ವಿಜಯಪುರ:ಮಳೆ ಬರಲಿ ಎಂದು ಏನೇನೋ ವಿಚಿತ್ರ ಆಚರಣೆಗಳನ್ನು ಮಾಡುವುದು ಹಲವೆಡೆ ಇನ್ನೂ ಪ್ರಚಲಿತದಲ್ಲಿವೆ. ಆದರೆ ಇಲ್ಲೊಂದು ಕಡೆ ಮಳೆ ಬರಲಿ ಎಂಬ ಕಾರಣಕ್ಕೆ ಬಾಲಕಿಯರಿಬ್ಬರಿಗೆ ಮದುವೆ ಮಾಡಿಸಿದ್ದಾರೆ.
ಈ ವಿಚಿತ್ರ ಪ್ರಸಂಗ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಹಟ್ಟಿ ಓಣಿಯಲ್ಲಿ ನಡೆದಿದೆ. ರಾಜ್ಯದಲ್ಲಿ ಮಳೆಯಾಗದ ಕಾರಣ ವರುಣನ ಕೃಪೆಗಾಗಿ ಮಕ್ಕಳ ಮದುವೆ ಮಾಡಲಾಗಿದೆ. ಹೆಣ್ಣು ಮಕ್ಕಳನ್ನೇ ವಧು-ವರರನ್ನಾಗಿ ಮಾಡಿ ಅವರಿಗೆ ಮದುವೆ ಶಾಸ್ತ್ರ ಮಾಡುವ ರೂಢಿ ಇದಾಗಿದೆ.
ಇಬ್ಬರು ಹೆಣ್ಣುಮಕ್ಕಳಲ್ಲಿ ಓರ್ವಳಿಗೆ ಗಂಡು ವೇಷ ಹಾಕಿ ಮದುವೆ ಮಾಡುವ ಸಂಪ್ರದಾಯವಾಗಿದ್ದು, ಮಾಮೂಲಿ ಮದುವೆಯಂತೆಯೇ ಹೆಣ್ಣು-ಗಂಡಿಗೆ ಅರಿಷಿಣ ಶಾಸ್ತ್ರ, ಮಾಂಗಲ್ಯ ಧಾರಣಾ ಸೇರಿದಂತೆ ಮದುವೆ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆಯಲಿದೆ.
ಮನೆಯ ಮುಂದೆ ಮಂಟಪ ಹಾಕಿಸಿ, ಹಾರ ಬದಲಾಯಿಸಿ, ಮಾಂಗಲ್ಯ ಧಾರಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಮದುವೆಗೆ ಆಗಮಿಸಿದ ಜನರಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಹಿರಿಯರೆಲ್ಲರು ಸೇರಿ ಸಂಪ್ರದಾಯದಂತೆ ಮಕ್ಕಳ ಮದುವೆ ಮಾಡಿದ್ದು, ಈ ಸುದ್ದಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.(ದಿಗ್ವಿಜಯ ನ್ಯೂಸ್​)
ಚಾರ್ಲಿ ಅಲ್ಲ.. ಇದು ಸುಹಾನಿ…

ವಿಮಾನ ಪ್ರಯಾಣ ಇನ್ನಷ್ಟು ದುಬಾರಿ

ಅಗ್ನಿಪಥಕ್ಕೆ ಅಗ್ನಿಪರೀಕ್ಷೆ; ಯೋಜನೆ ಕುರಿತ ಅನುಮಾನಕ್ಕೆ ಸ್ಪಷ್ಟನೆ ನೀಡಿದ ಕೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
