ವಿಜಯಪುರ:ಕಾಳರಾತ್ರಿ, ನಿರವ ಮೌನ, ನಾಯಿಗಳ ಬೊಗಳುವಿಕೆಯ ಸದ್ದು, ಗಾಬರಿಗೊಂಡು ಮನೆಯಿಂದ ಹೊರಬಂದ ನಿವಾಸಿಗಳಿಗೆ ಕಂಡಿದ್ದು ದೊಣ್ಣೆ ಹಿಡಿದುಕೊಂಡು, ಮುಸುಕು ಧರಿಸಿ ಹೊರಟಿದ್ದ ದಾಂಡಿಗರ ಪಡೆ….!
ಅಬ್ಬಾ ಏನಿದು? ಯಾರು ಈ ಮುಸುಕುಧಾರಿಗಳು? ಎಲ್ಲಿಗೆ ಹೊರಟಿದ್ದಾರೆ? ಎಂದು ಅರಿಯದ ಜನ ಆತಂಕದಿಂದಲೇ ಮನೆಯ ಬಾಗಿಲು, ಕಿಟಕಿ ಹಾಕಿಕೊಂಡು ಬೆಚ್ಚಗೆ ಮಲಗಿಕೊಂಡಿದ್ದಾರೆ. ಆದರೆ, ರಾತ್ರಿ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸರು ನಾಯಿಗಳ ಜೋರಾದ ಬೊಗಳುವಿಕೆಯ ಸದ್ದು ಕೇಳಿ ಆ ಬಡವಾಣೆಗೆ ಕಾಲಿಟ್ಟರೆ ಇದ್ದಕ್ಕಿದ್ದಂತೆ ಎಲ್ಲರೂ ಮಂಗಮಾಯ.
ವಿಜಯಪುರ: ಕಾಳರಾತ್ರಿ, ನಿರವ ಮೌನ, ನಾಯಿಗಳ ಬೊಗಳುವಿಕೆಯ ಸದ್ದು, ಗಾಬರಿಗೊಂಡು ಮನೆಯಿಂದ ಹೊರಬಂದ ನಿವಾಸಿಗಳಿಗೆ ಕಂಡಿದ್ದು ದೊಣ್ಣೆ ಹಿಡಿದುಕೊಂಡು, ಮುಸುಕು ಧರಿಸಿ ಹೊರಟಿದ್ದ ದಾಂಡಿಗರ ಪಡೆ….!#Vijayapura#Miscreants#DogsBarking#Night#VijayapuraPolicepic.twitter.com/qIBxUQsIEQ
— Vijayavani (@VVani4U)July 30, 2022

ಅಂದ ಹಾಗೆ ಇದು ನಡೆದಿದ್ದು ಗುಮ್ಮಟ ನಗರಿ ಖ್ಯಾತಿಯ ವಿಜಯಪುರದ ಕನಕದಾಸ ಬಡಾವಣೆಯಲ್ಲಿ. ಕಳದೊಂದು ವಾರದ ಹಿಂದೆಯೇ ಇಂಥದ್ದೊಂದು ಚಿತ್ರಣ ಕಂಡು ಬಂದಿದ್ದು ಇದೀಗ ಸಿಸಿ ಟಿವಿ ದೃಶ್ಯಾವಳಿಗಳು ನಗರವಾಸಿಗಳನ್ನು ಬೆಚ್ಚಿ ಬೀಳಿಸಿದೆ.
ಬನಿಯನ್ ಹಾಗೂ ಚಡ್ಡಿ ಮೇಲಿದ್ದ ಆರೇಳು ದಾಂಡಿಗರು ದೊಡ್ಡದೊಂದು ದೊಣ್ಣೆ ಹಿಡಿದುಕೊಂಡು ಬಡಾವಣೆಯಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಂತೂ ನಿಜ. ಆದರೆ, ಯಾವುದೇ ಕುಕೃತ್ಯ ನಡೆದಿಲ್ಲ ಎಂಬುದೇ ಸಮಾಧಾನ ಸಂಗತಿ. ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಇದೀಗ ರಾತ್ರಿ ಪೆಟ್ರೋಲಿಂಗ್ ವ್ಯವಸ್ಥೆ ಬಿಗಿಗೊಳಿಸಿದ್ದಾರೆ. ಮುಫ್ತಿಯಲ್ಲಿ ಪೊಲೀಸರು ಕಾರ್ಯಾಚರಿಸುತ್ತಿದ್ದಾರೆ. ಲಾಡ್ಜ್‌ಗಳನ್ನು ಚೆಕ್ ಮಾಡಲಾಗಿದೆ.
VIDEO| ವೃದ್ಧರೊಬ್ಬರ ಮೇಲೆ ಮನಬಂದಂತೆ ಥಳಿಸಿದ ಕಾನ್ಸ್​ಟೇಬಲ್​: ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ

ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಗೇಮ್: ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಾಗ್ದಾಳಿ

ನೌಕರರಿಗೆ ಟೆಸ್ಟ್ ಟೆನ್ಶನ್!; ಕಂಪ್ಯೂಟರ್ ಸಾಕ್ಷರತೆ ಕಡ್ಡಾಯ, ಇನ್ನೂ ಪಾಸಾಗಿಲ್ಲ ಹಲವರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − six =
Remember me
