ತುಮಕೂರು:ರಾಹುಲ್​ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್​ ನಡೆಸುತ್ತಿರುವ ಭಾರತ್​ ಜೋಡೋ ಪಾದಯಾತ್ರೆ ರಾಜ್ಯದಲ್ಲಿ 7ನೇ ದಿನಕ್ಕೆ ಕಾಲಿಟ್ಟಿದೆ. ಯಾತ್ರೆಯು ಮಂಡ್ಯ ದಾಟಿ ಕಲ್ಪತರು ನಾಡು ತುಮಕೂರಿಗೆ ಎಂಟ್ರಿ ಕೊಟ್ಟಿದ್ದು, ಇಂದು ಬೆಳಗ್ಗೆ 7 ಗಂಟೆಯಿಂದ ಭಾರತ್ ಜೋಡೋ ಯಾತ್ರೆ ಪುನಾರಂಭವಾಗಿದೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದಿಂದ ಯಾತ್ರೆ ಆರಂಭವಾಗಿದ್ದು, ಜಿಲ್ಲಾ ಕಾಂಗ್ರೆಸ್ ನಾಯಕರು ರಾಹುಲ್​ರನ್ನು ಭರ್ಜರಿಯಾಗಿ ಸ್ವಾಗತಿಸಿದರು. ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸಚಿವ ಟಿಬಿ ಜಯಚಂದ್ರ, ಶಾಸಕ ವೆಂಕಟರಮಣಪ್ಪ, ಡಾ.ರಂಗನಾಥ್, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಷಡಕ್ಷರಿ, ರಫಿಕ್ ಅಹ್ಮದ್, ಬೆಮೆಲ್ ಕಾಂತರಾಜು, ಸೇರಿದಂತೆ ಹಲವರಿಂದ ರಾಹುಲ್ ಗಾಂಧಿಗೆ ಆದರದ ಸ್ವಾಗತ ದೊರೆಯಿತು.
ಇಂದು ಭಾರತ್ ಯಾತ್ರೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಸೇರಿದ್ದಾರೆನ್ನಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ‌ ಯಾತ್ರೆ ನಡೆಯಲಿದೆ. ಇಂದು ಮೊದಲನೇ ದಿನದ ಯಾತ್ರೆ ಮಾಯಸಂದ್ರದಿಂದ ಪ್ರಾರಂಭವಾಗಿ ಟಿಬಿ ಕ್ರಾಸ್, ಅರಳಿಕೆರೆಪಾಳ್ಯ, ತುರುವೇಕೆರೆ, ಹರಿದಾಸನಹಳ್ಳಿಯಲ್ಲಿ ಅಂತ್ಯವಾಗಲಿದೆ. ರಾಹುಲ್​ ಸೇರಿದಂತೆ ಯಾತ್ರಿಗಳು ಬಾಣಸಂದ್ರದಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಭಾರಿ ಭದ್ರತೆತುಮಕೂರು ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ತುಮಕೂರು ಎಸ್.ಪಿ.ರಾಹುಲ್ ಕುಮಾರ್ ಶಹಪುರ್ ವಾಡ್ ನೇತೃತ್ವದಲ್ಲಿ ಬಿಗಿಭದ್ರತೆ ಕಲ್ಪಿಸಲಾಗಿದ್ದು, ಒಟ್ಟು 700 ಪೊಲೀಸರನ್ನು ನಿಯೋಜಿಸಲಾಗಿದೆ. ಎಸ್​ಪಿ-1, ಎಎಸ್​ಪಿ-2, ಡಿವೈಎಸ್​ಪಿ-5, ಪೊಲೀಸ್ ಇನ್ಸ್​ಪೆಕ್ಟರ್-20, ಕೆಎಸ್ಆರ್​ಪಿ ತುಕಡಿ-6, ಡಿಆರ್ ತುಕಡಿ-10 ಸೇರಿದಂತೆ ಒಟ್ಟು 700 ಪೊಲೀಸರನ್ನು ನಿಯೋಜಿಸಲಾಗಿದೆ.
ಯಾತ್ರೆಯಲ್ಲಿ ಕಾಣಿಸಿಕೊಂಡ ಜೆಡಿಎಸ್ ಶಾಸಕಜೆಡಿಎಸ್​ ಉಚ್ಛಾಟಿತ ಶಾಸಕ ಎಸ್​.ಆರ್​​.ಶ್ರೀನಿವಾಸ್​ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ. ತುರುವೇಕೆರೆ ತಾಲೂಕಿನಲ್ಲಿ ಸಾಗುತ್ತಿರುವ ಪಾದಯಾತ್ರೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದರು. ಈ ಮೂಲಕ ತಮ್ಮ ಮುಂದಿನ ನಡೆ ಕಾಂಗ್ರೆಸ್ ಸೇರ್ಪಡೆ ಎಂಬುದನ್ನ ಖಚಿತಪಡಿಸಿದರು. ಅಲ್ಲದೆ, ಜೆಡಿಎಸ್ ಪಕ್ಷದ ಕಾರ್ಯಕರ್ತರಗಿದ್ದ ಅನುಮಾನಕ್ಕೆ ತೆರೆ ಎಳೆದರು.
ಸ್ಥಳೀಯ ನಾಯಕರಿಗೆ ಅವಕಾಶರಾಹುಲ್ ಗಾಂಧಿ ಜೊತೆ ಸ್ಥಳೀಯ ನಾಯಕರು ಹೆಜ್ಜೆ ಹಾಕಲು ಕೆಪಿಸಿಸಿ ಅವಕಾಶ ಮಾಡಿಕೊಟ್ಟಿದೆ. ಮಾಜಿ‌ ಡಿಸಿಎಂ‌ ಡಾ.ಜಿ ಪರಮೇಶ್ವರ್, ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕ ರಫಿಕ್ ಅಹ್ನದ್, ಬೆಮೆಲ್ ಕಾಂತರಾಜು, ಸೇರಿದಂತೆ ತುಮಕೂರು ಜಿಲ್ಲಾ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುತ್ತಿದ್ದಾರೆ.
ಮೀಸಲು ಪ್ರಮಾಣ ಹೆಚ್ಚಳದ ತಳಮಳ: ಶೇ.50 ಮೀಸಲಾತಿ ಗಡಿ ಮೀರುವ ಆತಂಕ

ಅಭಿವೃದ್ಧಿಯಲ್ಲಿ ಜನ-ಮನ ಗೆಲ್ಲುವ ಪಣ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ದೃಢ ಸಂಕಲ್ಪ

ವಾಯುಪಡೆ ವೈಭವ: ಭಾರತೀಯ ವಾಯುಪಡೆ ದಿನ ಇಂದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
