ವಿಜಯಪುರ:ಇದೇ ತಿಂಗಳು ಮೇ.23 ರಂದು ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿರಿಸಬೇಕಿದ್ದ ಮುದ್ದೇಬಿಹಾಳ ಪಟ್ಟಣದ ಯುವತಿ ಕೋವಿಡ್ ಸೋಂಕಿಗೆ ಬಲಿಯಾಗಿರುವ ಘಟನೆ ನಡೆದಿದೆ.
ಪಟ್ಟಣದ ವಿಬಿಸಿ ಹೈಸ್ಕೂಲ್ ಶಿಕ್ಷಕ ಸುಭಾಷ ಐಹೊಳ್ಳಿ ಅವರ ಪುತ್ರಿ ಶ್ರುತಿ ಐಹೊಳ್ಳಿ (24) ಕೋವಿಡ್ ಸೋಂಕಿಗೆ ಬಲಿಯಾದವರು.
ಬಿಎಸ್ಸಿ, ಬಿಎಡ್ ಪದವೀಧರೆಯಾಗಿದ್ದ ಶ್ರುತಿ ಗಣಿತ ವಿಷಯದಲ್ಲಿ ಪಾಂಡಿತ್ಯ ಹೊಂದಿದ್ದರು. ಮುದ್ದೇಬಿಹಾಳ ಕೆಪಿಬಿಎಂಪಿಎಸ್ ಶಾಲೆಯಲ್ಲಿ ಎರಡು ವರ್ಷಗಳ ಕಾಲ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಪಟ್ಟಣ ಪ್ರದೇಶದಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಸ್ವಗ್ರಾಮದಲ್ಲಿ ತೆರಳಿ ವಾಸವಾಗಿದ್ದರು.
ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಶ್ರುತಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮದುವೆಗೆ ಎಲ್ಲ ತಯಾರಿ ಮಾಡಿಕೊಂಡು ಬಟ್ಟೆ, ಚಿನ್ನಾಭರಣ ಖರೀದಿಸಿ ಮದುವೆಯ ಸಂಭ್ರಮದಲ್ಲಿದ್ದ ಮನೆ ಈಗ ಸೂತಕದ ಛಾಯೆ ಆವರಿಸಿದೆ.
ಮೃತ ಶ್ರುತಿಗೆ ತಂದೆ, ತಾಯಿ, ಸಹೋದರ, ಸಹೋದರಿ ಇದ್ದಾರೆ.(ದಿಗ್ವಿಜಯ ನ್ಯೂಸ್​)
ಕೋವಿಡ್​ಗೆ ಗರ್ಭಿಣಿ ಪತ್ನಿ ಬಲಿ: ಸಾವಿಗೂ ಮುನ್ನ ಜನರಲ್ಲಿ ಮನವಿ ಮಾಡಿದ ಪತ್ನಿಯ ವಿಡಿಯೋ ಹಂಚಿಕೊಂಡ ಪತಿ!

ಸೈಲೆಂಟ್ ಕಿಲ್ಲರ್ ಹ್ಯಾಪಿ ಹೈಪೋಕ್ಸಿಯಾ; ಯುವ ಸಮುದಾಯಕ್ಕೆ ಮಾರಕ

ನರ್ಸಗಳತ್ತ ಇಲ್ಲ ಸರ್ಕಾರದ ಗಮನ; ನಿಲ್ಲದ ತಾರತಮ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − twelve =
Remember me
