ಬೆಂಗಳೂರು:ರಿಯಲ್ ಎಸ್ಟೇಟ್ ಉದ್ಯಮಿಯ ಹೊಸ ಮನೆ ಗೃಹ ಪ್ರವೇಶ ಸಮಾರಂಭಕ್ಕೆ ತೃತೀಯ ಲಿಂಗಿಗಳ ಗುಂಪು ನುಗ್ಗಿ 25 ಸಾವಿರ ರೂ.ಗೆ ಬೇಡಿಕೆ ಒಡ್ಡಿ ಹಲ್ಲೆ ಮಾಡಿ ದಾಂಧಲೆ ನಡೆಸಿದ್ದಾರೆ.
ರಾಮಮೂರ್ತಿನಗರದ ಕಲ್ಕೆರೆ ಚನ್ನಸಂದ್ರದ ಪೂಜಾ ಗಾರ್ಡನ್ 2ನೇ ಹಂತದ ಲೋಕೇಶ್ ಎಂಬುವರ ಮನೆಯಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಲೋಕೇಶ್ ಪತ್ನಿ ಆಶಾ ಮತ್ತು ಮಾವ ಸೊನ್ನೇಗೌಡ, ಸಂಬಂಧಿ ಮಹೇಂದ್ರ ಎಂಬುವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 7.30ರಲ್ಲಿ ನಾಲ್ವರು ತೃತೀಯ ಲಿಂಗಿಗಳು, ಲೋಕೇಶ್ ಮನೆಗೆ ನುಗ್ಗಿದ್ದಾರೆ. ಮೊದಲು 10 ರೂ. ಕೊಟ್ಟು ದೃಷ್ಟಿ ತೆಗೆದು ಹಣ ಕೊಡುವಂತೆ ಲೋಕೇಶ್​ರನ್ನು ಕೇಳಿದ್ದಾರೆ. ಆನಂತರ 1 ಸಾವಿರ ರೂ. ಕೊಟ್ಟಿದ್ದಾರೆ. ಅದಕ್ಕೆ ಒಪ್ಪದ ತೃತೀಯ ಲಿಂಗಿಗಳು ನಮಗೆ 25 ಸಾವಿರ ರೂ. ಕೊಡುವಂತೆ ಒತ್ತಾಯಿಸಿದ್ದಾರೆ. ಅಷ್ಟೊಂದು ಹಣ ಇಲ್ಲ ಎಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ನೊಂದ ಲೋಕೇಶ್ ಪತ್ನಿ ಆಶಾ, ಹೊರಗೆ ಹೋಗುವಂತೆ ಹೇಳಿದಾಗ ಅವರ ಕೆನ್ನೆಗೆ ಹೊಡೆದಿದ್ದಾರೆ. ಗಲಾಟೆ ಮಾಡದಂತೆ ಬುದ್ಧಿ ಮಾತು ಹೇಳಿದ ಸಂಬಂಧಿ ಮಹೇಂದ್ರ ಮತ್ತು ಮಾವ ಸೊನ್ನೇಗೌಡ ಮೇಲೂ ಹಲ್ಲೆ ನಡೆಸಿದ್ದಾರೆ.
ಈ ಕುರಿತು ಲೋಕೇಶ್, ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಾ. ವಿಜಯ ಸಂಕೇಶ್ವರರ ಸಂದರ್ಶನ ಚಂದನ ವಾಹಿನಿಯಲ್ಲಿ ಇಂದು ಪ್ರಸಾರ

ಸೂಲಿಬೆಲೆಯಲ್ಲಿ ರಾಜಕಾಲುವೆಗಳ ಅವ್ಯವಸ್ಥೆ; ಮಳೆ ಬಂದರೆ ಮನೆಗೇ ನುಗ್ಗುತ್ತೆ ನೀರು ಒತ್ತುವರಿಯಿಂದ ಸಾರ್ವಜನಿಕರಿಗೆ ಸಂಕಷ್ಟ

ವಿಯೆನ್ನಾ ನಂ.1 ವಾಸಯೋಗ್ಯ ನಗರ; ಸಿರಿಯಾದ ರಾಜಧಾನಿ ಡಮಾಸ್ಕಸ್​ಗೆ ಕೊನೇ ಸ್ಥಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 7 =
Remember me
