ತುಮಕೂರು:ರಸ್ತೆಯಲ್ಲಿ ಸಿಕ್ಕ 45 ಸಾವಿರ ರೂಪಾಯಿ ಹಣವನ್ನು ಹಿಂತಿರುಗಿಸುವ ಮೂಲಕ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದಿರುವ ಘಟನೆ ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದಿದೆ.
ಶಿವಕುಮಾರ್ ಮಾನವೀಯತೆ ಮೆರೆದ ವ್ಯಕ್ತಿ. ಇವರು ಹೊಸಕೆರೆ ಬಳಿ ಫ್ರೆಂಡ್ಸ್ ಹೆಸರಿನಲ್ಲಿ ಡಾಬ ನಡೆಸುತ್ತಿದ್ದಾರೆ. ನಿನ್ನೆ (ಅ.1) ಬೆಳಗ್ಗೆ ಹೊಸಕೆರೆ ಗ್ರಾಮದ ದರ್ಶನ್ ಎಂಬ ಯುವಕ ಬೈಕ್​ನಲ್ಲಿ ತೆರಳುವಾಗ 45 ಸಾವಿರ ರೂಪಾಯಿ ಹಣವನ್ನು ರಸ್ತೆಯಲ್ಲಿ ಬಿಳಿಸಿಕೊಂಡು ಹೋಗಿದ್ದರು. ಅದೇ ರಸ್ತೆಯಲ್ಲಿ ಬಂದ ಶಿವಕುಮಾರ್​ಗೆ ಹಣ ಸಿಕ್ಕಿತ್ತು.
ಹಣ ಸಿಕ್ಕಿದ್ದರ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶಿವಕುಮಾರ್​ ಹರಿಬಿಟ್ಟಿದ್ದರು. ಹಣ ಕಳೆದುಕೊಂಡವರು ನನ್ನ ನಂಬರ್​ಗೆ ಕರೆ ಮಾಡಿ ನಿಮ್ಮ ಹಣ ಪಡೆದುಕೊಳ್ಳಿ ಎಂದಿದ್ದರು. ವಿಡಿಯೋ ನೋಡಿದ್ದ ದರ್ಶನ್​, ಶಿವಕುಮಾರ್​ಗೆ ಕರೆ ಮಾಡಿ ಮಾಹಿತಿ ಪಡೆದು, ಅವರ ಬಳಿ ಹೋಗಿ ಹಣ ಸಂಗ್ರಹಿಸಿಕೊಂಡು ಬಂದಿದ್ದಾರೆ.
ಇದೀಗ ಶಿವಕುಮಾರ್​ ಮಾನವೀಯತೆ ತುಮಕೂರಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಪಂದ್ಯ ಸೋತಿದ್ದಕ್ಕೆ ಹತಾಶೆಯಿಂದ ಮೈದಾನಕ್ಕೆ ನುಗ್ಗಿದ ಫ್ಯಾನ್ಸ್​: ಕಾಲ್ತುಳಿತದಿಂದ 127 ಮಂದಿ ದುರ್ಮರಣ

ಗಾಂಧಿ ಜಯಂತಿ‌ ಹಿನ್ನಲೆ ಇಂದಿನ ಜೋಡೋ ಯಾತ್ರೆಯ ಬೆಳಗಿನ ಪಾದಯಾತ್ರೆಗೆ ರಾಹುಲ್​ ಗಾಂಧಿ ಬ್ರೇಕ್​

ಆಚರಣೆಗಳ ಸುತ್ತ ಸಂಘರ್ಷದ ಕಥೆ: ವಿಜಯವಾಣಿ ಸಿನಿಮಾ ವಿಮರ್ಶೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
