನದಲ್ಲಿ ಮಿನಿ ತೇಜಸ್ವಿ 491 ಮತ ಪಡೆದು ವಿಜಯಶಾಲಿಯಾದರು.
ಮೈಸೂರಿನಲ್ಲಿ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ
ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನದಲ್ಲಿ ರೋಹಿಣಿ ಅಡಿಗ 306, ಮಂಜುನಾಥ್​ 281,ಮುತ್ತಾಜ್​ ಅಲೀಮ್​ 272, ಯಾಸ್ನಫ್​​ ಮುಸ್ತಾಕ್​ 259, ಶರಣ ಬಸಪ್ಪ 258 ಹಾಗೂ ಶಿವಣ್ಣ 234 ಮತ ಪಡೆದು ಗೆಲುವಿನ ನಗೆ ಬೀರಿದರು. ಭಾನುವಾರ ಬೆಳಗ್ಗೆ 9 ಗಂಟೆಯಿಂದ 2 ಗಂಟೆವರೆಗೆ ಮತದಾನ ಮಾಡುವುದಕ್ಕೆ ಅವಕಾಶ ನೀಡಲಾಯಿತು. ಮತದಾರರು ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಮತಗಟ್ಟೆ ಅಧಿಕಾರಿ, ಮತದಾನಕ್ಕೆ ಹೆಚ್ಚಿನ ಸಮಯ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 19 =
Remember me
