ವಿಜಯಪುರ:ತಡರಾತ್ರಿ ಪ್ಲಾಸ್ಟಿಕ್ ಅಂಗಡಿಯಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ‌ ಅವಘಡದಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ. ನಿಡಗುಂದಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಬಸವನ ಬಾಗೇವಾಡಿ ಕ್ರಾಸ್ ಬಳಿ ಘಟನೆ ನಡೆದಿದೆ.
ಮೃತರನ್ನು ರಾಜಸ್ಥಾನ ಮೂಲದ ಅಶೋಕ ದೇಸ್ನೂಯಿ (25), ಲಿಂಬಾರಾಮ ದೇಸ್ನೂಯಿ(35) ಎಂದು ಗುರುತಿಸಲಾಗಿದೆ. ಹೆದ್ದಾರಿ ಪಕ್ಕದಲ್ಲಿದ್ದ ಎರಡು ಪ್ಲಾಸ್ಟಿಕ್ ಅಂಗಡಿಗಳು ಸುಟ್ಟು ಭಸ್ಮವಾಗಿದೆ. ರಾತ್ರಿ ಅಂಗಡಿಯಲ್ಲೇ ಮಲಗಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ‌ ಆಗಮಿಸಿ ಬೆಂಕಿ‌ ನಂದಿಸಿದ್ದು, ಅದೇ ಸಾಲಿನಲ್ಲಿದ್ದ ಏಳೆಂಟು ಪ್ಲಾಸ್ಟಿಕ್ ಅಂಗಡಿಗಳನ್ನು ರಕ್ಷಣೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ನಿಡಗುಂದಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ನಾನಿನ್ನೂ ಜೀವಂತವಾಗಿದ್ದೇನೆ ಅಂದ್ರೆ ಈ ಇಬ್ಬರು ಕಾರಣ! ಚರ್ಚೆ ಹುಟ್ಟುಹಾಕಿದ ಸಮಂತಾ ಹೇಳಿಕೆ

ವಾಹನ ಸವಾರರಿಗೆ ಮಾತ್ರವಲ್ಲ ಇನ್ಮುಂದೆ ಪಾದಾಚಾರಿಗಳಿಗೂ ಬೀಳಲಿದೆ ದಂಡ..!

ವರನಿಗೆ 85, ವಧುವಿಗೆ 65: ಅಜ್ಜನಿಗೆ ಮದುವೆ ಮಾಡಿಸಿದ ಮೊಮ್ಮಕ್ಕಳು- ಮೈಸೂರಲ್ಲೊಂದು ಅಪರೂಪದ ವಿವಾಹ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 − 4 =
Remember me
