ಮೈಸೂರು:ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ vs ಜೆಡಿಎಸ್ ಸಮರ ಮುಂದುವರಿದಿದೆ. ನಾಲೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದ ವೇಳೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಅಂತಾ ಅಧಿಕಾರಿಗಳ ವಿರುದ್ಧ ಸುಮಲತಾ ಅಂಬರೀಷ್​ ಕೂಗಾಡಿದ್ದಾರೆ.
ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಕೆ.ಆರ್.ನಗರದ ಚೌಕಹಳ್ಳಿಯಲ್ಲಿ ಗುದ್ದಲಿ ಪೂಜೆ ಏರ್ಪಡಿಸಲಾಗಿತ್ತು. ನಾಲೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲು ಸುಮಲತಾ ಬಂದಿದ್ದರು. ಕೇಂದ್ರ ಸರ್ಕಾರದ ಸಂಸದರ ನಿಧಿಯಿಂದ ಕೈಗೊಂಡಿರುವ ಕಾಮಗಾರಿ ಇದಾಗಿತ್ತು.
ಗುದ್ದಲಿ ಪೂಜೆ ಸ್ಥಳದಲ್ಲಿ ಸರಿಯಾಗಿ ಶಾಮಿಯಾನ, ಚೇರ್ ವ್ಯವಸ್ಥೆ ಮಾಡದಿದ್ದಕ್ಕೆ ಕೋಪಗೊಂಡ ಸುಮಲತಾ ಅವರು ಕಾರ್ಯಪಾಲಕ ಅಭಿಯಂತರ ಜಿ.ಜೆ.ಈರಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಜೆ.ಗುರುರಾಜ್ ಹಾಗೂ ಇಂಜಿನಿಯರ್ ಅಭಿಲಾಷ್‌ ಮತ್ತು ಕುಶಾಲನಗರ ವೃತ ಸೂಪರಿಂಟೆಂಡೆಂಟ್ ಇಂಜಿನಿಯರ್‌ ಚೆನ್ನಕೇಶವಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ನಿಗದಿಯಾಗಿದ್ದ ಗುದ್ದಲಿ ಪೂಜೆ ನೆರವೇರಿಸದೆ ವಾಪಸ್‌ ಆದರು.
ನೀವು ಸಂಸದರಿಗೆ ಅಗೌರವ ತೋರಿಸುತ್ತಿದ್ದೀರಿ. ಶಿಸ್ತು ಬದ್ಧ ವ್ಯಸ್ತೆ ಮಾಡಿಲ್ಲ. ಪ್ರತಿ ಬಾರಿ ಹೀಗೆ ಮಾಡುತ್ತೀರಿ. ನಿಮ್ಮ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ದೂರು ನೀಡಿ ಶಿಸ್ತು ಕ್ರಮಕ್ಕೆ ಒತ್ತಾಯ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.(ದಿಗ್ವಿಜಯ ನ್ಯೂಸ್​)
ಇಲ್ಲಿ ಬಟನ್ ಒತ್ತಿದರೆ ಅಲ್ಲಿ ವಿಮಾ‌ನ ಇಳಿಯಲು ಸಾಧ್ಯವಿಲ್ಲ: ಸಂಸದೆ ಸುಮಲತಾ ಅಂಬರೀಷ್​ ಗರಂ

ಅತ್ತೆಯ ಅಕ್ರಮ ಸಂಬಂಧ ಬಯಲು ಮಾಡಿದ ಸೊಸೆಗೆ ಭಾನುವಾರ ರಾತ್ರಿ ಕಾದಿತ್ತು ಬಿಗ್​ ಶಾಕ್​..!

ರಜನಿಕಾಂತ್​​ಗಾಗಿ 45 ವರ್ಷಗಳ ಹಿಂದೆಯೇ ಮೊದಲ ಫ್ಯಾನ್ಸ್​ ಕ್ಲಬ್​ ತೆರೆದ ಅಪ್ಪಟ್ಟ ಅಭಿಮಾನಿ ವಿಧಿವಶ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − eleven =
Remember me
