ಯಾದಗಿರಿ:ಕರ್ತವ್ಯ ಸಮಯದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟು ಸ್ಥಳದಲ್ಲಿಯೇ ಹಣ ಸ್ವೀಕರಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸುರಪುರ ತಾಲೂಕಿನ ಅರಕೇರಾ (ಕೆ) ಗ್ರಾಮದ ಪಿಡಿಒ ದುರ್ಗಶ್ರೀ ಲಂಚ ಸ್ವೀಕರಿಸುತ್ತಿರುವ ಕ್ಷಣವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿರುವ ಸ್ಥಳೀಯರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇ-ಸ್ವತ್ತು ಮಾಡಿ ಕೊಡುವ ವಿಚಾರವಾಗಿ ಪಿಡಿಒಗೆ 5 ಸಾವಿರ ಹಾಗೂ ಕಂಪ್ಯೂಟರ್ ಆಪರೇಟರ್​ಗೆ 2 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಕಚೇರಿಯನ್ನು ಬಿಟ್ಟು ತಮ್ಮ ಮನೆಯಲ್ಲೇ ಲಂಚ ಸ್ವಿಕಾರ ಮಾಡುವಾಗ ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಪಂಚಾಯತ್​ನ ಎಲ್ಲ ಫೈಲ್​ಗಳನ್ನು ಮನೆಗೆ ತರಸಿಕೊಂಡು ಫೈಲ್​ಗೆ 5 ಸಾವಿರ ರೂ.ನಂತೆ ಲಂಚ ಸ್ವೀಕರಿಸುತ್ತಿದ್ದ ಆರೋಪ ಪಿಡಿಒ ವಿರುದ್ಧ ಕೇಳಿಬಂದಿದೆ.
ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಲಂಚ ಪಡೆದ‌ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಕನ್ನಡಪರ ಸಂಘಟನೆಗಳ ಒತ್ತಾಯ ಮಾಡಿವೆ.(ದಿಗ್ವಿಜಯ ನ್ಯೂಸ್​)
ತಮಿಳುನಾಡು ದೇವಸ್ಥಾನದಿಂದ 2012ರಲ್ಲಿ ಕಳುವಾಗಿದ್ದ 500 ವರ್ಷದ ಹಿಂದಿನ ಹನುಮನ ವಿಗ್ರಹ ಮರಳಿ ಭಾರತಕ್ಕೆ!

ಎ ಶ್ರೇಣಿ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ದೈವಸಂಕಲ್ಪ; ಮೊದಲ ಹಂತದಲ್ಲಿ 25 ದೇಗುಲಗಳ ಪುನರುಜ್ಜೀವನ

ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಅಭಾವ; ಮನೆಯಿಂದಲೇ ತರಬೇಕಾಗಿದೆ ಬುತ್ತಿ!

Sign in to your account
Please enter an answer in digits:11 − 1 =
Remember me
