ಕಲಬುರಗಿ:ಯೂಕ್ರೇನ್​ ಮೇಲೆ ರಷ್ಯಾ ದಾಳಿ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಯೂಕ್ರೇನ್​ನಲ್ಲಿ ಸಂಪೂರ್ಣ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ವಿಮಾನ ಸಂಚಾರ ರದ್ದಾಗಿದ್ದು ರಾಜ್ಯದ ಕೆಲ ವಿದ್ಯಾರ್ಥಿಗಳು ಅಲ್ಲಿಯೇ ಸಿಲುಕಿ ಜೀವ ಭಯದಲ್ಲಿ ಸಮಯ ಕಳೆಯುತ್ತಿದ್ದಾರೆ.
ಯೂಕ್ರೇನ್​ನ ಪ್ರಮುಖ ನಗರಗಳಲ್ಲಿ ಒಂದಾದ ಹಾಗೂ ರಷ್ಯಾ ದಾಳಿ ಮಾಡಿದ ನಗರವಾದ ಕಾರ್ಕಿವ್​ನಲ್ಲಿ ಕಲಬುರಗಿಯ ಮೂವರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಎಂಬಿಬಿಎಸ್​ ವಿದ್ಯಾರ್ಥಿಗಳಾದ ಮಲ್ಲಿನಾಥ್, ಶಶಾಂಕ್ ಹಾಗೂ ಜೀವಿತಾ ಯೂಕ್ರೇನ್​ನಲ್ಲಿ ಜೀವ ಭಯದಲ್ಲಿ ದಿನದೂಡುತ್ತಿದ್ದಾರೆ.
ಇನ್ನು ಮೂವರು ವಿದ್ಯಾರ್ಥಿಗಳು ಇರುವ ಪ್ರದೇಶದ ಕೂಗಳತೆಯ ದೂರದಲ್ಲೇ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ದಕ್ಕೆ ಹಾಸ್ಟೆಲ್​ ನಡುಗಿದ ಅನುಭವವಾಗಿದ್ದು, ವಿದ್ಯಾರ್ಥಿಗಳು ಬೆಚ್ಚಿ ಬಿದಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳು ಉಳಿದುಕೊಂಡಿರುವ ಹಾಸ್ಟೆಲ್​ನ ಕಿಟಕಿ, ಗಾಜುಗಳು ಹೊಡೆದಿದ್ದು, ಕೋಣೆಗಳು ಬಿರುಕುಗೊಂಡು ಹಿನ್ನೆಲೆಯಲ್ಲಿ ಅವರನ್ನು ಆಶ್ರಯ ಶಿಬಿರಗಳಿಗೆ ಸ್ಥಳಾಂತರ ಮಾಡಲಾಗಿದೆ.
ಇದೀಗ ವಿದ್ಯಾರ್ಥಿಗಳು ಆತಂಕದಲ್ಲೆ ತಮ್ಮ ಗಂಟು-ಮೂಟೆ ಕಟ್ಟಿಕೊಂಡು ಹಾಸ್ಟೆಲ್​ನ ಅಂಡರ್​ಗ್ರೌಂಡ್​ನಲ್ಲಿರುವ ಶೆಲ್ಟರ್ ಹೌಸ್​ಗೆ ಸ್ಥಳಾಂತರವಾಗಿದ್ದಾರೆ.(ದಿಗ್ವಿಜಯ ನ್ಯೂಸ್​)
ಯೂಕ್ರೇನ್​-ರಷ್ಯಾ ಕದನ ಕಾರ್ಮೋಡ: ಯೂಕ್ರೇನಲ್ಲಿ ಸಿಲುಕಿರುವ ರಾಯಚೂರಿನ 6 ವಿದ್ಯಾರ್ಥಿಗಳು, ಪಾಲಕರಿಗೆ ಆತಂಕ

ಯೂಕ್ರೇನ್​-ರಷ್ಯಾ ಯುದ್ಧ: ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿ ಪ್ರಧಾನಿ ಮೋದಿ ಹೇಳಿದ್ದಿಷ್ಟು…

ಕೆನಡಾ ಗರ್ಲ್​ಫ್ರೆಂಡ್ ಜತೆ ಬ್ರೇಕಪ್​ ಬೆನ್ನಲ್ಲೇ ಆಸ್ಟ್ರೇಲಿಯಾದ 27ರ ನಟಿ ಜತೆ 50ರ​ ಎಲಾನ್​ ಮಸ್ಕ್ ಡೇಟಿಂಗ್!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 5 =
Remember me
