ಉಡುಪಿ:ಉಡುಪಿಯ ಸರ್ಕಾರಿ ಮಹಿಳಾ ಜೂನಿಯರ್ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ತರಗತಿಯಲ್ಲಿ ಹಿಜಾಬ್​ ಹಾಕಿಕೊಂಡು ಕೂರುತ್ತಿದ್ದೆವು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಫೋಟೋ ಬಗ್ಗೆ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಸ್ಪಷ್ಟನೆ ನೀಡಿದ್ದಾಳೆ.
ತರಗತಿಯಲ್ಲಿ ಹಿಜಾಬ್ ಹಾಕಿಕೊಂಡೆ ಕೂರುತ್ತಿದ್ದೆವು ಎಂದು ಹಳೆಯ ಫೋಟೋವನ್ನು ಯುವತಿಯರು ವೈರಲ್ ಮಾಡಿದ್ದಾರೆ. ಆ ಫೋಟೋವನ್ನು ಸಿಎಫ್​ಐ ಸಂಘಟನೆಯ ಕಾರ್ಯಕರ್ತರು ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಆದರೆ, ಈ ಬಗ್ಗೆ ಮಾತನಾಡಿರುವ ಅದೇ ಕಾಲೇಜಿನ ವಿದ್ಯಾರ್ಥಿನಿ ವೈರಲ್ ಆಗುತ್ತಿರುವ ಫೋಟೋ ನಮ್ಮ ತರಗತಿಯದಲ್ಲ ಎಂದಿದ್ದಾಳೆ. ನಮ್ಮ ತರಗತಿಯಲ್ಲಿ ಹಿಜಾಬ್ ಹಾಕಿ ಕೂರಲು ಅವಕಾಶವೇ ಇಲ್ಲ. ಕೇವಲ ಫೋಟೋ ತೆಗೆಯುವ ಉದ್ದೇಶದಿಂದ ಹಿಜಾಬ್ ಹಾಕಿ ಕುಳಿತಿರಬಹುದು ಎಂದು ಹೇಳಿದ್ದಾಳೆ.
ಈ ವಿವಾದದಿಂದಾಗಿ ನಮ್ಮ ಶೈಕ್ಷಣಿಕ ಜೀವನವೇ ಹಾಳಾಗಿದೆ. ಈ ವಿವಾದವನ್ನು ಆದಷ್ಟು ಬೇಗ ಬಗೆಹರಿಸಿ ಕಾಲೇಜು ಆರಂಭಿಸಿ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಮೂವರ ವಿದ್ಯಾರ್ಥಿನಿ ಸಹಪಾಠಿ ಹೇಳಿಕೆ ನೀಡಿದ್ದಾಳೆ.(ದಿಗ್ವಿಜಯ ನ್ಯೂಸ್​)
6 ವರ್ಷದ ಬಳಿಕ ಟೈರ್​ನಿಂದ ಮೊಸಳೆಗೆ ಬಿಡುಗಡೆ! ಸರ್ಕಾರದಿಂದ ಆಗದ ಕೆಲ್ಸವನ್ನು ಈತನೊಬ್ಬನೇ ಸಾಧಿಸಿದ್ಹೇಗೆ?

ಬಟ್ಟೆ ಮೇಲಿಂದ ಮುಟ್ಟಿದ್ರೆ ಲೈಂಗಿಕ ದೌರ್ಜನ್ಯವಲ್ಲ: ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಮೂರ್ತಿ ರಾಜೀನಾಮೆ

ಕೋಲಾರದಲ್ಲಿ ಆರತಕ್ಷತೆ ವೇಳೆ ಕುಸಿದುಬಿದ್ದು ವಧುವಿನ ಬ್ರೈನ್​ ಡೆಡ್: ಸಂಕಷ್ಟದಲ್ಲೂ ಮಾನವೀಯತೆ ಮೆರೆದ ಪಾಲಕರು

ಹಳೇ ನೆನಪಲ್ಲಿ ಹೊಸ ಹಾವಳಿ…: ವಿಜಯವಾಣಿ ಸಿನಿಮಾ ವಿಮರ್ಶೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 8 =
Remember me
