ತುಮಕೂರು:ಸೊಸೆ ಮೇಲಿನ ಕೋಪಕ್ಕೆ ಏನು ಅರಿಯದ 2 ವರ್ಷದ ಪುಟಾಣಿ ಮೊಮ್ಮಗಳನ್ನು ಅತ್ತೆ ಬಲಿ ಪಡೆದಿರುವ ಅಮಾನವೀಯ ಘಟನೆ ಕುಣಿಗಲ್ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ನಡೆದಿದೆ.
ತ್ರಿಷಾ ಮೃತಪಟ್ಟ ಮಗು. ಹುಚ್ಚು ನಾಯಿ ಕಡಿತಕ್ಕೆ ಒಳಗಾದ 1 ತಿಂಗಳು 10 ದಿನದ ನಂತರ ಮಗು ಮೃತಪಟ್ಟಿದೆ. ಆರೋಪಿ ಜಯಮ್ಮ, ಹಸು ಮೇಯಿಸಲು ಹೊಲದ ಬಳಿ ಹೋಗುವಾಗ ತನ್ನ ಜತೆ ಮಗುವನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಹುಚ್ಚು ನಾಯಿಯೊಂದು ಹಸು ಹಾಗೂ ಮಗುವಿಗೆ ಕಚ್ಚಿತ್ತು. ಆದರೆ, ಸೊಸೆ ಮೇಲಿನ ಕೋಪದಿಂದ ಈ ವಿಚಾರವನ್ನು ಯಾರಿಗೂ ಹೇಳದೆ ಜಯಮ್ಮ ಮುಚ್ಚಿಟ್ಟಿದ್ದರು.‌
ಹುಚ್ಚು ನಾಯಿ ಕಡಿದ ಮೂರೇ ದಿನಕ್ಕೆ ಹಸು ಮೃತಪಟ್ಟಿತ್ತು. ಕಳೆದ ಒಂದು ವಾರದ ಹಿಂದೆ ಮಗು ತ್ರಿಷಾ ರಕ್ತ ವಾಂತಿ ಮಾಡಿಕೊಂಡಿತ್ತು. ಈ ವೇಳೆ ಪಾಲಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ಯಾವುದೋ ಬೆಕ್ಕು, ಇಲ್ಲ ನಾಯಿ ಕಚ್ಚಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು. ಮಗು ಗಂಭೀರ ಸ್ಥಿತಿ ತಲುಪಿದ ಬಳಿಕ ಜಯಮ್ಮ ಹುಚ್ಚು ನಾಯಿ ಕಡಿದ ಬಗ್ಗೆ ಬಾಯ್ಬಿಟ್ಟರು.
ಘಟನೆ ನಡೆದು 1 ತಿಂಗಳು 10 ದಿನಗಳ ಬಳಿಕ ಎಲ್ಲ ವಿಚಾರವನ್ನು ಜಯಮ್ಮ ತಿಳಿಸಿದರು. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಮಗ ಪುಟ್ಟರಾಜುವಿಗೆ 2 ವರ್ಷದ ಹಿಂದೆ ಚಿಕ್ಕಮ್ಮ ಎಂಬ ಮಹಿಳೆಯ ಜತೆ ವಿವಾಹವಾಗಿತ್ತು. ಆದರೆ, ಮಗನ ವಿವಾಹದ ಬಗ್ಗೆ ಜಯಮ್ಮ ಅಸಮಧಾನ ಹೊಂದಿದ್ದಳು. ಅತ್ತೆ-ಸೋಸೆಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜಗಳದಲ್ಲಿ ಮಗುವಿಗೆ ಹುಚ್ಚು ನಾಯಿ ಕಡಿದ ವಿಷಯವನ್ನು ಅತ್ತೆ ಬಚ್ಚಿಟ್ಟಿದ್ದರು. ಇದೀಗ ಒಂದು ಎಡವಟ್ಟು ಮಗುವಿನ ಪ್ರಾಣ ಕಸಿದಿದ್ದು, ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.(ದಿಗ್ವಿಜಯ ನ್ಯೂಸ್​)
ಹಾಟ್​​​ ಡ್ರೆಸ್​ ನೋಡಿ ತಮ್ಮ ಮೇಲೆ ಮುಗಿಬಿದ್ದ ವಿರೋಧಿಗಳಿಗೆ ಸಮಂತಾ ಕೊಟ್ಟ ಮಾತಿನ ಪಂಚ್​ ಹೀಗಿದೆ…

ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸೌತ್​ ಬ್ಯೂಟಿ ವರು! ವಿಡಿಯೋ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

ದಕ್ಷಿಣ ಭಾರತದ ನಟಿಯರ ಜತೆ ಬಾಲಿವುಡ್​ ನಟ ವರುಣ್​ಗೆ ಏನು ಕೆಲಸ? ಫೋಟೋಗಳು ವೈರಲ್…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + seven =
Remember me
