ಆನೇಕಲ್:ಸೀರೆ ಉಟ್ಟುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನ ನೋಡಿ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿದು ಕಟ್ಟಿಹಾಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ನಲ್ಲಿ ಸೋಮವಾರ (ಏ.11) ರಾತ್ರಿ ನಡೆದಿದೆ.
ಆನೇಕಲ್ ಪಟ್ಟಣದ ಎಸ್.ಆರ್.ಆರ್ ಬಡಾವಣೆ ಅಕ್ಕಪಕ್ಕದಲ್ಲಿ ಕಳೆದ ರಾತ್ರಿ ಸೀರೆ ಕುಪ್ಪಸ ತೊಟ್ಟು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಯುವಕನ ಹಾವ-ಭಾವ ನೋಡಿ ಅನುಮಾನಗೊಂಡ ಸ್ಥಳೀಯರು, ಆತನನ್ನು ಹಿಡಿಯಲು ಹೋದಾಗ ಓಡಿ ಹೋಗಲು ಯತ್ನಿಸಿದ್ದ. ಆದರೂ ಯುವಕನನ್ನು ಹಿಡಿಯುವಲ್ಲಿ ಯಶಸ್ವಿಯಾದ ಸ್ಥಳೀಯರು ಸೀರೆ ಬಿಚ್ಚಿಸಿದಾಗ ಆತ ಮಹಿಳೆಯಲ್ಲ, ಯುವಕ ಎನ್ನುವುದು ಗೊತ್ತಾಗಿದೆ.
ವಿಚಿತ್ರವಾಗಿ ಆಡುತ್ತಿದ್ದನ್ನು ನೋಡಿ ಆತನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿಹಾಕಿದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಆನೇಕಲ್​ ಪೊಲೀಸರು ಯುವಕನ ವಿಚಾರಣೆ ನಡೆಸಿದಾಗ, ತನ್ನ ಹೆಸರು ಶ್ರೀಧರ್​. ಕೆಲಸ ಇರಲಿಲ್ಲ. ಅದಕ್ಕಾಗಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಿದ್ದೆ ಎಂದು ಹೇಳಿಕೊಂಡಿದ್ದಾ. ಆತನ ಹೇಳಿಕೆ ಕೇಳಿ ಒಂದು ಕ್ಷಣ ಸ್ಥಳೀಯರು ಮತ್ತು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದರು.
ಅಂದಹಾಗೆ ಶ್ರೀಧರ್​ ಬಾಗಲಕೋಟೆ ಮೂಲದ ಯುವಕ. ಬೆಂಗಳೂರಿನ ಜೆ.ಪಿ ನಗರದಲ್ಲಿ ವಾಸವಿದ್ದ. ಕೆಲದಿನಗಳಿಂದ ಕೆಲಸ ಇಲ್ಲದೆ ಅಲೆದಾಡಿದ್ದ. ಕೆಲಸ ಸಿಗದ ಹಿನ್ನೆಲೆಯಲ್ಲಿ ಹೊಟ್ಟೆಪಾಡಿಗಾಗಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಿದ್ದ. ಇಷ್ಟು ಮಾಹಿತಿಯನ್ನು ಪೊಲೀಸರ ತನಿಖೆ ವೇಳೆ ಶ್ರೀಧರ್​ ಹೇಳಿಕೊಂಡಿದ್ದಾನೆ. ಯುವಕನನ್ನು ವಶಕ್ಕೆ ಪಡೆದಿರುವ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ತೈಲ ತುಟ್ಟಿಗೆ ವಿರಾಮ?; ಬ್ಯಾರೆಲ್​ಗೆ 99 ಡಾಲರ್​ಗೆ ಇಳಿದ ಕಚ್ಚಾತೈಲ ದರ

ರಮೇಶ್ ಬದಲು ರವಿಚಂದ್ರನ್; ಮುಗಿಯಿತು ‘ಅಂದೊಂದಿತ್ತು ಕಾಲ’ ಚಿತ್ರೀಕರಣ

ಇಂದು ಆರ್‌ಸಿಬಿ-ಸಿಎಸ್‌ಕೆ ಮುಖಾಮುಖಿ; ಗೆದ್ದವರಿಗೆ ಸೋತವರ ಸವಾಲು!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eleven − seven =
Remember me
