ಬೆಂಗಳೂರು:ವಿಧಾನಸೌಧ ಜಂಟಿ ಅಧಿವೇಶನದ ಹಿನ್ನೆಲೆಯಲ್ಲಿ ಫೆ.14ರಿಂದ 25ರ ವರೆಗೆ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ತಡರಾತ್ರಿ 12 ಗಂಟೆ ವರೆಗೂ ವಿಧಾನಸೌಧ ಸುತ್ತ 2 ಕಿ.ಮೀಟರ್ ನಿಷೇಧಾಜ್ಞೆ ವಿಧಿಸಿ ಪೊಲೀಸ್ ಇಲಾಖೆ ಆದೇಶಿಸಿದೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಈ ಆದೇಶ ಹೊರಡಿಸಿದ್ದಾರೆ. ಜಂಟಿ ಅಧಿವೇಶನದ ಕಾರ್ಯ ಕಲಾಪ ಸುಗಮವಾಗಿ ನಡೆಸುವ ಸಲುವಾಗಿ ನಿಷೇಧಾಜ್ಞೆ ವಿಧಿಸಲಾಗಿದೆ. ಈ ಸಮಯದಲ್ಲಿ ಕಾನೂನುಭಂಗ ಉಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಮೆರವಣಿಗೆ ಮತ್ತು ಸಭೆಗಳನ್ನು ನಡೆಸುವುದು, ಶಸ, ದೊಣ್ಣೆ, ಕತ್ತಿ, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಮುಂತಾದ ಮಾರಕಾಸಗಳನ್ನು ಸಾಗಿಸುವುದು ನಿರ್ಬಂಧಿಸಲಾಗಿದೆ.
ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲು, ಕ್ಷಿಪಣಿಗಳನ್ನು ಎಸೆಯುವ ಸಾಧನಗಲ ಅಥವಾ ಉಪಕರಣಗಳ ಸಂಗ್ರಹ, ಸಾಗಾಟ ನಿಷೇಧಿಸಲಾಗಿದೆ. ವ್ಯಕ್ತಿಗಳ, ಶವಗಳ ಪ್ರತಿಕೃತಿ ಪ್ರದರ್ಶನ, ಪ್ರಚೋದಾನತ್ಮಕ ಹೇಳಿಕೆ, ಬಹಿರಂಗ ಸಭೆ, ಘೋಷಣೆ ಕೂಗುವಂತಿಲ್ಲ. ಭಿತ್ತಿ ಪತ್ರ, ಸಂಗೀತ ನುಡಿಸುವುದು, ಹಾಡುವುದನ್ನು ನಿರ್ಬಂಧಿಸಿ ಆದೇಶಿಸಿದ್ದಾರೆ. ನಿಯಮ ಉಲ್ಲಂಸಿದರೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಕಮಿಷನರ್ ಎಚ್ಚರಿಸಿದ್ದಾರೆ.
ಶಬ್ದವೇಧಿಗೆ 22; 2000ರ ಫೆ. 10ರಂದು ಬಿಡುಗಡೆ ಆಗಿದ್ದ ಸಿನಿಮಾ..

ಕಚ್ಚಾ ಬಾದಾಮ್ ಹಾಡಿಗೆ ಕುಣಿದ ಅಲ್ಲು ಪುತ್ರಿ ಅರ್ಹಾ! ವಿಡಿಯೋ ವೈರಲ್…

ಜೆಎಂಬಿ ಉಗ್ರರಿಗೆ ಜೈಲು ಶಿಕ್ಷೆ: ಮೂವರಿಗೆ ಜೀವಾವಧಿ, ಐವರಿಗೆ 10 ವರ್ಷ ಜೈಲು ಸಜೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 2 =
Remember me
