ಉಡುಪಿ:ಅಪಹರಣ ನಾಟಕವಾಡಿ, ಮನೆಯವರಿಂದಲೇ ಹಣಕ್ಕೆ ಬೇಡಿಕೆ ಇಟ್ಟಿದ್ದ ಖತರ್ನಾಕ್​ ಯುವಕನನ್ನು ಉಡುಪಿ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ವರುಣ್ ನಾಯಕ್ ವಂಚಕ ಯುವಕ. ಕಿಡ್ನಾಪ್ ಆಗಿದೆ ಎಂದು ಪಾಲಕರನ್ನೇ ಯಾಮಾರಿಸಿದ್ದ. ನನ್ನನ್ನು ಅಪಹರಿದ್ದಾರೆ ಐದು ಲಕ್ಷ ಕೊಡಿ ಎಂದು ಅಮ್ಮನಿಗೆ ಕರೆ ಮಾಡಿದ್ದ. ಇದರಿಂದ ಗಾಬರಿಗೊಂಡ ಪಾಲಕರು ಉಡುಪಿ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಅಪಹರಣ ಕೇಸ್ ಪತ್ತೆಹಚ್ಚಲು ಪೊಲೀಸರ ತಂಡ ರಚನೆ ಮಾಡಿ ಕಾರ್ಯಾಚರಣೆಗೆ ಇಳಿದಿತ್ತು. ಲೊಕೇಶನ್​ ಪತ್ತೆ ಹಚ್ಚಿದಾಗ ಯುವಕ ಗೋವಾದಲ್ಲಿ ಇರುವುದು ತಿಳಿದುಬಂದಿತ್ತು. ತಕ್ಷಣ ಲೊಕೇಶನ್​ ಬೆನ್ನತ್ತಿ ಗೋವಾಗೆ ತೆರಳಿದ ಪೊಲೀಸರ ತಂಡಕ್ಕೆ ಶಾಕ್​ ಎದುರಾಗಿತ್ತು. ಏಕೆಂದರೆ, ಕಿಡ್ನಾಪ್ ಆಗಿದ್ದೇನೆಂದು ಹೇಳಿಕೊಂಡಿದ್ದ ಚರಣ್​, ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದ.
ಗೋವಾದ ಕ್ಯಾಸಿನೋದಲ್ಲಿ ಆಟವಾಡುತ್ತಿದ್ದ ಚರಣ್​ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ, ಪಾಲಕರ ಬಳಿಯಿದ್ದ ಹಣವನ್ನು ದೋಚಲು ಕಿಡ್ನಾಪ್​ ನಾಟಕ ಆಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪಾಲಕರ ಹಣ ಎಗರಿಸುವ ಸಂಚು ಹಾಗೂ ಪೊಲೀಸರ ಸಮಯ ವ್ಯರ್ಥ ಮಾಡಿದ್ದಕ್ಕೆ ಕೇಸ್ ದಾಖಲಿಸಲಾಗಿದ್ದು, ವಂಚಕ ಯುವಕನನ್ನು 15 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಬ್ಯಾಂಕ್​ ಮ್ಯಾನೇಜರ್​ನ 5.70 ಕೋಟಿ ರೂ. ರಹಸ್ಯ ಬಯಲು: ಒಂದೆರಡಲ್ಲ, 8 ಮಹಿಳೆಯರು… ಈತನ ಲೀಲೆ ಕೇಳಿ ಪೊಲೀಸರೇ ಶಾಕ್

ತಮ್ಮ ಸಿನಿ ಜೀವನದ ಅತ್ಯಂತ ಕೆಟ್ಟ ಸಿನಿಮಾದ ಹೆಸರನ್ನು ಬಹಿರಂಗಪಡಿಸಿದ ನಟಿ ಪೂಜಾ ಹೆಗ್ಡೆ!

VIDEO: ರೀಲ್ಸ್​ ಮಾಡುವವರೇ ಹುಷಾರ್​! ಇನ್​ಸ್ಟಾ ಮೇಲೆ ಖಾಕಿ​ ಕಣ್ಣು: ಬೆಂಗಳೂರಿನ ಟಿಕ್​ಟಾಕ್​ ಸ್ಟಾರ್​ಗೆ ಬಿತ್ತು ಭಾರಿ ದಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eleven =
Remember me
