ಉತ್ತರಕನ್ನಡ:ಕೆಲ ದಿನಗಳ ಹಿಂದೆ ಯುವಕನ್ನು ಬಲಿ ಪಡೆದಿದ್ದ ಮೊಸಳೆ ಇದೀಗ ನೀರು ಕುಡಿಯಕಲು ಬಂದ ಜಿಂಕೆಯನ್ನು ಬೇಟೆಯಾಗಿರುವ ಘಟನೆ ದಾಂಡೇಲಿಯ ಪಟೇಲ್​ ನಗರದ ಬಳಿ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಜಿಂಕೆ ತನ್ನ ದಾಹ ತೀರಿಸಿಕೊಳ್ಳಲು ಕಾಳಿನದಿಗೆ ಇಳಿದಿತ್ತು. ಈ ವೇಳೆ ಜಿಂಕೆಯನ್ನು ನೀರಿನಲ್ಲಿ ಅಟ್ಟಾಡಿಸಿ ಮೊಸಳೆ ಬೇಟೆಯಾಡಿದೆ. ಸ್ಥಳೀಯರು ಸಾಕಷ್ಟು ಕೂಗಾಡಿ ಜಿಂಕೆಯನ್ನು ಕಾಪಾಡಲು ಪ್ರಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಉತ್ತರಕನ್ನಡ: ಕೆಲ ದಿನಗಳ ಹಿಂದೆ ಯುವಕನ್ನು ಬಲಿ ಪಡೆದಿದ್ದ ಮೊಸಳೆ ಇದೀಗ ನೀರು ಕುಡಿಯಕಲು ಬಂದ ಜಿಂಕೆಯನ್ನು ಬೇಟೆಯಾಗಿರುವ ಘಟನೆ ದಾಂಡೇಲಿಯ ಪಟೇಲ್​ ನಗರದ ಬಳಿ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.#UttaraKannada#Dandeli#KaliRiver#YoungMan#Death#Crocodileattack#Deerpic.twitter.com/STvWmraw6R
— Vijayavani (@VVani4U)February 19, 2022

ಕೆಲ ದಿನಗಳ ಹಿಂದೆ ಇದೇ ಮೊಸಳೆ ಅರ್ಷದ್ ಖಾನ್ ರಾಯಚೂರ್ (22) ಎಂಬ ಯುವಕನನ್ನು ಬಲಿ ಪಡೆದಿತ್ತು. ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಪಟೇಲ್ ನಗರದ ನಿವಾಸಿಯಾಗಿದ್ದ ಅರ್ಷದ್​ ಖಾನ್​, ದಿನನಿತ್ಯದ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕಾಳಿ ನದಿಯ ದಡಕ್ಕೆ ಹೋಗಿದ್ದ. ನೀರಿಗೆ ಕೈ ಹಾಕುತ್ತಿದ್ದಂತೆ ಮೊಸಳೆ ದಾಳಿ ಮಾಡಿ ಆತನನ್ನು ಎಳೆದೊಯ್ದಿತ್ತು.
ಮೃತ ಯುವಕನ ಸ್ನೇಹಿತ ಈ ಮಾಹಿತಿ ನೀಡಿದ್ದ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಯುವಕನ ದೇಹಕ್ಕಾಗಿ ಹುಡುಕಾಟ ನಡೆಸಿದರೂ ಆತನ ಪತ್ತೆ ಸಾಧ್ಯವಾಗಲಿಲ್ಲ.
ಯುವಕನ ಬೆನ್ನಲ್ಲೇ ಜಿಂಕೆಯನ್ನು ಮೊಸಳೆ ಬೇಟೆಯಾಡಿರುವ ದೃಶ್ಯ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸ್ಥಳೀಯರು ತುಂಬಾ ಆತಂಕಕ್ಕೀಡಾಗಿದ್ದಾರೆ. ಕಾಳಿ ನದಿಯ ಸಮೀಪ ಎಚ್ಚರಿಕೆ ವಹಿಸುವಂತೆ ಕರೆ ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಕೈ-ಕಾಲು ತೊಳೆಯಲು ಕಾಳಿ ನದಿ ದಡಕ್ಕೆ ಹೋದವನನ್ನು ಎಳೆದೊಯ್ದ ಮೊಸಳೆ: ದಾಂಡೇಲಿ ಯುವಕನ ದುರಂತ ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six − one =
Remember me
