ಯಾದಗಿರಿ:ನಮ್ಮ ಕುಟುಂಬಸ್ಥರು ಮತ್ತು ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪ್ರೇಮಿಗಳಿಬ್ಬರು ನೋವು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಯಾದಗಿರಿ ಜಿಲ್ಲೆ ಹಳಿಗೇರ ಮೂಲದ ಭೀಮರಾಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಡ್ಲೆ ಮೂಲದ ಚಂದ್ರಕಲಾ ನಡುವೆ ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿರುವಾಗ ಸ್ನೇಹ ಬೆಸೆದಿತ್ತು. ಇಬ್ಬರ ಸ್ನೇಹ ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿ ಇಬ್ಬರು ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.
ಆದರೆ, ಮದುವೆ ಪಾಲಕರ ವಿರೋಧ ಹಿನ್ನೆಲೆಯಲ್ಲಿ ಯುವರಿ ಮನೆ ಬಿಟ್ಟು ಬಂದು ಯುವಕನೊಂದಿಗೆ ಮದುವೆಯಾಗಿ ಯಾದಗಿರಿಯಲ್ಲಿಯೇ ಉಳಿದು ಕೊಂಡಿದ್ದಳು. ಕಳೆದ ಜನವರಿ 31ರಂದು ಪ್ರೇಮಿಗಳಿಬ್ಬರು ಮದುವೆಯಾಗಿದ್ದಾರೆ. ವಿವಾಹ ಮಾಡಿಕೊಂಡ ಬಗ್ಗೆ ನೋಂದಣಿಯನ್ನು ಮಾಡಿಕೊಂಡಿದ್ದಾರೆ. ಆದರೆ, ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಯುವತಿ ಪಾಲಕರು ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದರು.
ಇದೀಗ ವಿಡಿಯೋ ಹರಿಬಿಟ್ಟಿರುವ ಪ್ರೇಮಿಗಳು ನಮ್ಮ ಮನೆಯವರು ಹಾಗೂ ಬೆಂಗಳೂರು ಪೊಲೀಸರು ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಕಿರುಕುಳ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತೆವೆಂದು ನೋವು ತೋಡಿಕೊಂಡಿದ್ದಾರೆ. ವಿಡಿಯೋವನ್ನು ಸಂಬಂಧಿಕರ ಮೊಬೈಲ್​ಗೆ ಕಳುಹಿಸಿದ್ದಾರೆ.
ಪೊಲೀಸರು ಹಾಗೂ ಯುವತಿಯ ಕುಟುಂಬಕ್ಕೆ ಹೆದರಿರುವ ಯುವಕನ ಕುಟುಂಬಸ್ಥರು ಇದೀಗ ಯಾರ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿದ್ದಾರೆ. ಇದೀಗ ವಿಡಿಯೋ ವೈರಲ್​ ಆಗಿದ್ದು, ಮುಂದು ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ. ಇಬ್ಬರು ವಯಸ್ಕರಾಗಿದ್ದು, ಇಬ್ಬರು ಒಪ್ಪಿ ಮದುವೆ ಆಗಿರುವುದರಿಂದ ಕಾನೂನಿನ ಪ್ರಕಾರ ಅವರಿಬ್ಬರ ಮದುವೆ ಅಧಿಕೃತ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರೇಮಿಗಳ ನೆರವಿಗೆ ಧಾವಿಸಬೇಕು. ಆದರೆ, ಇಲ್ಲಿ ಪೊಲೀಸರೇ ಪ್ರೇಮಿಗಳಿಗೆ ಕಿರುಕುಳ ನೀಡುತ್ತಿರುವುದು ವಿಪರ್ಯಾಸ.
ಪೊಲೀಸ್​ ವರಿಷ್ಠಾಧಿಕಾರಿ ಹೇಳಿದ್ದೇನು?ವೈರಲ್​ ವಿಡಿಯೋ ಬಗ್ಗೆ ಮಾತನಾಡಿರುವ ಯಾದಗಿರಿ ಎಸ್ಪಿ ವೇದಮೂರ್ತಿ, ಯುವಕ ಹಾಗೂ ಯುವತಿಗೆ ಹಾಗೂ ಯುವಕನ ಕುಟುಂಬಕ್ಕೂ ಸೂಕ್ತ ಭದ್ರತೆ ನೀಡಲಾಗುವುದು ಎಂದಿದ್ದಾರೆ. ಯಾರಾದರೂ ಬಂದು ನಮ್ಮನ್ನು ಸಂಪರ್ಕಿಸಿದ್ರೆ ಯಾದಗಿರಿ ಪೊಲೀಸ್ ವತಿಯಿಂದ ಸೂಕ್ತ ಭದ್ರತೆ ಕಲ್ಪಿಸಲಾಗುವುದು. ಯಾವುದೇ ಭಯ ಬೇಡ. ಧೈರ್ಯವಾಗಿ ಬನ್ನಿ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಎಸ್ಪಿ ವೇದಮೂರ್ತಿ ಧೈರ್ಯ ತುಂಬಿದ್ದಾರೆ.(ದಿಗ್ವಿಜಯ ನ್ಯೂಸ್​)
ಇಂಥವ್ರೂ ಇರ್ತಾರೆ ಎಚ್ಚರ! ಭೇಟಿಯಾಗಲು ಬಂದ ಯುವ ಉದ್ಯಮಿಗೆ ಮತ್ತು ಬರಿಸಿ ಈಕೆ ಮಾಡಿದ್ದು ನೀಚ ಕೃತ್ಯ

ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ಹತ್ಯೆ: ಹಂತಕರ ಕೃತ್ಯಕ್ಕೆ ಬೆಚ್ಚಿಬಿದ್ದ ಮಂಡ್ಯ ಜನತೆ

ಜಾಲತಾಣದಲ್ಲಿ ಬೋಲ್ಡ್​ ಫೋಟೋ ಹರಿಬಿಟ್ಟ ಮಲಯಾಳಿ ಬ್ಯೂಟಿ ಮೀರಾ ಜಾಸ್ಮಿನ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
